ನಾಲ್ಕು ತಿಂಗಳಾದರೂ ಸಿಗದ ಪರಿಹಾರ : ತಹಶಿಲ್ದಾರ್ಗೆ ಕುರುಬ ಸಂಘದಿಂದ ಮನವಿ
ಶಾಸಕ, ಆಧಿಕಾರಿಗಳ ನಿರ್ಲಕ್ಷ್ಯದಿಂದ ಕುರಿಗಾಯಿಗಳಿಗೆ ಸಿಗದ ಪರಿಹಾರ : ಬುಡ್ಡಿ ಬಸವರಾಜ
ಹಗರಿಬೊಮ್ಮನಹಳ್ಳಿ.ಮಾ.09 : ತಾಲೂಕಿನ ಉಪನಾಯಕನ ಹಳ್ಳಿ ಗ್ರಾಮದಲ್ಲಿ ಕೆಲ ತಿಂಗಳ ಹಿಂದೆ ವಿಷಪೂರಿತ ಬಳ್ಳಿಯನ್ನು ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಸಾವಿಗಿಡಾಗಿದ್ದು ಈವರೆಗೂ ಅವುಗಳಿಗೆ ಪರಿಹಾರ ನೀಡದಿರುವ ಕ್ರಮವನ್ನು ಖಂಡಿಸಿ ತಾಲೂಕು ಕುರುಬ ಸಂಘವು ಗುರುವಾರ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
ಈ ವೇಳೆ ಕುರುಬ ಸಂಘದ ತಾಲೂಕಾಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿ ತಾಲೂಕಿನ ಉಪನಾಯಕನಹಳ್ಳಿ ಗ್ರಾಮದ ಪಿ.ನಾಗರಾಜ್, ಪಿ.ಮಲ್ಲಪ್ಪ, ವಿ.ಚೌಡಪ್ಪ ಇವರಿಗೆ ಸೇರಿದ 49 ಕುರಿಗಳು ವಿಷಪೂರಿತ ಬಳ್ಳಿ ಸೇವಿಸಿ ಸಾವಿಗೀಡಾಗಿ ಈಗಾಗಲೇ ನಾಲ್ಕು ತಿಂಗಳು ಕಳೆದುಹೋದರೂ ಕುರಿಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುರಿಗಾಯಿಗಳಿಗೆ ಮಾತ್ರ ನಯ ಪೈಸೆ ಪರಿಹಾರ ದೊರೆತಿಲ್ಲ. ಸ್ಳೀಯ ಶಾಸಕ ಭಿಮಾನಾಯ್ಕ್ ಹಾಗೂ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನವೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಕುಲಕಸುಬಾದ ಕುರಿ ಸಾಕಾಣಿಕೆಯನ್ನು ಪ್ರಮುಖ ವೃತ್ತಿ ಮಾಡಿಕೊಂಡು ಜೀವನ ನಡೆಸುತ್ತಿರುವ ಈ ಕುಟುಂಬಗಳಿಗೆ ಶಾಸಕ ಹಾಗೂ ಅಧಿಕಾರಿಗಳ ಧೋರಣೆಯಿಂದ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ, ಕೆಲ ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತದೆ ಇದಕ್ಕೂ ಮೊದಲು ಶೀಘ್ರವೇ ಕುರಿಗಳನ್ನು ಕಳೆದುಕೊಂಡವರಿಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ ಉಪನಾಯಕಹಳ್ಳಿ ಗ್ರಾಮದಲ್ಲಿ ವಿಷಪೂರಿತ ಬಳ್ಳಿ ಸೇವಿಸಿ ಸಾವಿಗೀಡಾಗಿರುವ ಕುರಿಗಳು ಈ ಮೂರು ಕುಟುಂಬಗಳಿಗೆ ಜೀವನಾಧಾರವಾಗಿದ್ದು ನಾಲ್ಕು ತಿಂಗಳಾದರೂ ಪರಿಹರ ದೊರಕಿಸಿಕೊಡದೇ ಇವರ ಜೀವದ ಜೊತೆ ಚಲ್ಲಾಟವಾಡುತ್ತಿರುವುದು ನಿಜಕ್ಕೂ ಅಸಮಂಜಸ ಕೂಡಲೇ ಕುರಿ ಕಳೆದುಕೊಂಡ ಕುಟುಂಬಗಳಿಗೆ ಪರಿಹರ ನೀಡಬೇಕು ಎಂದರು.
ಧರ್ಮದರ್ಶಿ ಗೋಣೆಪ್ಪ ಮಾತನಾಡಿದರು. ಈ ಸಂಧರ್ಭದಲ್ಲಿ ಕೊಟ್ರಯ್ಯ ಒಡೆಯರ್, ಸೋಮಲಿಂಗಪ್ಪ, ಎಂ.ಪ್ರಭಾಕರ, ಬಿ.ಪಂಪಾಪತಿ, ಕೆ.ಕುಮಾರ, ಬಿ.ನಾಗರಾಜ, ನಕರಾಳ ಗೋಣೆಪ್ಪ, ಹನುಮಂತ, ದೇವೇಂದ್ರಪ್ಪ, ಹೆಚ್.ಕೆ.ರಾಮು, ಬಿ.ಹನುಮಂತ, ದಾನಪ್ಪ, ವಿ.ನಾಗರಾಜ, ಪಿ.ಮಲ್ಲಪ್ಪ, ಹುಡೇದ್ ಹುಲುಗಪ್ಪ,ನ ಪರಶುರಾಮ ಸೇರಿದಂತೆ ಇನ್ನಿತರರು ಇದ್ದರು