ಸಂಕೇಶ್ವರದಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಪವನ ಕತ್ತಿ ಚಾಲನೆ : ನಂದಿನಿ ಉತ್ಪನ್ನಗಳಿಗೆ ಶೇ. 20 ರಿಯಾಯಿತಿ ನೀಡಿದ ಕೆಎಂಎಫ್
ಸಂಕೇಶ್ವರ : ಗ್ರಾಹಕರಿಗಾಗಿ ಶೇ. ೨೦ ಕಡಿಮೆ ರಿಯಾಯತಿ ದರದಲ್ಲಿ ಉತ್ಪನ್ನಗಳನ್ನು ನೀಡುವ ಉದ್ದೇಶದಿಂದ ಕರ್ನಾಟಕ ಹಾಲು ಮಹಾ ಮಂಡಳದ ವತಿಯಿಂದ ಆಯೋಜಿಸಲಾಗಿರುವ ನಂದಿನಿ ಸಿಹಿ ಉತ್ಸವಕ್ಕೆ ಸಂಕೇಶ್ವರದಲ್ಲಿ ಯುವ ದುರೀಣ, ಬೆಲ್ಲದ ಬಾಗೇವಾಡಿ ಅರ್ಬನ್ ಕೋ ಸೌಹರ್ದನ ಅಧ್ಯಕ್ಷ ಪವನ ಕತ್ತಿ ಅವರು ಶುಕ್ರವಾರ ಚಾಲನೆ ನೀಡಿದರು.
ಸಂಕೇಶ್ವರದ ಪಟ್ಟಣದ ಲಿಂಕ್ ರಸ್ತೆಯಲ್ಲಿರುವ ಕಬ್ಬೂರಿ ವಾಣ ಜ್ಯ ಮಳಿಗೆಯ ಬಳಿ ಇರುವ ನಂದಿನಿ ಹಾಲು ಮಾರಾಟ ಕೇಂದ್ರದಲ್ಲಿ ಪವನ ಕತ್ತಿ ಅವರು ಈ ವಿನೂತನ ಉತ್ಸವಕ್ಕೆ ರಿಬ್ಬನ ಕತ್ತರಿಸುವ ಮೂಲಕ ಚಾಲನೆ ನೀಡಿದರು. ನಂದಿನಿಯ ಎಲ್ಲ ಉತ್ಪನ್ನಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಗ್ರಾಹಕರಿಗೆ ಕೈಗೇಡುಕುವ ಬೆಲೆಯಲ್ಲಿ ದೊರೆಯುವಂತೆ ಕೆಎಂಎಫ್ ನೀಡುತ್ತಿದ್ದು, ನಾಗರಿಕರು ಈ ಉತ್ಪನ್ನಗಳನ್ನು ಕೊಂಡುಕೊಳ್ಳುವ ಮೂಲಕ ಆರೋಗ್ಯವಂತಾಗುವAತೆ ಕರೆ ನೀಡಿದರು. ಇದೇ ವೇಳೆ ರಾಹುಲ ಭೂಸಗೋಳ ಅವರು ಪವನ ಕತ್ತಿ ಹಾಗೂ ನಿರ್ದೇಶಕ ರಾಯಪ್ಪ ಡೂಗ ಅವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಕೆಎಂಎಫ್ ಹುಕ್ಕೇರಿ ತಾಲೂಕಾ ನಿರ್ದೇಶಕ ರಾಯಪ್ಪ ಡೂಗ, ರವಿ ಹಿಡಕಲ್, ಪುರಸಭೆ ಸದಸ್ಯರುಗಳಾದ ಸುನೀಲ ಪರ್ವವತರಾವ್, ಪ್ರಮೋದ ಹೊಸಮನಿ, ಶಿವಾನಂದ ಮುಡಸಿ, ಗಂಗಾರಾಮ ಭೂಸಗೋಳ, ಮುಖಂಡರಾದ ನಾಗೇಂದ್ರ ಭೋಸಲೆ, ಆನಂದ ಕಬ್ಬೂರಿ ಕುಮಾರ ಬಸ್ತವಾಡಿ, ಚೇತನ ಬಸೇಟ್ಟಿ, ಪ್ರದೀಪ ಮಾನಗಾವಿ, ಬಸವರಾಜ ಬಸ್ತವಾಡಿ, ರಾಜು ಬೋರಗಾವಿ, ಗಣಪತಿ ಕಾಂಬಳೆ, ಕೆಎಂಎಫ್ ಹುಕ್ಕೇರಿ ತಾಲೂಕಾ ವಿಸ್ತರಣಾ ಅಧಿಕಾರಿ ಮಂಜನಾಥ ಹಗೇದಾಳ, ಡಾ. ಭಾಗ್ಯಶ್ರೀ ಕುಂಬರಗಣವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.