ಚಪ್ಪಲಿ ಧರಿಸಿ ರಾಷ್ಟ್ರ ಧ್ವಜ ಹಾರಿಸಿದ ಮಾಜಿ ಶಾಸಕರ ಪೊಟೊ ವೈರಲ್ : ಭಾರತೀಯ ಸಂಸ್ಕೃತಿಯ ಬಗ್ಗೆ ಭಾಷಣ ಬೀಗುವ ಪಾಟೀಲರೇ ಇದೇನಾ ನಿಮ್ಮ ಸಂಸ್ಕೃತಿ : ನೆಟ್ಟಿಗರ ಆಕ್ರೋಶ

ಚಪ್ಪಲಿ ಧರಿಸಿ ರಾಷ್ಟ್ರ ಧ್ವಜ ಹಾರಿಸಿದ ಮಾಜಿ ಶಾಸಕರ ಪೊಟೊ ವೈರಲ್ : ಭಾರತೀಯ ಸಂಸ್ಕೃತಿಯ ಬಗ್ಗೆ ಭಾಷಣ ಬೀಗುವ ಪಾಟೀಲರೇ ಇದೇನಾ ನಿಮ್ಮ ಸಂಸ್ಕೃತಿ : ನೆಟ್ಟಿಗರ ಆಕ್ರೋಶ

ಬೆಳಗಾವಿ : ಭಾರತೀಯ ಸಂಸ್ಕೃತಿಯ ಬಗ್ಗೆ ದೊಡ್ಡ ದೊಡ್ಡದಾಗಿ ಭಾಷಣ ಬೀಗಿಯುವ ಮಾಜಿ ಶಾಸಕ ಸಂಜಯ ಪಾಟೀಲ ಅವರು ಕಾಲಲ್ಲಿ ಚಪ್ಪಲಿ ಧರಿಸುವ ಮೂಲಕ ಧ್ವಜ ಹಾರಿಸುತ್ತಿರುವ ಪೊಟೊ ಒಂದು ವೈರಲ್ ಆಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶಕ್ಕೆ ವ್ಯಕ್ತವಾಗಿದೆ. 

    ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮನೆಯೊಂದರ‌ ಛತ್ತಿನ ಮೇಲೆ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸುವಾಗ ಚಪ್ಪಲಿ ಧರಿಸಿರುವ ಪೊಟೊ ಸಾಮಾಜಿಕ ಅಂತರಜಾಲದಲ್ಲಿ ವೈರಲ್ ಆಗಿದೆ.

    ಇದರಿಂದ ಸಭೆ ಸಮಾರಂಭಗಳಲ್ಲಿ ಭಾರತೀಯ ಸಂಸ್ಕೃತಿಯ ಬಗ್ಗೆ ನಮ್ಮ ಸಂಸ್ಕೃತಿ ಹಾಗೇ ಹೀಗೆ ಎಂದು ದೊಡ್ಡ ದೊಡ್ಡದಾಗಿ ಭಾಷಣ ಬೀಗುವ ಮಾಜಿ ಶಾಸಕ ಸಂಜಯ ಪಾಟೀಲ ಅವರೇ ರಾಷ್ಟ್ರ ಧ್ವಜಕ್ಕೆ ತೋರುವ ಗೌರವ ಇದೆನಾ? ಇದೇ ಸಂಸ್ಕೃತಿನಾ ರಾಷ್ಟ್ರ ಕ್ಕಾಗಿ ಹೇಳುವ ಸಂಸ್ಕೃತಿ ಇದೆನಾ? ಎಂದು ಸಾಮಾಜಿಕ ಅಂತರಜಾಲದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುವಂತಾಗಿದೆ. 

ಸುದ್ದಿ ಓದಿ