ರಾಣೆಬೆನ್ನೂರ

ಕೋಳಿ ಸಾಕಾಣಿಕೆದಾರರ ಧರಣಿ

ಕೋಳಿ ಸಾಕಾಣಿಕೆದಾರರ ಧರಣಿ

ಲೋಕದರ್ಶನ ವರದಿ 

  ರಾಣೇಬೆನ್ನೂರ  05:  ರಾಣೆಬೆನ್ನೂರಿನ  ಕೃಷ್ಣಾಪುರ-ತೆರೆದಹಳ್ಳಿ ಗ್ರಾಮದ ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಪ್ರೈ.ಲಿ. ಕಂಪನಿಯ ಎದುರು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹಾವೇರಿ ಜಿಲ್ಲಾ ಕೋಳಿ ಸಾಕಾಣಿಕೆದಾರರ ಸಂಘದ ನೇತೃತ್ವದಲ್ಲಿ ಕೋಳಿ ಸಾಕಾಣಿಕೆದಾರರು ಧರಣಿ ನಡೆಸಿದರು.  

ಕೋಳಿಗಳಿಗೆ ಸೂಕ್ತ ಬೆಲೆ ನೀಡುತ್ತಿಲ್ಲ, ಸರ್ಕಾರ ನಿಗದಿಪಡಿಸಿರುವ ದರವನ್ನು ಜಾರಿಗೊಳಿಸಬೇಕು, ಗ್ರೋಯಿಂಗ್ ಚಾರ್ಜ್‌ ಹೆಚ್ಚಿಸಬೇಕು ಹಾಗೂ ಪರಿಷ್ಕೃತ ದರವನ್ನು ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಸಂಘದ ಮುಖಂಡರು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಹಾಗೂ ವಿವಿಧ ಜಿಲ್ಲೆಗಳ ಕೋಳಿ ಸಾಕಾಣಿಕೆದಾರರು ಭಾಗವಹಿಸಿದ್ದರು. 


ಸುದ್ದಿ ಓದಿ