ಪಾಲಕರು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸಬೇಕು: ಡಾ. ಯಶವಂತ ಕೊಕ್ಕನವರ್
ಬನಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ
ಮಹಾಲಿಂಗಪುರ 09: ಪಾಲಕರು ಮಕ್ಕಳ ಮುಂದೆ ಅಸಭ್ಯವಾಗಿ ವರ್ತಿಸದೆ, ಒಳ್ಳೆಯ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದರೆ, ಅವರು ನಾಡು ಮೆಚ್ಚುವ ಕುವರರಾಗುತ್ತಾರೆ ಎಂದು ಸಂಯೋಜಕರು ಸ್ನಾತಕೋತ್ತರ ಕೇಂದ್ರ ಜಮಖಂಡಿ ಡಾ. ಯಶವಂತ ಕೊಕ್ಕನವರ್ ಬನಜಿಗ ಪಾಲಕ ಬಂಧುಗಳಿಗೆ ಕರೆ ನೀಡಿದರು.
ಸೋಮವಾರ ಸ್ಥಳೀಯ ಟೊನಪಿನಾಥ ಸಾಂಸ್ಕೃತಿಕ ಭವನದಲ್ಲಿ ಬನಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಏರಿ್ಡಸಿದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗೌರವ ಸ್ವೀಕರಿಸಿ ಮಾತನಾಡಿದರು.ಪ್ರತಿಭೆ ಯಾರ ಸ್ವತ್ತೂ ಅಲ್ಲ, ಸರಿಯಾದ ದಿಶೆಯಲ್ಲಿ ವಿಧ್ಯಾರ್ಥಿಗಳು ಪರಿಶ್ರಮಪಟ್ಟರೆ ಪುರಸ್ಕಾರಗಳು ತಾವಿದ್ದಲಿಗೆ ಅರಸಿ ಬರುತ್ತವೆ. ನಾವು ಪಡೆಯುವ ಅಂಕಗಳು ನಿಜ ಜೀವನಕ್ಕೆ ಮಾನದಂಡಗಳಲ್ಲ, ವಿಧ್ಯಾರ್ಥಿಗಳು ಆತ್ಮ ಸ್ಥೈರ್ಯ ಕಳೆದುಕ್ಕೊಳ್ಳದೆ, ಜೀವನದ ಕಠಿಣ ಸವಾಲುಗಳನ್ನೆದುರಿಸಿ ಆತ್ಮ ವಿಶ್ವಾಸ ಹೆಚ್ಚಿಸಿಕ್ಕೊಂಡು ಪಾಲಕರ ಮನೋಭಿಲಾಷೆಗಳನ್ನು ಈಡೇರಿಸಲು ಶ್ರಮಿಸಬೇಕು ಎಂದರು.
ನಾಡಿನ ಪುರಾತನ ಶೈಲಿ ಆಹಾರ ಪದ್ಧತಿಯಿಂದ ವಿಧ್ಯಾರ್ಥಿಗಳು ಆರೋಗ್ಯಯುತ ಶರೀರ ಮತ್ತು ಆಲೋಚನೆಗಳನ್ನು ಹೊಂದಬಹುದಾಗಿದೆ. ಸಮುದಾಯ ಶೈಕ್ಷಣಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಕಲೆ ಇನ್ನಿತರ ರಂಗಗಳಲ್ಲಿ ಗಣನೀಯ ಸಾಧನೆ ಮಾಡಿದೆ. 12ನೇ ಶತಮಾನದಲ್ಲಿ ವಿಶ್ವಮಾನ್ಯ ಬಸವಣ್ಣರನ್ನು, ಪ್ರಸ್ತುತ ಕರ್ನಾಟಕ ರಾಜ್ಯಕ್ಕೆ ಏಳು ಜನ ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ನಮ್ಮ ಸಮುದಾಯದು.
ಆದ್ದರಿಂದ ನಾಡಿಗೆ ನೀಡಿದ ಕೊಡುಗೆ ಭವಿಷ್ಯದಲ್ಲಿಯೂ ಚಿರಸ್ಥಾಯಿಯಾಗಿರಲು ಬನಜಿಗರು ಶ್ರಮಿಸಬೇಕು ಮತ್ತು ಇವತ್ತು ನಡೆದಿರುವ ಮಕ್ಕಳ ಪ್ರತಿಭಾ ಪುರಸ್ಕಾರ ಸಮಯೋಚಿತವಾಗಿದೆ ಹೆಚ್ಚಿನ ಸಾಧನೆ ಮಾಡುವ ಮೂಲಕ ಸಮಾಜದ ಋಣ ತೀರಿಸಲು ವಿಧ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಇವತ್ತಿನ ಅಶ್ಲೀಲ ಜಾನಪದ ಹಾಡುಗಳಿಗೆ ತಮ್ಮ ನೈತಿಕತೆಯನ್ನು ಕಳೆದುಕ್ಕೊಳ್ಳಬೇಡಿ, ಬದಲಾಗಿ ಬದುಕು ಕಟ್ಟಿಕೊಡುವ ಪುರಾತನ ಜಾನಪದ ಸಾಹಿತ್ಯ ಕೃಷಿ ಮಾಡಿ ಎಂದು ಕೆಲ ಹಾಡುಗಳನ್ನು ಹಾಡುವ ಮೂಲಕ ಸಭಿಕರನ್ನು ಮಂತ್ರ ಮುಗ್ಧರನ್ನಾಗಿಸಿದರು.
ಸ್ಥಳೀಯ ಘಟಕಾಧ್ಯಕ್ಷ ಚಂದ್ರಶೇಖರ ಗೊಂದಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಯುವಕ, ಯುವತಿಯರು ಸಮಾಜದ ಆಧಾರ ಸ್ತಂಭಗಳು.ನಿಮ್ಮಲ್ಲಿ ಅಪಾರ ಜ್ಞಾನವಿದೆ.ಅದಕ್ಕೆ ರಾಜ್ಯ ಬನಜಿಗ ಸಮಾಜ ನಿಮ್ಮ ಬೆಂಬಲಕ್ಕೆ ನಿಂತಿದೆ. ಸದುಪಯೋಗಪಡಿಸಿಕ್ಕೊಂಡು ನಮ್ಮ ಹಿರಿಯರು ನಾಡಿಗೆ ನೀಡಿದ ಕೊಡುಗೆಗಳನ್ನು ತಾವು ಮುಂದುವರಿಸಿ ಈ ಕಾರಣದಿಂದ ಪ್ರತಿಭಾ ಪುರಸ್ಕಾರ ಸಮಾರಂಭ ಏರಿ್ಡಸಲಾಗಿದೆ ಎಂದು ಮಕ್ಕಳನ್ನು ಹುರಿದುಂಬಿಸಿದರು.
ಭವ್ಯ ವೇದಿಕೆಯಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆ, ಪಟ್ಟಣ ಮತ್ತು ಬನಜಿಗ ಸಮಾಜದ ಕೀರ್ತಿ ಹೆಚ್ಚಿಸಿದ ವಿಧ್ಯಾರ್ಥಿ/ನಿಯರನ್ನು, ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಈಶ್ವರ್ಪ ಬಿದ್ರಿ, ಮಹಾಲಿಂಗಪ್ಪ ಕುಳ್ಳೋಳ್ಳಿ, ಬಸವರಾಜ ಘಟ್ನಟ್ಟಿ, ಮಹಾಲಿಂಗಪ್ಪ ಅವರಾದಿ, ಸಂಜಯ ಅಂಗಡಿ, ಮಹಾದೇವಿ ಹುಕ್ಕೇರಿ, ರಂಜನಾ ಘಟ್ನಟ್ಟಿ, ಚನಬಸು ಹೊಸೂರು ವೇದಿಕೆ ಮೇಲೆ ಉಪಸ್ಥಿತರಿದ್ದರು
ಶೇಖರ ಅಂಗಡಿ, ಶಶಿಧರ ನಕಾತಿ, ಬಸವರಾಜ ಮುಂಗರವಾಡಿ, ಸುರೇಶ್ ಬಂಡಿ, ಬಸವರಾಜ ಕಬ್ಬೂರ, ಸಂತೋಷ ತಿಪಶೆಟ್ಟಿ, ಗಂಗಾಧರ ಸಕ್ರಿ, ಆನಂದ ಸಗ್ರಿ, ಶೇಖರ ಬಂಡಿ, ಅಶೋಕ ಜ ಅಂಗಡಿ, ಸಂಗಪ್ಪ ಲಿಗಾಡಿ ಹಾಗೂ ಎಲ್ಲ ವಿಭಾಗಿಯ ಸದಸ್ಯರು, ಬನಜಿಗ ಬಾಂಧವರು ಮುಂತಾದವರಿದ್ದು, ಪರಿಚಯ ಭಾಷಣ ಪ್ರೀತಿ ಸಗರಿ, ರಮೇಶ್ ಹರಕಂಗಿ ನಿರೂಪಿಸಿ, ನಿವೃತ್ತ ಉಪನ್ಯಾಸಕ ವಿ ಎಸ್ ಅಂಗಡಿ ಸ್ವಾಗತಿಸಿ, ಅಣ್ಣಪೂರ್ಣ ಮುಂಗರವಾಡಿ ವಂದಿಸಿದರು.