ಮಹಲಿಂಗಪುರ

ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ: ಅಂಗಡಿ

ಕ್ರೀಡೆಯಲ್ಲಿ ಭಾಗವಹಿಸುವಿಕೆ ಮುಖ್ಯ: ಅಂಗಡಿ


ಮಹಾಲಿಂಗಪುರ 08: ಕ್ರೀಡೆಯಲ್ಲಿ ಸೋಲು ಗೆಲುವು ಪ್ರಮುಖವಲ್ಲ ಭಾಗವಹಿಸುವುದು ಮುಖ್ಯ ಎಂದು ದೈಹಿಕ ಶಿಕ್ಷಣ ನಿರ್ದೇಶಕ ವಿ.ಎಸ್‌.ಅಂಗಡಿ ಹೇಳಿದರು. 

ಸ್ಥಳೀಯ ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ, ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಯುಥ ಸ್ಪೋಟ್ಸ್‌ ಕ್ಲಬ್ ಮಹಾಲಿಂಗಪುರ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಪುರುಷರ ವ್ಹಾಲಿಬಾಲ್ ಡಬಲ್ಸ್‌ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯಲ್ಲಿ ನಮ್ಮ ಕಾಲೇಜು ಉನ್ನತಮಟ್ಟದಲ್ಲಿದ್ದು, ಅನೇಕ ದಾನಿಗಳು ಬೆಂಬಲಾರ್ಥ ಸಹಾಯ ಸಹಕಾರವನ್ನೂ ಸಹ ನೀಡುತ್ತಿದ್ದಾರೆ ಎಲ್ಲರಿಗೂ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ತಿಳಿಸಿದರು.  

ಈ ಪಂದ್ಯಾವಳಿಯಲ್ಲಿ 18 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನವನ್ನು ಮಹಾಲಿಂಗಪುರದ ಹಣಮಂತ ಆದೆಪ್ಪನವರ ಹಾಗೂ ಅನುಪ ಕಂಕನವಾಡಿ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಬೆಂಡವಾಡದ ಚೇತನ ಹಾಗೂ ಕಾಡಪ್ಪ ಪಡೆದುಕೊಂಡರು. ತೃತೀಯ ಸ್ಥಾನವನ್ನು ಮಹಾಲಿಂಗಪುರದ ಮಾರುತಿ ಮಾಳಿ ಹಾಗೂ ಪವನ ಮಾಳಿ ಮತ್ತು ಚತುರ್ಥ ಸ್ಥಾನವನ್ನು ಯರಗಟ್ಟಿಯ ಲಕ್ಷ್ಮಣ ಮತ್ತು ಪ್ರವೀಣ ಪಡೆದುಕೊಂಡಿದ್ದಾರೆ. 

ಪ್ರಥಮ ಬಹುಮಾನ 5000 ರೂಗಳನ್ನು ಶಿವನಗೌಡ ಪಾಟೀಲ, ದ್ವಿತೀಯ ಬಹುಮಾನ 4000 ರೂಗಳನ್ನು ಯುಥ ಸ್ಪೋಟ್ಸ್‌ ಕ್ಲಬ್ ವತಿಯಿಂದ, ತೃತೀಯ ಬಹುಮಾನ 3000 ರೂಗಳನ್ನು ಮಲ್ಲು ದಲಾಲ, ಚತುರ್ಥ ಬಹುಮಾನ 2000 ರೂಗಳನ್ನು ನಯೀಮ್ ವಾಲಿಕರ್ ಕೊಡಮಾಡಿದ್ದಾರೆ.  

ಕಾರ್ಯಕ್ರಮವನ್ನು ಅಶೋಕ ನುಚ್ಚಿ, ವಿನಾಯಕ ಆನೆಪ್ಪಗೋಳ, ಹಣಮಂತ ಆದೆಪ್ಪನವರ ಹಾಗೂ ಅನುಪ ಕಂಕನವಾಡಿ, ಮಾನಿಂಗ ಮಾಳಿ, ಸಲೀಂ ಹಳಿಂಗಳಿ, ವಿ.ಎಂ.ಮುಧೋಳ ಸಂಘಟಿಸಿ, ನಿರ್ಣಾಯಕರಾಗಿ ಮಹಾಂತೇಶ ಬುರಕುಲೆ, ಶ್ರೀಶೈಲ ಚೌಗಲಾ ಕಾರ್ಯನಿರ್ವಹಿಸಿದರು.  


ಸುದ್ದಿ ಓದಿ