ಮಹಲಿಂಗಪುರ

ಸುಡುಗಾಡು ಸಿದ್ಧರ ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ಜನ ಪ್ರತಿನಿಧಿಗಳು ಶ್ರಮಿಸಲಿ : ಸಾಬಣ್ಣ

ಸುಡುಗಾಡು ಸಿದ್ಧರ ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ಜನ ಪ್ರತಿನಿಧಿಗಳು ಶ್ರಮಿಸಲಿ : ಸಾಬಣ್ಣ

ಮಹಾಲಿಂಗಪುರ : ಶತ ಶತಮಾನಗಳಿಂದ ಭಿಕ್ಷಾಟನೆಯಲ್ಲಿಯೇ ತೊಡಗಿರುವ ನಮ್ಮ ಸುಡುಗಾಡು ಸಿದ್ಧರ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಅಭಿವೃದ್ಧಿಗೆ ಜನ ಪ್ರತಿನಿಧಿಗಳು ಒಲವು ತೋರಿಸಬೇಕೆಂದು ಸುಡುಗಾಡು ಸಿದ್ಧ ರಾಜ್ಯ ಮಹಾಸಂಘದ ಅಧ್ಯಕ್ಷ ಸಾಬಣ್ಣ. ಪರಿಯುವರ್ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ಆಗ್ರಹಿಸಿದರು.

 ಮುಧೋಳ ತಾಲೂಕು ನಾಗರಾಳ ಶಾಖೆ ಸುಡುಗಾಡು ಸಿದ್ಧ ಮಹಾ ಸಂಘ ಉದ್ಘಾಟನಾ ಮತ್ತು ಸಮಾವೇಶ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸುಡುಗಾಡು ಸಿದ್ಧ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಮತ್ತು ಅವರಿಂದ ಭಿಕ್ಷಾಟನೆ ತೊಲಗಿ ಸ್ವಾಭಿಮಾನ ಬದುಕು ಸಾಗಿಸಲು, ಸರ್ಕಾ ರಗಳು ಉಚಿತ ಉನ್ನತ ಶಿಕ್ಷಣ, ನೌಕರಿ ನೀಡಬೇಕು. ರಾಜ್ಯಾದ್ಯಂತ ಸಮುದಾಯ ಭವನ ಮತ್ತು ವಸತಿ ರಹಿತರಿಗೆ ಮನೆಗಳನ್ನು ನಿಮರ್ಿಸಿ ಕೊಟ್ಟು ಅವರ ಬದುಕಿಗೆ ಆಸರೆಯಾಗಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂತೋಷ ದೊಡ್ಮನಿ, ರಾಜ್ಯದಲ್ಲಿ 3ಲಕ್ಷ 89ಸಾವಿರ ಜನಸಂಖ್ಯೆ ಉಳ್ಳ ಸುಡುಗಾಡು ಸಿದ್ಧ ಸಮುದಾಯ ಮೇಲು ಕೀಳು ಎನ್ನದೆ ಎಲ್ಲ ಕೆಲಸಗಳಿಗೂ ಸಿಧ್ಧ. ಉಳಿದ ಸಮಾಜಗಳಂತೆ ಇವರ ಹಸಿವು ನೀಗಿಲ್ಲ. ಶಿಕ್ಷಣ ವಂಚಿತರಾದ ಇವರ ಕಾಯಕ, ವೇಷ ಧರಿಸಿ ಜನರಿಗೆ ವಿವಿಧ ಮನೋರಂಜನೆಗಳ ಆಟ ತೋರಿಸಿ ಹೊಟ್ಟೆ ಹೊರೆಯುವುದೇ ಆಗಿದೆ. ಇವರ ಸವಾರ್ಂಗೀಣ ಅಭಿವೃದ್ಧಿಗಾಗಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದರು. 

ಕಾರ್ಯಕ್ರಮದ ಮುಂಚೆ ಮಧ್ಯಾಹ್ನ ನಾಗರಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ವೇಷ ಭೂಷಣಗಳನ್ನು ತೊಟ್ಟ ಸುಡುಗಾಡು ಸಿದ್ಧ ಸಮಾಜದ ಜನರು ಊರಿನ ನಾಗರಿಕರ ಗಮನ ಸೆಳೆದರು.

 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಸ್ಥಳೀಯ ಲಕ್ಕಪ್ಪ ಮಹಾರಾಜರು ಹಾಗೂ ಗಣ್ಯರು ಕಾರ್ಯಕ್ರಮ ಉದ್ಘಾಟಿಸಿದರು. ಸಚಿವ ಆರ್ ಬಿ.ತಿಮ್ಮಾಪೂರ ಅನುಪಸ್ಥಿತಿಯಲ್ಲಿ ಸಹೋದರಿ ಕವಿತಾ ತಿಮ್ಮಾಪುರ ಅವರಿಗೆ ವಠಾರಗಳಲ್ಲಿ ಶುಧ್ಧ ಕುಡಿಯುವ ನೀರು, ಸಮುದಾಯ ಜನರಿಗೆ ಭವನ ಮತ್ತು ವಸತಿ, ಮಕ್ಕಳಿಗೆ ಶಿಕ್ಷಣ ಒದಗಿಸುವ ಕುರಿತು ಸಕರ್ಾರಕ್ಕೆ ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರ್ವತಿ ತೇಲಿ ಅಧ್ಯಕ್ಷತೆ ವಹಿಸಿದ್ದರು. ದುಂಡಪ್ಪ ಜೈನಾಪುರ, ಬಸನಗೌಡ ಪಾಟೀಲ, ಯಶವಂತ ಚವ್ಹಾಣ, ಶಿವನಗೌಡ ಪಾಟೀಲ, ಭೀಮಶಿ ಗಂಟಿ, ಎಸ್.ಎಂ.ಸಿದ್ದಯ್ಯನವರ, ವಿರೇಶ ಕೆ. ಸಿ.ಕೆ.ಮಂಜುನಾಥ, ಲೋಕೇಶ ತೋಟದ, ಶಂಕರ ರುದ್ರಾಕ್ಷಿ, ಮಹಾಲಿಂಗ ಭಜಂತ್ರಿ, ತಿಪ್ಪಣ್ಣ ಅಗಸದವರ, ಭೀಮಶಿ ನೇಗಿ, ಯಲ್ಲಪ್ಪ ಸೂರ್ಯವಂಶಿ, ಶ್ರೀನಿವಾಸ ಬಿ.ಪಾಟೀಲ, ಸಿದ್ದಪ್ಪ ಸಂಗಮದವರ, ಮಹಾದೇವ ಆವಿನವರ, ಹಣ್ಮಂತ ಸಂಗಮದವರ, ಈರವ್ವ ಸಂಗಮದವರ, ಸಿದ್ದಪ್ಪ ಗಿರೆವ್ವಗೋಳ, ವಿಠ್ಠಲಗೌಡ ನ್ಯಾಮಗೌಡರ, ಈರಣ್ಣ ಗಂಟಿ, ಸಿದ್ರಾಮ ಸಂಗಮದವರ, ದೊಡ್ಡಚನಮಲಪ್ಪ ಲದ್ದಿ ಇದ್ದರು. ಸಮಾಜದ ಕುಮಾರಿಯರು ಸ್ವಾಗತಿಸಿ, ಧರ್ಮಪ್ಪ ಕುಗಡಿ ನಿರೂಪಿಸಿ ವಂದಿಸಿದರು.


ಸುದ್ದಿ ಓದಿ