ಶಿಗ್ಗಾವ್

ನೂತನ ಅಧ್ಯಕ್ಷರಾಗಿ ಪರಮೇಶ ಲಮಾಣಿ ಅವಿರೋಧವಾಗಿ ಆಯ್ಕೆ

ನೂತನ ಅಧ್ಯಕ್ಷರಾಗಿ ಪರಮೇಶ ಲಮಾಣಿ ಅವಿರೋಧವಾಗಿ ಆಯ್ಕೆ

ಶಿಗ್ಗಾವಿ 29: ಶಿಗ್ಗಾವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪರಮೇಶ ಲಮಾಣಿ ಅವಿರೋಧವಾಗಿ ಆಯ್ಕೆಯಾದರು. 

ಸಭೆಯ ಪ್ರಕ್ರಿಯೆಯಲ್ಲಿ ರಾಜ್ಯ ಸಂಘದ ಕಾರ್ಯದರ್ಶಿ ನಿಂಗಪ್ಪಾ ಚಾವಡಿ, ಸಂಘದ ಜಿಲ್ಲಾ ಚುನಾವಣಾ ಉತ್ಸುವಾರಿ ಸಂತೋಷ ಮಾಹಾಜನಶೆಟ್ಟರ, ಮತ್ತು ಹಿರಿಯ ಪತ್ರಕರ್ತ ಮನೋಹರ ಮಲ್ಲಾಡಿ, ಜಿಲ್ಲಾ ಸಂಘದ ಉಪಾದ್ಯಕ್ಷ ಬಿ ಎಸ್ ಹಿರೇಮಠ ಅವರ ಸಮ್ಮುಖದಲ್ಲಿ ಶಿಗ್ಗಾವಿ ತಾಲೂಕಾ ಸಂಘದ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ಜರುಗಿತು. 

ಗೌರವಾದ್ಯಕ್ಷರಾಗಿ ಹಿರಿಯ ವರದಿಗಾರ ಬಸವರಾಜ ಹೊಣ್ಣಣ್ಣನವರ, ಉಪಾದ್ಯಕ್ಷರಾಗಿ ಬಸವರಾಜ ಹಡಪದ, ಪ್ರಧಾನ ಕಾರ್ಯದರ್ಶಿಯಾಗಿ ಗೌಡಪ್ಪಾ ಬನ್ನೆ, ಕಾರ್ಯದರ್ಶಿಯಾಗಿ ವಿಶ್ವನಾಥ ಬಂಡಿವಡ್ಡರ, ಖಜಾಂಚಿಯಾಗಿ ಮಂಜುನಾಥ ಕಮ್ಮಾರ ಆಯ್ಕೆ ಮಾಡಲಾಯಿತು. 

ನಂತರ ನೂತನ ಅದ್ಯಕ್ಷ ಮತ್ತು ಪದಾಧಿಕಾರಿಗಳನ್ನ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ರವಿ ಉಡುಪಿ, ಸದಾಶಿವಯ್ಯ ಹಿರೇಮಠ, ಈಶ್ವರಗೌಡ ಕರಿಗೌಡ್ರ, ಸುಧಾಕರ ದೈವಜ್ಞಾ, ಸುರೇಶ ಯಲಿಗಾರ, ದೇವರಾಜ ಸುಣಗಾರ, ಶಿವಕುಮಾರ ಸ್ವಾಮಿ ಕೋಟಗಿಮಠ, ಮಹಲಿಂಗಸ್ವಾಮಿ ಹಿರೇಮಠ ಸೇರಿದಂತೆ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಇದ್ದರು. 


ಸುದ್ದಿ ಓದಿ