ಕಂಪ್ಲಿ

ಜನಪ್ರಿಯ ಶಾಸಕ ಜೆ.ಎನ್‌. ಗಣೇಶ್‌ಗೆ ಸಚಿವ ಸ್ಥಾನ ಸಿಗಲೇಂದು 111 ಇಡುಗಾಯಿ ಅರೆ​‍್ಣ

ಜನಪ್ರಿಯ ಶಾಸಕ ಜೆ.ಎನ್‌. ಗಣೇಶ್‌ಗೆ ಸಚಿವ ಸ್ಥಾನ ಸಿಗಲೇಂದು 111 ಇಡುಗಾಯಿ ಅರೆ​‍್ಣ

ಲೋಕದರ್ಶನ ವರದಿ

ಕಂಪ್ಲಿ 16:  ಕಾಂಗ್ರೆಸ್ ಹೈಕಮಾಂಡ್ ಮತ್ತು ವರಿಷ್ಠರು ಅಭಿವೃದ್ಧಿ ಹರಿಕಾರ, ಜನಮೆಚ್ಚಿನ ನಾಯಕ ಶಾಸಕ ಜೆ.ಎನ್‌.ಗಣೇಶ ಇವರಿಗೆ ಸಚಿವ ಸ್ಥಾನ ಕಲ್ಪಿಸಿ, ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯದ ಜನರ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಕಂಪ್ಲಿ ಕಾಂಗ್ರೆಸ್ ಮುಖಂಡರಾದ ಸಿ.ಆರ್‌.ಹನುಮಂತ, ಹಬೀಬ್ ರೆಹಮಾನ್, ಸಿದ್ದಪ್ಪ, ಚಾಂದ್  ಬಾಷಾ, ಕೆ.ಷಣುಕಪ್ಪ, ಬಾಲೇಸಾಬ್ ನೇತೃತ್ವದಲ್ಲಿ ಪಟ್ಟಣದ ಗ್ರಾಮ ದೇವತೆ ಮಾರೆಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ 111 ಇಡುಗಾಯಿ ಒಡೆಯುವ ಮೂಲಕ ಮಂಗಳವಾರ ಇಷ್ಠಾರ್ಥ ಈಡೇರಿಸುವಂತೆ ಕೋರಿದರು. ನಂತರ ಮುಖಂಡ ಸಿ.ಆರ್‌.ಹನುಮಂತ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಪ್ರತಿಯೊಬ್ಬರ ಆಶೋತ್ತರಗಳಿಗೆ ಸ್ಪಂದಿಸಿದ್ದಾರೆ.

ಸತತ ಎರಡು ಬಾರಿ ಶಾಸಕರಾಗಿದ್ದಾರೆ. ಆದ್ದರಿಂದ ಸಿಎಂ ಡಿ.ಕೆ.ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ವರಿಷ್ಠರು ಕಂಪ್ಲಿ ಶಾಸಕ ಜೆ.ಎನ್‌.ಗಣೇಶಗೆ ಸಚಿವ ಸ್ಥಾನ ನೀಡಲೇಬೇಕು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಕರಿಬಸವನಗೌಡ, ಬಿ.ನಾರಾಯಣಪ್ಪ, ಭಟ್ಟ ಪ್ರಸಾದ್, ಲೊಡ್ಡು ಹೊನ್ನೂರವಲಿ, ಕೆ.ಷಣ್ಮುಕಪ್ಪ, ಯಾಲ್ಪಿ ಅಬ್ದುಲ್ ಮುನಾಫ್, ಕರೇಕಲ್ ಮನೋಹರ, ಪೇಂಟರ್ ಮಸ್ತಾನ್, ಜಾಫರ್, ಹೆಚ್‌.ಪಿ.ಶಿಕಾರಿ ರಾಮು, ಮೆಟ್ರಿ ಗಿರಿ, ಡೆಕೋರೇಶನ್ ನಾಗರಾಜ, ಹಾಲ್ಮಾರೋ ಈರಣ್ಣ, ಕೆ.ಹೊನ್ನೂರ​‍್ಪ, ಶರಣಪ್ಪಗೌಡ, ವಾಲ್ಮೀಕಿ ರಘುನಾಯಕ, ವೆಂಕಟೇಶ, ಕೃಷ್ಣ, ಗೋಪಾಲ, ಡಿಸ್ ಪ್ರಸಾದ್, ನಬೀ, ವಾಸು, ಸುಧಾಕರ, ಕೊಟ್ಟಾಲ್ ವಿರೇಶ, ಹೊನ್ನಳ್ಳಿ ಶ್ರೀದೇವಿ, ಲಕ್ಷ್ಮೀ ಸೇರಿದಂತೆ ಅನೇಕರಿದ್ದರು. 


ಸುದ್ದಿ ಓದಿ