ಮುದ್ದೆಬಿಹಾಲ್

ಯುವಕರಲ್ಲಿನ ದೇಶಭಕ್ತಿ, ಧರ್ಮ ಪರಂಪರೆಗಳು ದೂರ ಸರಿಯುತ್ತಿವೆ

ಯುವಕರಲ್ಲಿನ ದೇಶಭಕ್ತಿ, ಧರ್ಮ ಪರಂಪರೆಗಳು ದೂರ ಸರಿಯುತ್ತಿವೆ

ಪ್ರವಚನ ಭಾಸ್ಕರ, ಶಿವಪ್ರಸಾದ ದೇವರು ವಿಷಾದ 

ಮುದ್ದೇಬಿಹಾಳ 16: ಯುವಕರಲ್ಲಿನ ರಾಷ್ಟ್ರೇ​‍್ರಮ, ದೇಶಭಕ್ತಿ, ಧರ್ಮ ಪರಂಪರೆಗಳು ದೂರ ಸರಿಯುತ್ತಿವೆ ಎಂದು ಯರನಾಳ ಹಿರೇಮಠದ ಪ್ರವಚನ ಭಾಸ್ಕರ, ಶಿವಪ್ರಸಾದ ದೇವರು ನುಡಿದರು. 

ತಾಲೂಕಿನ ನಾಗರಬೆಟ್ಟ ಗ್ರಾಮದ ಪಾಟೀಲ್ ಆಕ್ಸಫರ್ಡ ಪಿಯು ಕಾಲೇಜಿನ ಆವರಣದಲ್ಲಿ, ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವದ ನಿಮಿತ್ಯವಾಗಿ ಶಾಲಾ ವಿದ್ಯಾರ್ಥಿಗಳಿಗೆ ರುದ್ರಾಕ್ಷ ದೀಕ್ಷೆ ನೀಡಿ  ಅವರು ಮಾತನಾಡಿದರು. 

ಧರ್ಮದ ಹೆಸರಿನಲ್ಲಿ ವಿದ್ಯಾರ್ಥಿಗಳಲ್ಲಿ ದ್ವೇಷದ ಭಾವ ಮೂಡಿಸಲಾಗುತ್ತಿದೆ. ದೇಶದ ಐಕ್ಯತೆಯನ್ನ ಎತ್ತಿ ಹಿಡಿಯುವಲ್ಲಿ ವಿದ್ಯಾರ್ಥಿಗಳು ಮುಂದಾಗಬೇಕು. ಧರ್ಮ ಧರ್ಮಗಳಲ್ಲಿ ಸಹಿಷ್ಣತೆಭಾವ ಸಮಾರಸ್ಯದ ಜೀವನ ರೂಪಿಸಿಕೊಳ್ಳಬೇಕು. ನಮ್ಮ ಧರ್ಮದ ಆಚರಣೆ ಮನೆಯಲ್ಲಿಯೇ ಇರಬೇಕು. ಶಾಲಾ ಕಾಲೇಜುಗಳಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು. 

 ದೋಟಿಹಾಳದ ಪೂಜ್ಯರಾದ ಚಂದ್ರಶೇಖರ ದೇವರು ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರಧಾನವಾದದ್ದು. ವಿದ್ಯಾರ್ಥಿ ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾದರೆ, ಶಿಕ್ಷಣ ಮಹೋನ್ನತ ಪಾತ್ರ ನಿರ್ವಹಿಸುತ್ತದೆ. ಗುರುವಿನಿಂದ ಸಂಸ್ಕಾರ ಶಿಕ್ಷಣದಿಂದ ಸಂಸ್ಕೃತಿ ಕಲಿತಾಗ ಮಾತ್ರ ಜೀವನದ ಗುರಿ ಸಾದಿಸಲು ಸಾಧ್ಯವಾಗುತ್ತದೆ. ಎಂದರು. 

ಪಿ.ಬಿ.ಹುಣಷ್ಯಾಳ ಹಿರೇಮಠದ ಆನಂದ ದೇವರು ಮಾತನಾಡಿ, ವೀರಶೈವ ಲಿಂಗಾಯತ ಧರ್ಮದ ಕುರುಹು ಆದ ರುದ್ರಾಕ್ಷಿ ಧಾರಣ ಮಾಡುವುದರಿಂದ  ಓದಿನಲ್ಲಿ ಏಕಾಗ್ರತೆ ಹೆಚ್ಚಾಗಿ ಭಯ ಆತಂಕ ದೂರವಾಗುತ್ತದೆ. ರುದ್ರಾಕ್ಷ ದೀಕ್ಷೆಯಿಂದ ಋಣಾತ್ಮಕ ಗುಣಗಳನ್ನು ಹೊರಹಾಕಿ ಧನಾತ್ಮಕ ಶಕ್ತಿ ಋದ್ಧಿಸುತ್ತದೆ ಎಂದರು. 

ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಡಾ.ಚನ್ನವೀರದೇವರು ವಹಿಸಿ ಆಶೀರ್ವಚನ ನೀಡಿದರು. ಹುಬ್ಬಳ್ಳಿ ಮೂರುಸಾವಿರ ಮಠದ ಸಾಧಕರಾದ ಪೂಜ್ಯ ಶಿವಬಸವ ದೇವರು ಪ್ರಾಸ್ತಾವಿಕವಾಗಿ ಮಾತಾಡಿದರು. ಆಕ್ಸಫರ್ಡ ಪಾಟೀಲ ಸಂಸ್ಥೆಯ ಅಧ್ಯಕ್ಷ ಅಮಿತಗೌಡ ಪಾಟೀಲ ಎಲ್ಲ ಶ್ರೀಗಳನ್ನ ಸತ್ಕರಿಸಿ ಆಶೀರ್ವಾದ ಪಡೆದರು. ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ರುದ್ರಾಕ್ಷ ಧಾರಣ ಮಾಡಲಾಯಿತು. ಶಿಕ್ಷಕ ಪರಶುರಾಮ ಹೂಗಾರ ನಿರೂಪಿಸಿ ವಂದಿಸಿದರು. 

ಈಗಲೇ ಎಲ್ಲ ಕಾಲೇಜು ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಸಾಮರಸ್ಯದಿಂದ ಬದುಕಲು ವಿದ್ಯಾರ್ಥಿಗಳಿಗೆ ಪ್ರೇರೇಪಿಸಲಾಗಿದೆ. ಸನಾತನ ಧರ್ಮ ಪರಂಪರೆ ಸಂಸೃತಿ ಸಂಸ್ಕಾರಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಲಾಗಿದೆ. ಭಕ್ತರು ಹಾಗೂ ವಿದ್ಯಾರ್ಥಿಗಳಿಗೆ 20 ಸಾವಿರ ರುದ್ರಾಕ್ಷವನ್ನು  ಧಾರಣ  ಮಾಡಲಾಗಿದೆ. 

-ಡಾ. ಚನ್ನವೀರ ದೇವರು, ಕುಂಟೋಜಿ. 


ಸುದ್ದಿ ಓದಿ