ಪೋಸ್ಟ್ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಲು ಅಂಚೆ ಅಧಿಕಾರಿ ಶಿರೋಳ ಕರೆ
ವರದಿ: ಹನಮಂತ ನಾವಿ
ಮಹಾಲಿಂಗಪುರ 14: ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ದುರದೃಷ್ಟಕರ ಘಟನೆಗಳಿಂದ ಬದುಕಿಗೆ ಆಗುವ ನಷ್ಟಕ್ಕೆ ಸುರಕ್ಷತೆ ಪಡೆಯಲು ಇಂಡಿಯನ್ ಪೋಸ್ಟ್ ಪೇಮೇಂಟ್ ಬ್ಯಾಂಕ್ ಪ್ರಸ್ತುತ ಪಡಿಸುತ್ತಿರುವ ಟಾಟಾ ಎಜ್ ಸಮೂಹ ಅಪಘಾತ ಸುರಕ್ಷಾ ಪಾಲಿಸಿಯನ್ನು ಪೋಸ್ಟ್ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸ್ಥಳೀಯ ಅಂಚೆ ಅಧಿಕಾರಿ ಷಣ್ಮುಖ ಶಿರೋಳ ತಿಳಿಸಿದರು.
ಶುಕ್ರವಾರ ಮುಂಜಾನೆ ಪೋಸ್ಟ್ ಗ್ರಾಹಕರಿಗೆ ಸುರಕ್ಷಾ ಪಾಲಿಸಿ ಬಗ್ಗೆ ಅರಿವು ಮೂಡಿಸಿ ಅವರು ಮಾತನಾಡಿದರು. ಈ ಸಮಗ್ರ ಅಪಘಾತ ಸುರಕ್ಷೆಯೊಂದಿಗೆ ಅಪಘಾತಗಳಿಂದ ಉಂಟಾಗುವ ದೈಹಿಕ ಹಾಗೂ ಹಣಕಾಸಿನ ತಕ್ಕ ಮಟ್ಟಿಗಿನ ತೊಂದರೆಗಳನ್ನು ಗ್ರಾಹಕರು ತಡೆಯಬಹುದಾಗಿದೆ ಎಂದು ವಿವರಿಸಿದರು.
ಈ ವಿಮಾ ಪಾಲಿಸಿ ಸೌಲಭ್ಯಗಳಲ್ಲಿ ಎರಡು ವಿಧಗಳಿವೆ 1) ತೆರಿಗೆ ಸೇರಿ 520 ರೂಗಳು 2) ತೆರಿಗೆ ಸೇರಿ 399 ರೂಗಳು.
1ರ ವಿಧದಲ್ಲಿಯ ವೈಶಿಷ್ಟ್ಯಗಳು: ಅಪಘಾತದಲ್ಲಿ ಸಾವು ಸಂಭವಿಸಿದರೆ 10ಲಕ್ಷ, ಶಾಶ್ವತ ಅಂಗವಿಕಲತೆಗೆ 10ಲಕ್ಷ, ಶಾಶ್ವತ ಭಾಗಶಃ ವೈಕಲ್ಯ 10 ಲಕ್ಷ, ಅಪಘಾತದಿಂದ ಅಂಗಾಂಗ ಛೇದನ ಅಥವಾ ಪಾರ್ಶ್ವವಾಯು 10ಲಕ್ಷ, ಅಪಘಾತ ಸಮಯದಲ್ಲಿ ವೈದ್ಯಕೀಯ ವೆಚ್ಚ ಒಳರೋಗಿ 60ಸಾವಿರ, ಹೊರ ರೋಗಿ 30ಸಾವಿರ (ಎರಡೂ ವಿಧಗಳ ಪಾಲಿಸಿಗೆ ಸಂಬಂಧಿಸುತ್ತವೆ, ಶೈಕ್ಷಣಿಕ ಪ್ರಯೋಜನ ಕುಟುಂಬದ 2 ಮಕ್ಕಳಿಗೆ 1ಲಕ್ಷ, ಆಸ್ಪತ್ರೆಗೆ ದಾಖಲು ದೈನಂದಿನ ನಗದು (ಷರತ್ತು), ಕುಟುಂಬದವರಿಗೆ ಸಾರಿಗೆ ಪ್ರಯೋಜನ 25ಸಾವಿರ, ಅಂತಿಮ ಸಂಸ್ಕಾರ ನೆರವು 5ಸಾವಿರ ಇದು ಕೇವಲ 399 ರೂಗಳ ಪಾಲಿಸಿಗೆ ಸಂಬಂಧಿಸಿರುತ್ತವೆ ಎಂದು ಮಾಹಿತಿ ನೀಡಿದರು.
ಸುರೇಶ್ ಕಾಡಾಪೂರ, ಶ್ರೀಶೈಲ ಮಿರ್ಜಿ, ಮಹೇಶ್ ಕೆರೂರ, ಮಹಾವೀರ ಹುಲ್ಲೋಳ್ಳಿ, ರವಿ ತೇರದಾಳ, ಶ್ವೇತಾ ಬಿರಾದಾರ, ಸಾವಿತ್ರಿ ಮಠದ, ಕಿರಣ ಬಾಳಿಕಾಯಿ, ಷಣ್ಮುಖ ಕೋಲಾರ, ಶ್ವೇತಾ ರಂಜನಗಿ, ಸ್ವಾತಿ ರಂಜನಗಿ, ಮಹಾಲಿಂಗಪ್ಪ ಗೋಲಭಾವಿ ಹಾಗೂ ಅಂಚೆ ಕಚೇರಿ ಗ್ರಾಹಕರು ಉಪಸ್ಥಿತರಿದ್ದರು.