ಇಂಡಿ

ಶಿಕ್ಷಕರಿಗೆ ಧನಾತ್ಮಕ ಚಿಂತನೆ ಅತ್ಯಗತ್ಯ: ಬಿಇಓ ರಾಠೋಡ

ಶಿಕ್ಷಕರಿಗೆ ಧನಾತ್ಮಕ ಚಿಂತನೆ ಅತ್ಯಗತ್ಯ: ಬಿಇಓ ರಾಠೋಡ

ಇಂಡಿ 6: ಇಂದಿನ ಆಧುನಿಕ ಯುಗದಲ್ಲಿ ಅತ್ಯಂತ ಒತ್ತಡದಲ್ಲಿ ಬದುಕಬೇಕಾಗಿದೆ. ನಮ್ಮ ವೃತ್ತಿಯಲ್ಲಿ, ಪರಿಸರದಲ್ಲಿ ಒತ್ತಡವನ್ನು ನಿಭಾಯಿಸಿ ವೃತ್ತಿ ನೈಪುಣ್ಯ ಸಾಧಿಸಬೇಕಾಗಿದ್ದು, ಅದಕ್ಕಾಗಿ ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಬಿಇಓ ವಸಂತ ರಾಠೋಡ ಹೇಳಿದರು.          ಅವರು ದೆಹಲಿಯ ಎನ್‍ಸಿಇಆರ್ ಟಿ, ಬೆಂಗಳೂರಿನ ಡಿಎಸ್‍ಇಆರ್ ಟಿ, ವಿಜಯಪುರದ ಡೈಟ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ನಡೆದ  ನಿಷ್ಠಾ ತಾಲೂಕಾ ರಸಪ್ರಶ್ನೆ ಕಾರ್ಯಕ್ರಮ-2021 ಕ್ಕೆ ಚಾಲನೆ ನೀಡಿ ಮಾತನಾಡಿದರು.

ಉತ್ತಮ ಚಿಂತನೆಗಳು ನಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸುವುದರ ಜತೆಗೆ ನಾಯಕತ್ವ ಗುಣ, ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಬೆಳೆಸುತ್ತದೆ. ಶಿಕ್ಷಕರ ಮಾನಸಿಕ ಸ್ವಾಸ್ಥ್ಯ ಉತ್ತಮವಾದಷ್ಟು ದೈಹಿಕ ಸ್ವಾಸ್ಥ್ಯವೂ ಉತ್ತಮವಾದಾಗ ಅದು ವರ್ಗ ಕೋಣೆಯಲ್ಲಿ ಪ್ರತಿಫಲನಗೊಂಡು ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ವಿದ್ಯಾರ್ಥಿ ಹೊರಬರುತ್ತಾನೆ ಎಂದರು. 

ಕ್ಷೇತ್ರ ಸಮನ್ವಯಾಧಿಕಾರಿ ಸಿ ಎಂ ಬಂಡಗಾರ ಮಾತನಾಡಿ, ಶಿಕ್ಷಕರು ಉತ್ಸಾಹವನ್ನು ಪ್ರದರ್ಶಿಸುವುದರಿಂದ ವಿಷಯಗಳನ್ನು ಕಲಿಯುವಲ್ಲಿ ವಿದ್ಯಾರ್ಥಿಗಳಿಗೆ ತೊಡಗಿಕೊಳ್ಳುವಿಕೆ, ಆಸಕ್ತಿ, ಸತ್ವಪೂರ್ಣ ಕುತೂಹಲ ಉಂಟಾಗಬಹುದು. ಶಿಕ್ಷಕರ ಉತ್ಸಾಹ ಮತ್ತು ವಿದ್ಯಾರ್ಥಿಗಳ ಹುರುಪಿನಿಂದ ಕೂಡಿದ ಕಲಿಕೆಯ ಪ್ರೇರಣೆಗಳ ನಡುವಿನ ಪರಸ್ಪರ ಸಂಬಂಧವನ್ನು ಕಂಡುಹಿಡಿದಿದೆ. ಶಿಕ್ಷಕನ ಉತ್ಸಾಹವು ಹೆಚ್ಚಿನ ಮಟ್ಟದ ಅಂತರ್ಗತ ಪ್ರೇರಣೆಗೆ ಅನುಕೂಲವಾಗುವಂತೆ ಹಲವಾರು ಕಾರ್ಯವಿಧಾನಗಳು ಇವೆ ಎಂದರು.ಇಡೀ ರಾಜ್ಯದಲ್ಲಿಯೇ ಇದೊಂದು ವಿನೂತನ ನಿಷ್ಠಾ ರಸಪ್ರಶ್ನೆ ಕಾರ್ಯಕ್ರಮವಾಗಿದ್ದು, 18 ಕೋರ್ಸಗಳನ್ನು ಪೂರ್ಣಗೊಳಿಸಿದ ತಾಲೂಕಿನ ಶಿಕ್ಷಕರಿಗೆ ಆಯೋಜಿಸಲಾಗಿತ್ತು. ಕೆಆರ್‍ಪಿಗಳಾದ ಬಸವರಾಜ ಗೋರನಾಳ, ಎಸ್ ವಿಜಯಕುಮಾರ, ಈರಣ್ಣ ಕಂಬಾರ, ಸಂತೋಷ ಹೊನಸೂರೆ, ಎಸ್ ಎ ಮೊಮಿನ, ತನ್ವಿರ ಇನಾಮದಾರ, ಎ ಜಿ ಚೌಧರಿ, ಶ್ರೀಧರ ಹಿಪ್ಪರಗಿ, ದಾದಾ ಶ್ಯಾಮಣ್ಣವರ ಹಾಗೂ ಶಿಕ್ಷಕರಾದ ಸಂತೋಷ ಬಂಡೆ, ರೇಣುಕಾ ರೇಬಿನಾಳ, ಸುರೇಶ ಚವ್ಹಾಣ, ಆರ್ ವ್ಹಿ ಪಾಟೀಲ, ಸಿದ್ದು ಜಡೇರ, ಡಿ ಎಸ್ ಹಿರೇಮಠ, ಕೋಮಲ ಮಗದುಮ, ಶ್ರದ್ಧಾ ಬಂಕಲಗಾ ಸೇರಿದಂತೆ 122 ಶಿಕ್ಷಕರು ಭಾಗವಹಿಸಿದ್ದು, 36 ವಿಜೇತ ಶಿಕ್ಷಕರನ್ನು ಆಯ್ಕೆ ಮಾಡಲಾಯಿತು.

ಸುದ್ದಿ ಓದಿ