ಕರ್ನಾಟಕಕ್ಕೆ ಸೇರಲು ತುದಿಗಾಲಲ್ಲಿ ನಿಂತ ಮಹಾರಾಷ್ಟ್ರದ ಗ್ರಾಮಸ್ಥರು : ಮಹಾ ಸರಕಾರದ ವಿರುದ್ದ ದಂಗೆ ಎದ್ದ ಕಾಗಲ್ ತಾಲೂಕಿನ ಗ್ರಾಮಸ್ಥರು

ಕರ್ನಾಟಕಕ್ಕೆ ಸೇರಲು ತುದಿಗಾಲಲ್ಲಿ ನಿಂತ ಮಹಾರಾಷ್ಟ್ರದ ಗ್ರಾಮಸ್ಥರು : ಮಹಾ ಸರಕಾರದ ವಿರುದ್ದ ದಂಗೆ ಎದ್ದ ಕಾಗಲ್ ತಾಲೂಕಿನ ಗ್ರಾಮಸ್ಥರು

ಪಾರೇಶ ಭೋಸಲೆ

ಬೆಳಗಾವಿ : ನೆರೆಯ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಿಯ ಸುಳಕುಡ ಸೇರಿ ಕೆಲವು ಗ್ರಾಮಗಳ‌ಲ್ಲಿನ ಗ್ರಾಮಸ್ಥರು ಅಲ್ಲಿನ ಮಹಾರಾಷ್ಟ್ರ ಸರಕಾರದ, ಕೊಲ್ಲಾಪುರ ಜಿಲ್ಲಾಡಳಿತ ವಿರುದ್ದವಾಗಿ ದಂಗೆ ಎದ್ದಿದ್ದು, ಇಂಚಲಕರಂಜಿ ನೀರಿನ ಯೋಜನೆ ರದ್ದು ಮಾಡಬೇಕು, ಒಂದು ವೇಳೆ ನಮ್ಮ ಒತ್ತಾಯದ ವಿರುದ್ದವಾಗಿ ನಿರ್ಣಯ ಕೈಗೊಂಡರೆ ತಾವು ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಯಾಗುವ ಬಗ್ಗೆ ಗ್ರಾಮ ಪಂಚಾಯತದಲ್ಲಿ ಠರಾವು ಪಾಸು ಮಾಡುವ ಬಗ್ಗೆ ನಿರ್ಣಯ ಕೈಗೊಂಡಿದ್ದಾರೆ. 

   ಹೌದು ಓದುಗರೇ ಈ ಹಿಂದೆ‌ ಕೂಡಾ ಮಹಾರಾಷ್ಟ್ರ ಜತ್ತ ಹಾಗೂ ಸಾಂಗ್ಲಿ ತಾಲೂಕಿನಲ್ಲಿ ಇರುವ ಮರಾಠಿಗರು ಮತ್ತು ಅಲ್ಲಿನ ಕೆಲವು ಕನ್ನಡ ಭಾಷಿಕರು ತಮಗೆ ಇಲ್ಲಿ ಮಹಾರಾಷ್ಟ್ರ ಸರಕಾರದಿಂದ ಯಾವದೇ ಸೌಲಭ್ಯ ಸಿಗತಾ ಇಲ್ಲ. ನಮಗೆ ಕುಡಿಯುವ ನೀರು‌ ಪೂರೈಕೆ ಸಹ ಇಲ್ಲ. ಈ ಹಿನ್ನೆಲೆಯಲ್ಲಿ ನಮ್ಮನ್ನು ಗ್ರಾಮ ಸಮೇತ ಕರ್ನಾಟಕಕ್ಕೆ ಸೇರ್ಪಡೆ ಮಾಡಿ ಎಂದು ಮಹಾರಾಷ್ಟ್ರ ಸರಕಾರವನ್ನು ಒತ್ತಾಯಿಸಿದ್ದರು. 

     ಅದರ ಬಳಿಕ ರಾಜ್ಯದ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿ ಕೂಡಾ ಈ ಜತ್ತ ಭಾಗದ ಜನರನ್ನು ಭೇಟಿ ಮಾಡಿದ್ದರು. ನಂತರದ ದಿನಗಳಲ್ಲಿ ಅಲ್ಲಿನ ಜನರ ಈ ನಿರ್ಧಾರವನ್ನು ಹತ್ತಿಕ್ಕುವ ಕೆಲಸವನ್ನು ಮಹಾರಾಷ್ಟ್ರ ಸರಕಾರ‌ ಮಾಡಿತ್ತು.

  ಆದರೆ ಇವಾಗ‌ ಕೊಲ್ಲಾಪುರ ಜಿಲ್ಲೆಯ ಕಾಗಲ್ ತಾಲೂಕಿನ ಸರಣಿಯಾಗಿದ್ದು, ಮಹಾರಾಷ್ಟ್ರ ಸರಕಾರ ಇಂಚಲಕರಂಜಿ ನಗರಕ್ಕೆ ದೂದಗಂಗಾ ನದಿಯಿಂದ ಸುಮಾರು 25 ಕಿಲೋ‌ ಮೀಟರ್ ವರೆಗೆ 160 ಕೋಟಿ 84 ಲಕ್ಷ ರೂ ವೆಚ್ವದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ಪೈಪ್ ಲೈನ್ ಹಾಕಲು ಮುಂದಾಗಿದ್ದು, ಇದಕ್ಕೆ ಕಾಗಲ್ ತಾಲೂಕಿನ ಸುಳಕುಡ ಸೇರಿದಂತೆ ಹಲವಾರು ಗ್ರಾಮಗಳ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. 

    ಇಂಚಲಕರಂಜಿ ನಗರದ ಪಕ್ಕದಲ್ಲಿ ಹರಿದು ಹೋಗುವ ಪಂಚಗಂಗಾ ನದಿ‌ ನೀರನ್ನು ಅಲ್ಲಿನ ನಾಗರಿಕರಿಗೆ ನೀಡುವದನ್ನು ಬಿಟ್ಟು ಸುಮಾರು  25  ಕಿಲೋ ಮೀಟರ್ ದೂರದಲ್ಲಿರುವ ಕಾಗಲ್ ತಾಲೂಕಿನ ಸುಳಕುಡ ಗ್ರಾಮದ ಬಳಿಯ ದೂದಗಂಗಾ ನದಿಯಿಂದ ಇಂಚಲಕರಂಜಿಗೆ ನೀರಿನ‌ ಪೈಪ್ ಲೈನ್ ಮಾಡುವ ಸರಕಾರದ ಹಾಗೂ ಇಂಚಲಕರಂಜಿ ನಗರಸಭೆಯ ನಿರ್ಧಾರಕ್ಕೆ ಕಾಗಲ್ ಭಾಗದ ಸುಳಕುಡ ಗ್ರಾಮ ಸೇರಿದಂತ ಕೆಲವು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

    ಒಂದು ವೇಳೆ ಮಹಾರಾಷ್ಟ್ರ ಸರಕಾರ ಈ ಪೈಪ್ ಲೈನ್ ಹಾಕುವ ಕಾಮಗಾರಿ ಯನ್ನು ಕೈಬಿಡದೇ ಇದ್ದಲ್ಲಿ ತಾವೂ ಕರ್ನಾಟಕ ರಾಜ್ಯಕ್ಕೆ ಸೇರ್ಪಡೆಯಾಗಲು ತಮ್ಮ ಗ್ರಾಮ ಪಂಚಾತಗಳಲ್ಲಿ ಠರಾವು ಪಾಸು ಮಾಡುವದಾಗಿ ಘೋಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. 

    ಈಗಾಗಲೇ ಮಹಾರಾಷ್ಟ್ರದ ಬೇಸಿಗೆಯಲ್ಲಿ ಸರಕಾರದ ಕ್ರಮಕ್ಕೆ ಸುಳಕೊಡ ಹಾಗೂ ದತ್ತವಾಡ, ದಾನವಾಡ ಗ್ರಾಮಗಳ ಗ್ರಾಮಸ್ಥರು ಹಾಗೂ ದೂದಗಂಗಾ ಬಚಾವು ಸಮಿತಿ ಸಭೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಸರಕಾರ ಈ ಯೋಜನೆಯನ್ನು ಕೈ ಬಿಡದೆ ಇದ್ದಲ್ಲಿ ತಾವೆಲ್ಲ ಗ್ರಾಮಸ್ಥರು ಕರ್ನಾಟಕಕ್ಕೆ ಸೇರಲು ಹೋರಾಟ ಹಾಗೂ ಗ್ರಾಪಂನಲ್ಲಿ ಠರಾವು ಮಾಡುವದಾಗಿ ಎಚ್ವರಿಸಿದ್ದಾರೆ.

   ಈಗಾಗಲೆ ನಾವು ಸುಳಕುಡ ಗ್ರಾಮದ ಬಳಿಯ ದೂದಗಂಗಾ ನದಿಯಿಂದ ಹುಪ್ಪರಿ, ಎಮ್.ಐಡಿಸಿ ಗಳಿಗೆ ನೀರು ನೀಡುತ್ತಿದ್ದು, ಈಗ ಮತ್ತೆ ಏನಾದರೂ ನಾವು ಇಲ್ಲಿಂದ ಇಂಚಲಕರಂಜಿಗೆ ನೀರು ನೀಡಿದರೆ ಬೇಸಿಗೆ ಕಾಲದಲ್ಲಿ ಈ ಭಾಗದ ಕುಡಿಯುವ ನೀರಿನ ಹಾಗೂ ರೈತರ ಜಾನುವಾರುಗಳಿಗೆ ನೀರಿನ ವ್ಯತ್ಯಯವಾಗಲಿದೆ ಎನ್ನುವ ಕಾರಣದಿಂದ ನಾವು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ ಎಂದು ಅಲ್ಲಿನ ಹೋರಾಟಗಾರರು ಹೇಳಿದ್ದಾರೆ. 

   ಅಲ್ಲದೆ ಮೊನ್ನೆ ಈ ಯೋಜನೆಯ ವಿರುದ್ದವಾಗಿ ಕರೆಯಲಾದ ಸಭೆಯಲ್ಲಿ ಗ್ರಾಮಸ್ಥರು ಕೈ ಮೇಲೆತ್ತುವ ಮೂಲಕ ಇಂಚಲಕರಂಜಿಗೆ ಸುಳಕುಡ ನೀರಿನ ಯೋಜನೆಯನ್ನು ಯಾವದೇ ಕಾರಣಕ್ಕು‌ ಮಾಡಬಾರದು, ಈ ಯೋಜನೆ ಕೈ ಬಿಡದಿದ್ದಲ್ಲಿ ತಾವು ಕರ್ನಾಟಕ ಸೇರ್ಪಡೆ ಖಚಿತ ಎಂದು ಗ್ರಾಮಸ್ಥರು ಸರಕಾರಕ್ಕೆ ಎಚ್ವರಿಕೆ ನೀಡಿದ್ದಾರೆ. 

ಬೇಸಿಗೆ ವೇಳೆ ಕಾಳಂಬವಾಡಿ ಜಲಾಶಯ ಜೀವನಾಡಿ : 

   ಬೇಸಿಗೆಯಲ್ಲಿ ಮಾಹಾರಾಷ್ಟ್ರದ  ದೂದಗಂಗಾ ನದಿಗೆ ನಿರ್ಮಿಸಲಾದ ಕಾಳಂಬಾವಾಡಿಯ ಜಲಾಶಯದಲ್ಲಿ 28 ಟಿಎಮ್ ಸಿ ನೀರು ಸಂಗ್ರಹವಾಗುತ್ತಿದ್ದು, ಇದರಿಂದ ದೂದಗಂಗಾ ನದಿಯಲ್ಲಿ ಬರುವ  4 ಟಿಎಮ್ ಸಿ ನೀರನ್ನು ಕರ್ನಾಟಕದ ಗಡಿ ಗ್ರಾಮಗಳಾದ ಬೋರಗಾಂವ, ಬಾರವಾಡ, ಸದಲಗಾ, ಕಾರದಗಾ, ಮಲಿಕವಾಡ, ಎಕ್ಸಂಬಾ ಈ ಗ್ರಾಮದ ಜನರು ಉಪಯೋಗಿಸುತ್ತಾರೆ. ಅಂತರಾಜ್ಯ ಕರಾರ ಪ್ರಕಾರ ದೂದಗಂಗಾ ನದಿ ದಡದಲ್ಲಿ ಬರುವ ಕರ್ನಾಟಕದ ಗ್ರಾಮಗಳು ಈ ನದಿಯ ನೀರು ಉಪಯೋಗ ‌ಮಾಡಲಾಗುತ್ತಿದೆ ಎನ್ನಲಾಗಿದೆ.

   


ಸುದ್ದಿ ಓದಿ