ಅನಧೀಕೃತ ಚರ್ಚ್ ತೆರವಿಗೆ ಮನವಿ
ಮಹಾಲಿಂಗಪುರ 12: ಅನಧಿಕೃತ ಚರ್ಚ್ ನಿರ್ಮಾಣವನ್ನು ಕೂಡಲೇ ತಡೆದು ಅದನ್ನು ತೆರವುಗೊಳಿಸಬೇಕೆಂದು ಕೋರಿ ಸಾರ್ವಜನಿಕರು ವಿಶ್ವ ಹಿಂದೂ ಪರಿಷತ್ ಬಜರಂಗ ದಳದ ನೇತೃತ್ವದಲ್ಲಿ ಪುರಸಭೆ ಹಾಗೂ ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದರು.
ಸ್ಥಳೀಯ ಬುದ್ನಿ ಪಿಡಿ ಬಡಾವಣೆಯ ಘಂಟಿ, ಗಜಾಗೋಳ, ಘಟ್ನಟ್ಟಿಯವರ ಜಮೀನಿನ ಹತ್ತಿರ ವಜ್ರಮಟ್ಟಿಯವರ ಪ್ಲಾಟಿನಲ್ಲಿ ಮತಾಂತರದ ಉದ್ದೇಶದಿಂದ ಅನಧಿಕೃತ ಚರ್ಚ್ ನಿರ್ಮಿಸುತ್ತಿರುವ ಸಂಗತಿ ತಿಳಿದ ಕೂಡಲೇ ಸ್ಥಳೀಯ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಪರೀಶೀಲಿಸಿ ನಂತರ ವಿಶ್ವ ಹಿಂದೂ ಪರಿಷತ್ ಸಂಘಟನೆಯ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಶಿವಲಿಂಗಪ್ಪ ಘಂಟಿ, ಮಹಾಂತೇಶ ಘಟ್ನಟ್ಟಿ, ಚನ್ನಪ್ಪ ಲಿಂಬಿಕಾಯಿ, ಶ್ರೀಶೈಲ ದೊಡ್ಡಮನಿ, ವಸಂತ ದೊಡ್ಡಮನಿ, ನಂದೇಶ ಲಿಂಬಿಕಾಯಿ, ಪ್ರವೀಣ ಮುದ್ದಾಪುರ, ಪ್ರಭು ನಾಗನೂರ, ತುಕಾರಾಮ ದೊಡ್ಡಮನಿ, ಸದಾಶಿವ ಘಂಟಿ, ಮಾರುತಿ ಜಾಧವ, ನಾಗಪ್ಪ ಜಾಧವ, ಬಸವರಾಜ ಜಾಧವ, ಲಲಿತಾ ಘಂಟಿ, ಮಹೇಶ ಜಾಧವ, ವೀಣಾ ಜಾಧವ, ಯಲ್ಲಪ್ಪ ಘಂಟಿ, ಮಹಾದೇವಿ ಜಾದವ, ಮಹಾನಂಧ ಜಾಧವ, ವಿಷ್ಣು ಹಟ್ಟಿ, ಶಿವಪ್ಪ ಹಟ್ಟಿ ಇತರರಿದ್ದರು.