ಮಹಲಿಂಗಪುರ

ಕೆಎಲ್ಇ ಕಾಲೇಜಿನಲ್ಲಿ ಪ್ರಭಾಕರ ಕೋರೆಯವರ ಜನ್ಮದಿನಾಚರಣೆ

ಕೆಎಲ್ಇ ಕಾಲೇಜಿನಲ್ಲಿ ಪ್ರಭಾಕರ ಕೋರೆಯವರ ಜನ್ಮದಿನಾಚರಣೆ

ಮಹಾಲಿಂಗಪುರ: ಶಿಕ್ಷಣ ಮಹರ್ಷಿ , ಮಾಜಿ ರಾಜ್ಯ ಸಭಾ ಸದಸ್ಯರಾರು, ಪ್ರತಿಷ್ಠಿತ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆಯವರ 76ನೇ ಜನ್ಮ ದಿನದ ನಿಮಿತ್ಯವಾಗಿ  ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಲಾ,ವಿಜ್ಞಾನ ಮತ್ತು ಡಿ.ಡಿ ಶಿರೋಳ ವಾಣಿಜ್ಯ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಸಸಿಗಳನ್ನು ನೇಡಲಾಯಿತ್ತು. 

ಸಾಂಸ್ಕೃತಿಕ ವಿಭಾಗದ ವತಿಯಿಂದ ಕಲಾ ಸಂಭ್ರಮ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಎ.ಎಮ್.ನರೋಡೆಯವರು ಬರೆದ ಕುವೆಂಪು ಕಾವ್ಯ ಶ್ರೀ ಟಿ.ಡಿ.ಡಂಗಿಯವರ ಮಾರ್ಗದರ್ಶನದಲ್ಲಿ ಇತಿಹಾಸ ವಿಭಾಗ ವಿದ್ಯಾರ್ಥಿನಿಯರ ಸಂಶೋಧನಾ ಪ್ರಬಂದ ಬೆಲ್ಲದ ನಾಡಿನ ಚಾರಿತ್ರಿಕ ಅಧ್ಯಯನ ಹಾಗೂ ಶ್ರೀ ಬಸವರಾಜ.ಎಮ್.ನಾಯಕ ರಚಿತ ಬಿಜಿನೇಸ್ ರೆಗ್ಯೂಲೇಟರ್ ಪ್ರೇಮ್ ವರ್ಕ ಗ್ರಂಥ ಬಿಡುಗಡೆ  ಮಾಡಲಾಯಿತ್ತು. 

ಮುಖ್ಯ ಅಥಿತಿಯಾಗಿ ಮಾತನಾಡಿದ ಸಿ.ಎಸ್.ಅಂಗಡಿ ಪಿಯು ಕಾಲೇಜ ಗೋಕಾಕನ ಕನ್ನಡ ವಿಭಾಗ ಉಪನ್ಯಾಸಕ ಬಿ.ಎಚ್.ಮಾರದ ಅವರು ಡಾ.ಪ್ರಭಾಕರ ಕೋರೆಯವರ ಶ್ರಮದ ಫಲವಾಗಿ ಕೆಎಲ್ಇ ಇಂದು ಇಷ್ಟು ದೂಡ್ಡ ಮಟ್ಟದಲ್ಲಿ ಬೆಳದಿದೆ. ಭಾರತದಲ್ಲಿ ಅಲ್ಲದೆ ದೇಶ ವಿದೇಶಗಳಲ್ಲಿ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.

 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಎಮ್.ಅವರಾದಿಯವರು ಡಾ.ಪ್ರಭಾಕರ ಕೋರೆಯವರು ಸರಳ ಸಜ್ಜನಿಕೆಯ ಮಾತೃ ಹೃದಯದ ವ್ಯಕ್ತಿತ್ವ ಹೊಂದಿದ್ದಾರೆ ಅವರ ಶಿಕ್ಷಣ ಕ್ಷೇತ್ರದಲ್ಲಿನ ಶಿಸ್ತಿನಿಂದಾಗಿ ನಾಡಿನಾದ್ಯಾಂತ ಹಲವಾರು ವಿಭಾಗದಲ್ಲಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

 ನಂತರ ಸಾಂಸ್ಕೃತಿಕ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಗಾಯನ ಮತ್ತು ನೃತ್ಯ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ನಿಡಲಾಯಿತ್ತು. ಸ್ಥಳೀಯ ಆಡಳಿತ ಮಂಡಳಿ ಸದಸ್ಯ ಎ.ಬಿ.ಅಂಗಡಿ, ಐಕ್ಯೂಎಸಿ ಸಂಯೋಜಕರಾದ ಡಾ. ಎಸ್.ಡಿ.ಸೊರಗಾಂವಿ, ವಿ.ಎಸ್.ಅಂಗಡಿ, ಎಮ್.ಎಮ್.ನಿಂಬರಗಿ.ಡಾ.ಎ.ಎಮ್.ನರೋಡೆ, ಸಿ.ಎಮ್.ಐಗಳಿ ಟಿ.ಡಿ.ಡಂಗಿ ಎ.ಎಮ್.ಉಗಾರೆ ವಿ.ಎ.ಅಡಹಳ್ಳಿ ಆರ್.ವಿ.ಚೌಗಲಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು 

ಸುದ್ದಿ ಓದಿ