ಪೋಲಿಸರ ಕಾರ್ಯಾಚರಣೆ : ಕುರಿ ಕಳ್ಳರ ಬಂಧನ
ಹಗರಿಬೊಮ್ಮನಹಳ್ಳಿ.ನ.29 : ಪಟ್ಟಣದ ಪೋಲಿಸರ ಮಿಂಚಿನ ಕಾರ್ಯಾಚರಣೆಯಿಂದ ಠಾಣೆಯಲ್ಲಿ ವರಲಹಳ್ಳಿಯ ಹೆಚ್.ಚಂದ್ರ್ಪ ನೀಡಿದ ಕುರಿ ಕಳ್ಳತನ ಪ್ರಕರಣಕ್ಕೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗೆ ತಂಡವನ್ನು ರಚಿಸಿದ್ದು ಪ್ರಕರಣವನ್ನು ಬೇಧಿಸಿ ಪಟ್ಟಣದ ಹೊಲವಲಯದ ಹೊಸಪೇಟೆ ರಸ್ತೆಯಲ್ಲಿ 4ಜನ ಕಳ್ಳರನ್ನು ಕುರಿಗಳ ಸಮೇತ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಿನಾಂಕ 27-03-2021ರಂದು ವರಲಹಳ್ಳಿಯ ನಿವಾಸಿ ಗ್ರಾಮದ ಸಮೀಪವಿರುವ ತಮ್ಮ ಜಮೀನಿನಲ್ಲಿನ ಕೋಣೆಯಲ್ಲಿ ಮಲಗಿರುವಾಗ ಹೊರಗಡೆಯಿಂದ ಬಾಗಿಲನ್ನು ಹಾಕಿಕೊಂಡು ಕಳ್ಳರು ತಮ್ಮ ಮೂವತ್ತು ಸಾವಿರ ಬೆಲೆ ಬಾಳುವ ಕುರಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎಂಬ ದೂರು ದಾಖಲಾಗಿತ್ತು.
ಬಂಧಿತ ಆರೋಪಿಗಳಿಂದ 75ಸಾವಿರ ಬೆಲೆ ಬಾಳುವ 14ಕುರಿಗಳು, ಕೆಎ35ಸಿ6015 ಸಂಖ್ಯೆಯ ಬೊಲೇರು ವಾಹನವನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅರೋಪಿಗಳಾದ ಶಿರಹಟ್ಟಿ ತಾಲೂಕಿನ ಬೆಳ್ಳಿಹಟ್ಟಿ ಗ್ರಮದ ನಿವಾಸಿ ಮೋಡಿಕಾರ ಸೋಮಣ್ಣ, ಹಗರಿಬೊಮ್ಮನಹಳ್ಳಿ ನಿವಾಸಿ ಕೆ.ಕಲ್ಯಾಣ ಕುಮಾರ, ಕೆ.ಭರತ್ ಕುಮಾರ, ಕೆ,ನಾಗೇಶ್ ಆರೋಪಿತರನ್ನು ಹೊಸಪೇಟೆ ಡಿಎಸ್ಪಿ ವಿಶ್ವನಾಥ್ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಹಗರಿಬೊಮ್ಮನಹಳ್ಳಿ ವೃತ್ತ ನೀರೀಕ್ಷಕ ಟಿ.ಮಂಜಣ್ಣ, ಪಿಎಸ್ಐ ಸರಳ ಸಿಬ್ಬಂದಿಗಳಾದ ಕಿರಣ್ ಕುಮಾರ, ಕೊಟ್ರೇಶ್,ಬಸವನಗೌಡ, ಕೃಷ್ಣಮೂರ್ತಿ, ವೀರೇಶ್, ಖಲಂದರ್, ಗೌರಮ್ಮ, ಪ್ರಶಾಂತಕುಮಾರ ಕಾಐಆರ್ಚರಣೆಯಲ್ಲಿ ಭಾಗವಹಿಸಿದ್ದು ವಿಜಯನಗರ ಜಿಲ್ಲಾ ಎಸ್.ಪಿ.ಡಾ.ಅರುಣ ಈ ಕಾರ್ಯಕ್ಕೆ ಪ್ರಶಂಸೆ ವ್ಯೆಕ್ತಪಡಿಸಿದ್ದಾರೆ.