ವಿಜಯನಗರ ಅಧ್ಯಯನ ವಿಚಾರ ಸಂಕಿರಣದ ಸರ್ವಾಧ್ಯಕ್ಷರಾಗಿ ಪರಮಶಿವಮೂರ್ತಿ ಆಯ್ಕೆ
ವಿಜಯನಗರ ಅಧ್ಯಯನ ವಿಚಾರ ಸಂಕಿರಣದ ಸರ್ವಾಧ್ಯಕ್ಷರಾಗಿ ಪರಮಶಿವಮೂರ್ತಿ ಆಯ್ಕೆ
ವಿಜಯನಗರ 28 : ಕರ್ನಾಟಕ ಸರ್ಕಾರದ ವಿಜಯನಗರ ಜಿಲ್ಲಾ ಆಡಳಿತದಿಂದ ನಡೆಯುವ ಪ್ರತಿಷ್ಠಿತ ಹಂಪಿ ಉತ್ಸವದ ನಿಮಿತ್ಯವಾಗಿ ಪುರಾತತ್ವ, ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರು ವತಿಯಿಂದ ಇದೇ 2025ರ ಮಾರ್ಚ್ 1 ಮತ್ತು 2ರಂದು ಹಂಪಿಯಲ್ಲಿ ಜರುಗುವ ವಿಜಯನಗರ ಅಧ್ಯಯನದ ಕುರಿತ 27ನೇ ವಾರ್ಷಿಕ ವಿಚಾರ ಸಂಕಿರಣದ ಸರ್ವಾಧ್ಯಕ್ಷರಾಗಿ ನಾಡಿನ ಶ್ರೇಷ್ಠ ಶಾಸನತಜ್ಞರಾದ ಡಾ. ಡಿ.ವಿ. ಪರಮಶಿವಮೂರ್ತಿ ಕುಲಪತಿಗಳು ಕನ್ನಡ ವಿಶ್ವವಿದ್ಯಾಲಯ ಹಂಪಿ ಆಯ್ಕೆಯಾಗಿರುವರು. ಈ ವಿಚಾರ ಸಂಕಿರಣದಲ್ಲಿ ನಾಡಿನ ವಿವಿಧ ರಾಜ್ಯಗಳ ಸುಮಾರು 70 ವಿದ್ವಾಂಸರುಗಳು ತಮ್ಮ ಸಂಶೋಧನ ಪ್ರಬಂಧಗಳನ್ನು ಮಂಡಿಸುವರು.