ಮಹಲಿಂಗಪುರ

ಕ್ರೀಡಾ ಮನೋಭಾವ, ಸೌಹಾರ್ದತೆಯೊಂದಿಗೆ ಆಟಗಳಲ್ಲಿ ಭಾಗವಹಿಸಿ: ಕಾಂಬ್ಳೆ

ಕ್ರೀಡಾ ಮನೋಭಾವ, ಸೌಹಾರ್ದತೆಯೊಂದಿಗೆ ಆಟಗಳಲ್ಲಿ ಭಾಗವಹಿಸಿ: ಕಾಂಬ್ಳೆ


ಮಹಾಲಿಂಗಪುರ: ಕ್ರೀಡಾ ಮನೋಭಾವ ಹಾಗೂ ಸೌಹಾರ್ದತೆಯೊಂದಿಗೆ ಆಟಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಶಾಂತಿ, ನೆಮ್ಮದಿಯ ಸಂದೇಶ ನೀಡಬೇಕೆಂದು ಠಾಣಾಧಿಕಾರಿ ವಿಜಯ ಕಾಂಬ್ಳೆ ಆಟಗಾರರಿಗೆ ಸಲಹೆ ನೀಡಿದರು. 

ಬುಧವಾರ ಪಟ್ಟಣದ ಅಂಗಡಿಯವರ ಮೈದಾನದಲ್ಲಿ ಆಜಾದ್ ಕ್ರಿಕೆಟ್ ಕ್ಲಬ್ ಹಾಗೂ ಕ್ರಿಕೆಟ್ ಲವರ್ಸ್‌ ಟ್ರೋಫಿ ಸಂಯುಕ್ತಾಶ್ರಯದಲ್ಲಿ 22ನೇಯ ಐದು ದಿನಗಳವರೆಗೆ ಹಮ್ಮಿಕೊಂಡಿರುವ ಅಂತಾರಾಜ್ಯಮಟ್ಟದ ನಿಗದಿತ ಓವರುಗಳ ಟೆನಿಸ್‌ಬಾಲ್ ಕ್ರಿಕೆಟ್ ಲವರ್ಸ್‌ ಟ್ರೋಫಿ ಪಂದ್ಯಾವಳಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಆಟದಲ್ಲಿ ಸೋಲು- ಗೆಲುವು ಮುಖ್ಯವಲ್ಲ, ಕ್ರೀಡಾ ಪ್ರೇಮ ಮೆರೆಯಬೇಕು. ಜಾತಿ ಬೇಧ ಮರೆತು ಸಾಮಾಜಿಕ ಮತ್ತು ಯುವಕರ ಸ್ವಾಸ್ಥ್ಯ  ಕಾಪಾಡಲು ಇಂತಹ ಪಂದ್ಯಾವಳಿಗಳ ಆಯೋಜನೆ ಅತ್ಯವಶ್ಯಕವಾಗಿದೆ ಎಂದರು. 

ಜಿಪಂ. ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಪಟ್ಟಣದಲ್ಲಿ ಮೈದಾನದ ಕೊರತೆಯಿಂದ ನಶಿಸಿ ಹೋಗುತ್ತಿದ್ದ ಕ್ರಿಕೆಟ್‌ಗೆ ಅಂಗಡಿಯವರ ಮೈದಾನ ಆಶಾದಾಯಕವಾಗಿದೆ ಮತ್ತು ಪರಿವಾರದ ಕ್ರೀಡಾ ಆಸಕ್ತಿ ಮತ್ತು ಕಳಕಳಿ ಶ್ಲಾಘನೀಯ ಎಂದರು. 

ನೇಕಾರ ಮುಖಂಡ ಮನೋಹರ ಶಿರೋಳ ಮಾತನಾಡಿದರು. 

ಕ್ರಿಕೆಟ್ ಲವರ್ಸ್‌ ಟ್ರೋಫಿ ಅಧ್ಯಕ್ಷ ಶೇಖರ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯರಾದ ರವಿ ಜವಳಗಿ ರಾಜು ಚಮಕೇರಿ, ಪತ್ರಕರ್ತರಾದ ಮಹೇಶ ಆರಿ, ಜಯರಾಮಶೆಟ್ಟಿ, ನಾರಣಗೌಡ ಉತ್ತಂಗಿ, ಶಿವಲಿಂಗ ಘಂಟಿ, ಮುಖಂಡ ಭೀಮಸಿ ಗೌಂಡಿ, ಪ್ರಕಾಶ ಕರಲಟ್ಟಿ, ಪೈಗಂಬರ್ ಪೆಂಡಾರಿ, ಸಿಕಂದರ್ ಪೆಂಡಾರಿ, ಉಸ್ಮಾನ್ ಪೆಂಡಾರಿ, ಪಾಪಾ ನಾಲಬಂದ ಉಪಸ್ಥಿತರಿದ್ದು, ಸಂಚಾಲಕ ಮೀರಾ ತಟಗಾರ ಸ್ವಾಗತಿಸಿ, ಶ್ರೀಕಾಂತ ಮಾಗಿ ವಂದಿಸಿದರು.  


ಸುದ್ದಿ ಓದಿ