ಹೋರಾಟದ ನಿಲುವಳಿ ಪತ್ರದ ಮನವಿ
ವಿಜಯನಗರ,08: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಜಿಲ್ಲಾ ಘಟಕ ವಿಜಯನಗರ ವತಿಯಿಂದ ಆ. 07 2024 ರಂದು, 2017 ರ ಸಿ ್ಘ ಆರ್ ನಿಯಮದ ಜಾರಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆಗಿರುವ ಅನ್ಯಾಯದ ವಿರುದ್ಧ ರಾಜ್ಯ ಮಟ್ಟದ ಬೃಹತ್ ಹೋರಾಟದ ಕುರಿತು ಜಿಲ್ಲಾಧಿಕಾರಿಗಳಿಗೆ, ಉಪನಿರ್ದೇಶಕರಿಗೆ ಹೋರಾಟದ ನಿಲುವಳಿ ಪತ್ರದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಮಾತನಾಡಿ ಸರ್ಕಾರ 2017ರಲ್ಲಿ ಸ್ಘಿಆರ್ ನಿಯಮ ತಿದ್ದುಪಡಿ ಮಾಡಿ 2016ಕ್ಕಿಂತ ಪೂರ್ವದಲ್ಲಿ ನೇಮಕಾತಿ ಹೊಂದಿದ ಶಿಕ್ಷಕರಿಗೂ ಅನ್ವಯ ಆಗಿದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರು ಅಗತ್ಯ ವಿದ್ಯಾರ್ಹತೆ ಹೊಂದಿದ್ದರು ಪ್ರೌಢ ಶಾಲಾ ಶಿಕ್ಷಕರ ಹುದ್ದೆಗೆ ಹಾಗೂ ಸೇವಾನುಭವ ಹಿರಿತನ ಇದ್ದರೂ ಬಡ್ತಿ ಮುಖ್ಯಗುರುಗಳು, ಹಿರಿಯ ಬಡ್ತಿ ಮುಖ್ಯಗುರುಗಳ ಹುದ್ದೆಗೆ ಬಡ್ತಿ ಹೊಂದದೆ ನಿವೃತ್ತಿಯಾಗುತ್ತಿರುವುದು ತುಂಬ ದುಖಃದ ಸಂಗತಿಯಾಗಿದೆ. ಈ ಕುರಿತು ಹಲವಾರು ಬಾರಿ ಸಂಘಟನೆಯಿಂದ ಮನವಿ ಸಲ್ಲಿಸಿದಾಗ್ಯೂ ಸರ್ಕಾರ ಸ್ಪಂಧಿಸದೇ ಇರುವುದರಿಂದ ಇಂದು ತರಗತಿಯಲ್ಲಿ ಬೋದಿಸಬೇಕಾದ ಶಿಕ್ಷಕರು ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ. ಈ ದಿನ ಜಿಲ್ಲಾ ಹಂತದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದು, 12.08.2024 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ. ಇದರೊಳಗೆ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಮೇರೆಗೆ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿರುತ್ತೇವೆ.
ಪ್ರಧಾನ ಕಾರ್ಯದರ್ಶಿ ಶಿವಾನಂದ.ಬಿ.ಬಿ ಅವರು ಮಾತನಾಡಿ 2017ರ ಸ್ಘಿಆರ್ ನಿಯಮ ಜಾರಿಯಾದ ನಂತರ ಯಾವುದೇ ಕಾರಣಕ್ಕೂ ಪೂರ್ವಾನ್ವಯಗೊಳಿಸಬಾರದು ಸರ್ಕಾರ 2017ರ ನಂತರ ನೇಮಕಾತಿಗಳಿಗೆ ಈ ನಿಯಮ ಅನ್ವಯಿಸಿದರೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ದೊರಕಿದಂತಾಗುತ್ತದೆ ಅಲ್ಲದೇ ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಹತೆ ಹಾಗೂ ಸೇವಾ ಹಿರಿತನ ಹೊಂದಿದ್ದರು ಬಡ್ತಿಗೆ ಪರಿಗಣಿಸದೆ 1 ರಿಂದ 5ಕ್ಕೆ ಹಿಂಬಡ್ತಿ ನೀಡಿರುವುದು ನ್ಯಾಯ ಸಮ್ಮತವಾಗಿರುವುದಿಲ್ಲ. ಹಾಗೂ ಶಿಕ್ಷಕರ ವಿದ್ಯಾರ್ಹತೆ ಸೇವಾ ಅನುಭವ ಪರಿಗಣಿಸಿ ಸೇವಾ ಜೇಷ್ಠತೆ ಆಧಾರದ ಮೇಲೆ ಬಡ್ತಿಗೆ ಪರಿಗಣಿಸಬೇಕು. ಈ ಎಲ್ಲ ಬೇಡಿಕೆಗಳು ನ್ಯಾಯುತವಾಗಿದ್ದು, ಸದಾ ಶಿಕ್ಷಕರ ಮನವಿಗೆ ಸ್ಪಂಧಿಸುತ್ತಿರುವ ಸರ್ಕಾರ ಈ ಬೇಡಿಕೆಗಳನ್ನು ಈಡೇರಿಸಿ ನಮಗೆ ನ್ಯಾಯ ಒದಗಿಸಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್ ಅವರು ಮನವಿ ಸ್ವೀಕರಿಸಿ ಮಾತನಾಡಿ ನಿಮ್ಮ ಮನವಿಯನ್ನು ಈ ದಿನವೇ ಮಾನ್ಯ ಮುಖ್ಯಮಂತ್ರಿಗಳಿಗೆ ಕಳುಹಿಸಿ ಸರ್ಕಾರದ ಗಮನ ಸೆಳೆಯಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಪದಾಧಿಕಾರಿಗಳಾದ ಜಿ.ಪದ್ಮಲತಾ, ಹಾಗೂ ಎಂ.ಎ.ನಾಗನಗೌಡ, ಜಿಲ್ಲಾ ಪದಾಧಿಕಾರಿಗಳಾದ ಎ.ಕುಬೇರ್ ಆಚಾರಿ, ವಿ.ಬಿ.ಗೀತಾ, ಮಾರ್ಗದಪ್ಪ, ಹೀರಾ್ಯನಾಯ್ಕ್, ಗಳೇಶ, ವಿಜಯಕುಮಾರಿ, ಸಿದ್ದಮ್ಮ, ತಾಲೂಕು ಅಧ್ಯಕ್ಷರುಗಳಾದ ಬಸವರಾಜ.ಕೆ, ಹೆಚ್.ಲೋಕಪ್ಪ, ಬಿ.ರಾಜಶೇಖರ, ಗೌಡ್ರು ಕೊಟ್ರೇಶ, ಆನಂದ, ಮರಳನಗೌಡ ಸೇರಿದಂತೆ ತಾಲೂಕು ಕಾರ್ಯದರ್ಶಿಗಳು, ಪದಾಧಿಕಾರಿಗಳು, ಜಿಲ್ಲೆಯ ಅನೇಕ ಶಿಕ್ಷಕರು ಹಾಜರಿದ್ದರು.