ಪಾಲಕರು ಮಕ್ಕಳಿಗೆ ಸಮಯ ಸಂಸ್ಕಾರ ಕೊಡಬೇಕು: ಸಮೀರ ಚಿಪ್ಪಾಡಿ
ಮಹಾಲಿಂಗಪುರ :ಮಹಾಲಿಂಗಪುರದ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರಗತಿ ಪರಿಶೀಲನೆ, ಪಾಲಕರ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಮತ್ತು ಮಕ್ಕಳ ರೀತಿ ನೀತಿಗಳನ್ನು ಹಾಗೂ ಮಕ್ಕಳ ಅಭ್ಯಾಸ ಕ್ರಮಗಳನ್ನು ಪಾಲಕರಿಗೆ ತಿಳಿಸಲಾಯಿತು. ಮಕ್ಕಳಲ್ಲಿ ಸಂಸ್ಕಾರಯುತ ಮೌಲ್ಯ ಕಲಿಸುವ ಮಹತ್ತರ ಜವಾಬ್ದಾರಿ ಪಾಲಕರದು" ಎಂದು ಆಂಗ್ಲ ಭಾಷಾ ಶಿಕ್ಷಕ ಧನಂಜಯ ಕುಲಕರ್ಣಿ ತಿಳಿಸಿದರು.
" ಎಲ್ಲ ರೀತಿಯ ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ತೊಡಗುವಂತೆ ಮಾಡಿ. ಹಿಂದುಳಿದ ಹಾಗೂ ಬಡಕುಟುಂಬದ ಮಕ್ಕಳು ನಮ್ಮ ಶಾಲೆಗೆ ಬಂದರೂ ಅವರನ್ನು ಉತ್ತಮ ನಾಗರಿಕರನ್ನಾಗಿಸುವ ಪ್ರಯತ್ನ ನಾವು ಮಾಡುತ್ತಿದ್ದು ಪಾಲಕರು ಎಲ್ಲಾ ಶಿಕ್ಷಕರಿಗೆ ಸಹಕರಿಸಬೇಕೆಂದು" ಸಮಾಜ ಶಿಕ್ಷಕ ರಮೇಶ್ ಕಂಬಾರ ತಿಳಿಸಿದರು.
ಹಿಂದಿ ವಿಷಯ ಶಿಕ್ಷಕಿಯರಾದ ಎಂ.ಜಿ. ಅಲ್ಲಾಖಾನ್ ಮಾತನಾಡಿ ಮಕ್ಕಳಿಗಾಗಿ ಆಸ್ತಿ ಮಾಡದೆ, ಮಕ್ಕಳನ್ನೇ ಆಸ್ತಿಯಾಗಿ ಮಾಡಿ ಎಂದು ಪಾಲಕರಿಗೆ ತಿಳಿಸಿದರು. ಕನ್ನಡ ಭಾಷಾ ಶಿಕ್ಷಕಿಯರಾದ .ಬಿ. ಬೆಟಗೇರಿ ಮಾತನಾಡಿ "ಪಾಲಕರ ಮೊಬೈಲ್,ಟಿವಿ ಬಳಕೆ ಕಡಿಮೆ ಮಾಡಿ ಮಕ್ಕಳ ಕಲಿಕೆಗೆ ಅವಕಾಶ ಕಲ್ಪಿಸಬೇಕು" ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಸಮೀರ ಚಿಪ್ಪಾಡಿ ಮಾತನಾಡಿ ಪಾಲಕರು ಮಕ್ಕಳಿಗೆ ಸಮಯ ಹಾಗೂ ಸಂಸ್ಕಾರ ಕೊಡಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗುರುಮಾತೆಯರಾದ ಆರ್ ಎಸ್ ಬೀಳಗಿ, ಬಿ ಎಸ್ ಜಿರಲಿ , ಖಾನವೀಲಕರ ಆರ್ಹಿ ವೈ ಕರಿಗಾರ ಹಾಗೂ ಪಾಲಕರು ಉಪಸ್ಥಿತರಿದ್ದರು. ಧನಂಜಯ ಕುಲಕರ್ಣಿ ನಿರೂಪಿಸಿದರು , ರಮೇಶ್ ಕಂಬಾರ ಸ್ವಾಗತಿಸಿ, ಪಿ ಸಿ ಫಕೀರಣ್ಣವರ ವಂದಿಸಿದರು