ಬ್ಲ್ಯಾಕ್ ಫಂಗಸ್ನಿಂದ ಜನ ಜರ್ಜರಿತರಾಗಿದ್ದಾರೆ ತಕ್ಷಣವೇ ಔಷಧ ವ್ಯವಸ್ಥೆ ಉಮಾಶ್ರೀ ಆಗ್ರಹ
ಮಹಾಲಿಂಗಪುರ : ಕೊರೋನಾ ನಂತರ ಬ್ಲ್ಯಾಕ್ ಫಂಗಸ್ನಿಂದ ಜನರು ಜರ್ಜರಿತರಾಗಿದ್ದು, ಸೂಕ್ತ ಚಿಕಿತ್ಸೆ ಹಾಗೂ ಔಷಧ ವ್ಯವಸ್ಥೆಯನ್ನು ತಕ್ಷಣದಿಂದ ಮಾಡಬೇಕೆಂದು ಮಾಜಿ ಸಚಿವೆ ಉಮಾಶ್ರೀ ಸಕರ್ಾರವನ್ನು ಆಗ್ರಹಿಸಿದರು. ಮಂಗಳವಾರ ಸ್ಥಳೀಯ ಸಕರ್ಾರಿ ಪ್ರೌಢಶಾಲೆಯಲ್ಲಿ ನೂತನವಾಗಿ ಆರಂಭಿಸಿರುವ ಕೊರೋನಾ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ, ಲಸಿಕೆ ತೆಗೆದುಕೊಳ್ಳಲು ಬರುವ ಸಾರ್ವಜನಿಕರಿಗೆ ಆಹಾರ ವಿತರಿಸಿ ಮಾತನಾಡಿದ ಅವರು, ಬಾಗಲಕೋಟ ಜಿಲ್ಲೆಯಲ್ಲಿ ಒಟ್ಟು 22 ಪ್ರಕರಣಗಳು ದಾಖಲಾಗಿದ್ದು, ಮಹಾಲಿಂಗಪುರದಲ್ಲಿಯೂ ಕಳೆದವಾರ ಓರ್ವ ಮಹಿಳೆಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಸೂಕ್ತ ಚಿಕಿತ್ಸೆ ದೊರಕಿದಲ್ಲಿ ಆ ಮಹಿಳೆ ಬದುಕಬಲ್ಲಳು ಎಂದರು.
ವಿರೋಧಪಕ್ಷಗಳು ಸಾರ್ವಜನಿಕರ ಕಷ್ಟಗಳನ್ನು ನೀಗಿಸಲು ಸರಕಾರವನ್ನು ಒತ್ತಾಯಿಸುವುದು ರಾಜಕಾರಣವಲ್ಲ, ಅದು ಆಡಳಿತವನ್ನು ಬಲಪಡಿಸುವ ಕಾರ್ಯವಾಗಿದೆ ಎಂಬುವುದನ್ನು ಆಡಳಿತ ಮಾಡುವವರು ಅರ್ಥ ಮಾಡಿಕೊಳ್ಳಬೇಕು, ಅದರ ಬದಲಾಗಿ ವಿನಾಕಾರಣ ವಿರೋಧಪಕ್ಷದವರ ಎಲ್ಲ ಕೆಲಸಗಳನ್ನು ಕೇವಲ ರಾಜಕಾರಣವೆಂಬ ತಾತ್ಸಾರ ಭಾವನೆಯಿಂದ ಅಲಕ್ಷ್ಯ ಮಾಡಿ, ಜನರನ್ನು ಕೊಲ್ಲಬೇಡಿ. ಶಾಸಕ ಸಿದ್ದು ಸವದಿ ಅವರ ಕಾರ್ಯವೈಖರಿಯ ಬಗ್ಗೆ ನನಗೆ ಗೌರವವಿದೆ, ಹಾಗಾಗಿ ಇಡೀ ಕ್ಷೇತ್ರದಾದ್ಯಂತ ನಾವು, ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಹಗಲಿರುಳೆನ್ನದೆ ಓಡಾಡಿ ಜನರ ಸಂಕಷ್ಟಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ತೇರದಾಳ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ, ಪುರಸಭೆ ಸದಸ್ಯ ಜಾವೇದ ಭಾಗವಾನ್, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಈಶ್ವರ ಚಮಕೇರಿ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ, ಮಲ್ಲಪ್ಪ ಭಾವಿಕಟ್ಟಿ, ಪುರಸಭಾ ಸದಸ್ಯ ರಾಜು ಗೌಡಪ್ಪಗೋಳ, ರಾಜು ಭಾವಿಕಟ್ಟಿ, ಲಕ್ಷ್ಮಣ ಮಾಂಗ, ಬಸವರಾಜ ಬುರುಡ, ಸಿದ್ದು ಬೇನೂರ, ಸೈಯದ್ ಯಾದವಾಡ, ಪ್ರಕಾಶ್ ಮಮದಾಪುರ,ನಾನಾ ಜೋಶಿ , ಶಂಕರ್ ಸೊನ್ನದ ಇನ್ನು ಮುಂತಾದವರಿದ್ದರು