ಯುವಕರ ನಾಟಕರಂಗಕ್ಕೆ ಪೋಷಕರು ಪ್ರೋತ್ಸಾಹ ಅಗತ್ಯ : ಡಾ. ಮಂಜುಳ ಚೆಲ್ಲೂರು
ಬಳ್ಳಾರಿ 04 : (04)ರಂದು ನಗರದ ರಾಘವ ಮೆಮೋರಿಯಲ್ ಅಸೋಸಿಯೇಷನ್(ರಿ) ಬಳ್ಳಾರಿ ಇವರು ಆಯೋಜಿಸಿದ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ 144ನೇ ಜಯಂತಿಯನ್ನು ಅನಂತಪುರ ರಸ್ತೆಯ ರಾಘವ ಕಲಮಂದಿರದಲ್ಲಿ ಕಾರ್ಯಕ್ರಮ ಏರಿ್ಡಸಲಾಗಿತ್ತು. ಇದೇ ವೇಳೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇರಳ, ಕಲ್ಕತ್ತಾ ಮತ್ತು ಮುಂಬೈನ ನಿವೃತ್ತ ಮುಖ್ಯ ನ್ಯಾಯ ಮೂರ್ತಿಗಳು ಡಾ. ಮಂಜುಳಾ ಚೆಲ್ಲೂರು ರವರು ಮಾತನಾಡಿ, ಅಂಗವಾಗಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ನಾಟಕೋತ್ಸವ ಎರಡನೇ ದಿನದ ಕಾರ್ಯಕ್ರಮನ ಉದ್ದೇಶಿಸಿ ಒಂದು ಕಣ್ಣಿನಲ್ಲಿ ಶಾಂತಿಯು ಇನ್ನೊಂದು ಕಣ್ಣಲ್ಲಿ ಕ್ರೋಧವನ್ನು ತೋರಿಸುವ ನಟನೆ ರಾಘವರಿಗೆ ಮಾತ್ರ ಸಾಧ್ಯ ಕಾಲಕ್ಕೆ ತಕ್ಕ ಹಾಗೆ ನಾಟಕಗಳು ಸಹ ಬದಲಾಗಬೇಕು ಯುವಕರು ನಾಟಕ ರಂಗಕ್ಕೆ ಬರಲು ಪೋಷಕರು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರಾಘವ ಮೆಮೋರಿಯಲ್ ಅಸೋಸಿಯೇಷನ್ನ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ತಿಂಗಳು ತೆಲುಗು ಮತ್ತು ಕನ್ನಡ ನಾಟಕಗಳನ್ನು ಪ್ರದರ್ಶಿಸಿ ಕಲಾವಿದರಿಗೆ ಬೇಕಾಗುವ ಎಲ್ಲಾ ಸಹಕಾರವನ್ನು ನಾವು ಒದಗಿಸುತ್ತಿದ್ದೇವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ನ ಅಧ್ಯಕ್ಷ ಕೆ. ಕೋಟೇಶ್ವರರಾವ್ ರವರು ಹೇಳಿದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಆಂಧ್ರ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಅಂತರಾಷ್ಟ್ರೀಯ ನಟ ವಾಡ್ರೇವು ಸುಂದರ್ರಾವ್ ರವರು ಮಾತನಾಡುತ್ತಾ ಬಳ್ಳಾರಿಯಲ್ಲಿ ರಾಘವ ಕಲಾಮಂದಿರ ಸ್ಥಾಪನೆಯಾದ ದಿನದಿಂದ ನಾಟಕಕ್ಕೆ ಕಲಾವಿದರಿಗೆ ಮರು ಜೀವ ಬಂದಿದೆ ಎಂದರೆ ತಪ್ಪಾಗಲಾರದು ಜಿಲ್ಲೆಯಲ್ಲಿ ನಾಟಕದ ವೈಭವವನ್ನು ಹೆಚ್ಚಿಸಿದ ಕೀರ್ತಿ ರಾಘವರಿಗೆ ಸಲ್ಲುತ್ತದೆ. ರಾಘವರ ನಟನೆಯನ್ನು ನೋಡಿದ ವಿದೇಶಿ ನಾಟಕಕಾರರೊಬ್ಬರು ನೀವು ನಮ್ಮ ದೇಶಕ್ಕೆ ಬಂದರೆ ಶೇಕ್ಸ್ಪಿಯರ್ ನನ್ನ ಮೀರಿಸುತ್ತಿದ್ದೀರಿ ಎಂದು ಹೇಳಿದರು. ಈ ವರ್ಷದ ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಕೊನೇಟಿ ಸುಬ್ಬರಾಜು ಇವರು ಮಾತನಾಡುತ್ತಾ ನಾಟಕ ಸಿದ್ಧತೆ ಮಾಡಿ ಪ್ರದರ್ಶಿಸುವವರೆಗೆ ಹಲವಾರು ತೊಂದರೆಗಳು ಬರುತ್ತವೆ ನಾಟಕ ಪ್ರದರ್ಶನವಾದ ಮೇಲೆ ಉಂಟಾಗುವ ಸಂತೋಷ ಬೇರೆಲ್ಲೂ ಸಿಗುವುದಿಲ್ಲ ರಂಗಭೂಮಿಯಲ್ಲಿ ರಾಘವರು ಬಹುದೊಡ್ಡ ಸಾಧಕರು ಅಂಥವರ ಹೆಸರಿನಲ್ಲಿ ನನಗೆ ಪ್ರಶಸ್ತಿ ಲಭಿಸಿರುವುದು ನನ್ನ ಜನ್ಮ ಜನ್ಮದ ಪುಣ್ಯ ಎಂದು ತಿಳಿಸಿದರು.
ವೇದಿಕೆಯ ಮೇಲೆ ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪ. ಉಪಾಧ್ಯಕ್ಷ ರಮೇಶ್ ಗೌಡ ಪಾಟೀಲ ಎಚ್. ವಿಷ್ಣುವರ್ಧನ ರೆಡ್ಡಿ ಕಾರ್ಯದರ್ಶಿ ನಾಮ ಪ್ರಕಾಶ ಜಂಟಿ ಕಾರ್ಯದರ್ಶಿ ಎಂ. ರಾಮಾಂಜನೇಯಲು ಸರ್ಕಾರಿ (ಮಾ. ಪು.) ಕಾಲೇಜಿನ ಅರ್ಥಶಾಸ್ತ್ರ ನಿವೃತ್ತ ಉಪನ್ಯಾಸಕ ಬಸವರಾಜ್, ಖಜಾಂಚಿ ಪಿ. ಧನಂಜಯ ವೇದಿಕೆ ನಿರ್ವಹಣ ರಾಮಣಪ್ಪ ಭಜಂತ್ರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಲಾವಿದರು ಕಲಾಭಿಮಾನಿಗಳು ಕಲಾಪೋಷಕರು ಪಾಲ್ಗೊಂಡು ಯಶಸ್ವಿಗೊಳಿಸಿದರು.