ರಾಣೆಬೆನ್ನೂರ

ಪೊಲೀಸ್ ಸೇವೆ ಜನಸೇವೆಗೆ ಸಮರ​‍್ಿತ: ಎಸ್ಪಿ ಯಶೋದಾ ಒಂಟಿಗೋಡಿ

ಪೊಲೀಸ್ ಸೇವೆ ಜನಸೇವೆಗೆ ಸಮರ​‍್ಿತ: ಎಸ್ಪಿ ಯಶೋದಾ ಒಂಟಿಗೋಡಿ

ರಾಣೆಬೆನ್ನೂರು, ಜು. 7: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪೂರ್ವಜನ್ಮದ ಪುಣ್ಯದ ಫಲ. ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಜನಸೇವೆಯನ್ನು ಧ್ಯೇಯವಾಗಿಟ್ಟುಕೊಂಡು ಪೊಲೀಸರು ಸದಾ ಕರ್ತವ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ಒಂಟಿಗೋಡಿ ಹೇಳಿದರು.  

ಜಿಲ್ಲಾ ಕೇಂದ್ರದ ಎಸ್ಪಿ ಕಚೇರಿಯಲ್ಲಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಸಮ್ಮತ ಸೇವೆ, ಮಾನವೀಯತೆ ಮತ್ತು ಜನಸ್ನೇಹಿ ನಡೆ ಪೊಲೀಸ್ ಇಲಾಖೆಯ ಪ್ರಮುಖ ಮೌಲ್ಯಗಳಾಗಿವೆ ಎಂದು ತಿಳಿಸಿದರು.  

ಪೊಲೀಸರು ತಮ್ಮ ಕರ್ತವ್ಯದ ಮೂಲಕ ಸಮಾಜದಲ್ಲಿ ವಿಶ್ವಾಸ ಮೂಡಿಸುತ್ತಾರೆ. ಜನರ ಹಿತಾಸಕ್ತಿಯನ್ನು ಕಾಪಾಡುವ ಸೇವೆಯೇ ಪೊಲೀಸ್ ಇಲಾಖೆಯ ಹೆಮ್ಮೆ. ಸಾರ್ವಜನಿಕರ ವಿಶ್ವಾಸ ಗಳಿಸುವ ಕಾರ್ಯವನ್ನು ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಯೂ ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.  

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಧಿಕಾರಿ ಬಿ.ಎಸ್‌. ಸೊರಟೂರು ಹಾಗೂ ಮಂಜುಳಾ ಬಸವರಾಜ ಸೊರಟೂರು, ಇಲಾಖೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ತಮ್ಮ ಭಾಗ್ಯ. ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಹಕಾರದಿಂದ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ಎಎಸ್ಪಿ ಎಲ್‌. ವೈ. ಶಿರಕೋಳ, ಸಹಾಯಕ ಆಡಳಿತಾಧಿಕಾರಿ ಪರಮೇಶ್ವರ ಬಾಳಿಕಾಯಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ನಿವೃತ್ತರಾದ ಪಿಎಸ್‌ಐ ಅಬ್ದುಲ್ ಖಾದರ್ ಸಾಬ್, ಎಎಸ್‌ಐಗಳಾದ ಸಿದ್ದಪ್ಪ ವಿಠ್ಠಣ್ಣನವರ್, ಇಸ್ಮಾಯಿಲ್ ಸಾಬ್ ಉಪ್ಪಾರ, ಶ್ರೀನಿವಾಸ ಬಾಳರೆಡ್ಡಿ, ಎಸ್‌.ಎ. ದೊಡ್ಡಮನಿ, ಎಚ್‌.ಸಿ. ಬಸವರಾಜ ಸೊರಟೂರು, ಪಿಸಿ ಜೆಸಿ ಹಾಳದೋಟ ಸೇರಿದಂತೆ ಹಲವು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸನ್ಮಾನಿಸಿ ಅಭಿನಂದಿಸಿದರು. 


ಸುದ್ದಿ ಓದಿ