ಮಾಹಾಲಕ್ಷ್ಮೀ ಜಾತ್ರೆ ಲೆಕ್ಕ ಸಭೆಯಲ್ಲಿ ರಾಜಕೀಯ ಹಗ್ಗ ಜಗ್ಗಾಟದಿಂದ ಗಲಾಟೆ, ಆನೆ, ಪ್ರಮಾಣದಿಂದ ಜನರ ಛೀಮಾರಿ
ಸಂಕೇಶ್ವರ : ಪಟ್ಟಣದ ಆರಾಧ್ಯದೈವ ಶ್ರೀ ಮಹಾಲಕ್ಷ್ಮಿ ಜಾತ್ರೆಯ ಅಂಗವಾಗಿ ಶನಿವಾರ ಸಂಜೆ ಕರೆಯಲಾದ ಲೆಕ್ಕ ಸಭೆಯಲ್ಲಿ ಕೆಲವರು ರಾಜಕೀಯ ಎಳೆತಂದಿದ್ದರಿಂದ ಸಭೆಯಲ್ಲಿ ಗಲಾಟೆ ಉಂಟಾಗಿ, ಆನೆ ಪ್ರಮಾಣ ಮಾಡುವ ಮೂಲಕ ಸಂಕೇಶ್ವರದ ಮಾನ ಮರೆಯಾದೆ ಹಾರಾಜು ಹಾಕುವ ಕಾರ್ಯ ಮಾಡಿದ್ದಾರೆ. ಇದರಿಂದ ಕೆಲ ಮುಖಂಡರು ಕೈ ಕೈ ಮಿಲಾಸುವ ಹಂತಕ್ಕೆ ಗಲಾಟೆ ನಡೆದಿರುವದು ನಾಚಿಗೇಡಿಯ ವಿಷಯವಾಗಿದೆ. ಇವೆಲ್ಲದರ ನಡುವೆ ಗಲಾಟೆ ಶಮನ ಮಾಡಲು ಪೊಲೀಸರು ಹರಸಾಹಸಪಟ್ಟ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ.
ಶನಿವಾರ ಸಂಜೆ ಪಟ್ಟಣದ ಶ್ರೀ ಮಹಾಲಕ್ಷ್ಮಿ ಮಂದಿರದ ಭವನದಲ್ಲಿ ಕೆಲವರು 2016 ಜಾತ್ರೆಯ ಲೆಕ್ಕ ಕೊಡಿ ಎಂದು ಕೇಳಿದರು. ಇದಕ್ಕೆ ಈ ಹಿಂದಿನ ಜಾತ್ರಾ ಕಮೀಟಿಯವರು ಲೆಕ್ಕ ಪತ್ರವನ್ನು ಮಂಡಿಸಿದರು. ಈ ಕುರಿತು ಸಭೆಯಲ್ಲಿ ಹಿಂದಿನ ಕಮಿಟಿ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಅವರ ಪುತ್ರ ಸಂಜಯ ಶಿರಕೋಳಿ ಅವರು ಮಾತನಾಡಿ, ತಮ್ಮ ತಂದೆ ಈ ಹಿಂದೆ ಮಾಡಿದ ಜಾತ್ರೆಯಲ್ಲಿ ಒಂದು ರೂಪಾಯಿ ಕೂಡಾ ದುರುಪಯೋಗ ಮಾಡಿಲ್ಲ. ಎಲ್ಲ ಲೆಕ್ಕಪತ್ರ ವನ್ನು ನೀಡಿರುವದಾಗಿ ಹೇಳಿದರು.
ಅಲ್ಲದೆ ತಾವು ಈ ಹಿಂದಿನ ಜಾತ್ರೆಯಲ್ಲಿ ಕೆಲವು ಬಾರಿ ತಮ್ಮ ಸ್ವಂತ ದುಡ್ಡನ್ನು ಹಾಕಿ ಯಾತ್ರೆ ಮಾಡಿರುದಾಗಿ ಹೇಳಿದರಲ್ಲದೆ ಒಂದು ರೂಪಾಯಿ ನಮ್ಮ ತಂದೆ ದುರುಪಯೋಗ ಮಾಡಿದ್ದು ಸಾಬೀತು ಮಾಡಿದರೆ ಜನ ಹೇಳಿದ ಹಾಗೆ ಯಾವದೇ ಆನೆ ಪ್ರಮಾಣಕ್ಕೆ ಸಿದ್ದ ಎಂದರು.
ಅಲ್ಲದೆ ಹಿಂದಿನ ಜಾತ್ರೆಯಲ್ಲಿ ಯಾವದೇ ದುಡ್ಡು ದುರುಪಯೋಗ ಮಾಡಿಲ್ಲ ಎಂದು ಈ ಹಿಂದಿನ ಜಾತ್ರೆಯ ಅಧ್ಯಕ್ಷ ಅಪ್ಪಾಸಾಹೇಬ ಶಿರಕೋಳಿ ಅವರು ಮಹಾಲಕ್ಷ್ಮೀ ಮಂದಿರದಲ್ಲಿನ ಪ್ರಸಾದ (ಅಂಗಾರ) ವನ್ನು ಮುಟ್ಟುವ ಮೂಲಕ ಪ್ರಮಾಣ ಮಾಡಿದರು. ಬಳಿಕ ಹಾಲಿ ಕಮಿಟಿ ಉಪಾಧ್ಯಕ್ಷ ಅಮರ ನಲವಡೆ, ಬಸನಗೌಡಾ ಪಾಟೀಲ ಸೇರಿದಂತೆ ಕೆಲವರು ಮಾತಮಾಡಿದರು.
ಇದರಿಂದ ಲೆಕ್ಕ ಕೊಡಿ ಎನ್ನುವ ಕೆಲವರು ಮುಖ ಮುಚ್ವಿಕೊಂಡು ತೆರಳುವಂತ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಲೆಕ್ಕ ಪ್ರಸಂಗದಿಂದ ಉಂಟಾದ ಗಲಾಟೆಯು ದೇವಿಯ ಪ್ರಸಾದ ಮುಟ್ಟುವ ಮೂಲಕ ರಾಜಕೀಯ ಎಳೆದು ತಂದಿರುವದು ನಾಚಿಗೇಡಿಯ ಬಿಷಯವಾಗಿದ್ದು, ರಾಜಕೀಯ ಲೆಕ್ಕಾಚಾರ ಹೊಂದಿದ್ದ ಕೆಲವು ಮುಖಂಡರಿಗೆ ಸಭೆಯಲ್ಲಿ ನಾಗರಿಕರು ಛೀಮಾರಿ ಹಾಕಿದ ಘಟನೆ ನಡೆಯಿತು.
ಇದರಿಂದ ಸಭೆಯಲ್ಲಿ ಗದ್ದಲ ಗಲಾಟೆ ಉಂಟಾಯಿತು. ಈ ಹಿಂದಿನ ಲೆಕ್ಕ ಪತ್ರ ಕೇಳುವವರು ಹಿಂದಿನ ಜಾತ್ರೆ ಮುಗಿದು 11 ವರ್ಷವಾಗಿದೆ. ಇಷ್ಟು ದಿನಾ ಮಲಕೊಂಡಿದ್ದಾರಾ ಎಂದು ತರಾಟೆಗೆ ತೆಗೆದುಕೊಂಡರು. ಇದರಿಂದ ಸಭೆಯು ಗೊಂದಲದ ಗೂಡಾಗಿ ಪರಿಣಮಿಸಿತು. ಕೆಲವರಿಗೆ ಜನ ಮುಖಕ್ಕೆ ಮಂಗಳಾರತಿ ಮಾಡಿದ್ದರಿಂದ ಕೆಲವು ಸಭೆಯಲ್ಲಿ ಕೂಗಾಟ ತಳ್ಳಾಟ ಪ್ರಾರಂಬಿಸಿದರು.
ಬಳಿಕ ಜಾತ್ರೆಯ ಹಕ್ಕುದಾರರಾದ ಕುನಾಲ ಪಾಟೀಲ ಅವರು ಮಾತನಾಡಿ, ಯಾರು ಜಾತ್ರೆಯ ವಿಷಯದಲ್ಲಿ ರಾಜಕಾರಣ ಎಳೆದು ತರಬೇಡಿ, ನಮ್ಮ ಪಟ್ಟಣದ ಹಿತಕ್ಕಾಗಿ ಮಹಾಲಕ್ಷ್ಮಿ ಜಾತ್ರೆ ಮಾಡುವದು ಶತಸಿದ್ದ, ರಾಜಕಾರಣ ಮಾಡುವವರು ನಿಮ್ಮ ಮನೆಯಲ್ಲಿ ಇರಿ. ನಾನು ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಜಾತ್ರೆ ಮಾಡುವದಾಗಿ ತಿಳಿಸಿದರು.
ಬಳಿಕ ಸಭೆಯಲ್ಲಿ ರಾಜಕೀಯ ಎಳೆತರುತಿದ್ದ ಕೆಲ ಮುಖಂಡರು ಸಭೆಯಿಂದ ಕಾಲಕಿತ್ತಿದ ಪ್ರಸಂಗ ನಡೆಯಿತು. ಆದರೆ ಇವೆಲ್ಲದ ನಡುವೆ ಗಲಾಟೆ ನಿಯಂತ್ರಿಸಲು ಸಿಪಿಐ ಗಣಪತಿ ಕೊಂಗನೋಳಿ ಅವರು ಹಾಗೂ ಸಿಬ್ಬಂದಿ ಗಳು ಹರಸಾಹಸ ಪಟ್ಟರು.