ಹಗರಿಬೊಮ್ಮನಹಳ್ಳಿ

ಸಾಮಾಜಿಕ ಜಾಲಾತಾಣ ಉಪಾಧ್ಯಕ್ಷರಾಗಿ ಪರಶುರಾಮ ಆಯ್ಕೆ

ಸಾಮಾಜಿಕ ಜಾಲಾತಾಣ ಉಪಾಧ್ಯಕ್ಷರಾಗಿ ಪರಶುರಾಮ ಆಯ್ಕೆ

ಲೋಕದರ್ಶನ ವರದಿ 

 ಹಗರಿಬೊಮ್ಮನಹಳ್ಳಿ 21; ವಿಜಯನಗರ ಜಿಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಜಾಲ ತಾಣ ವಿಭಾಗದ ಉಪಾಧ್ಯಕ್ಷರಾಗಿ ಕೃಷ್ಣಾಪುರದ ಯು. ಪರಶುರಾಮ ಆಯ್ಕೆಯಾಗಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರವರ ಅನುಮೋದನೆ ಹಾಗೂ ಕ್ಷೇತ್ರದ ಶಾಸಕ ಎಸ್‌.ಭೀಮನಾಯ್ಕ ಇವರ ಶಿಫಾರಸ್ಸು ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಜಾಲತಾಣದ ರಾಜ್ಯಾಧ್ಯಕ್ಷ ಬಿ ಆರ್‌. ನಾಯ್ಡು ನೇಮಕಾತಿ ಆದೇಶ ಪ್ರತಿ ನೀಡಿದ್ದಾರೆ. ಈ ಮೂಲಕ ತಮಗೆ ನೀಡಿರುವ ಜವಬ್ದಾರಿಯನ್ನು ವಹಿಸಿಕೊಂಡು ಜಿಲ್ಲಾ/ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಸ್ಥಳೀಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷದ ಸಂಘಟನೆ, ವ್ಯಾಟ್ಸಪ್, ಪೇಸ್ಬುಕ್, ಟ್ವಿಟರ್, ಕ್ಲಬ್ ಹೌಸ್ ಮುಂತಾದ ಸಮಾಜಿಕ ಜಾಲತಾಣಗಳ ಮೂಲಕ ಪಕ್ಷ ಬಲವರ್ಧನೆ ಕೈಗೊಳ್ಳಬೇಕೆಂದು ತಿಳಿಸಿದ್ದಾರೆ. 


ಸುದ್ದಿ ಓದಿ