ಅಂತರರಾಷ್ಟ್ರೀಯ

ಪ್ಯಾರಾ ಒಲಿಂಪಿಕ್ಸ್ : ಭಾರತಕ್ಕೆ ಮೊದಲ ಚಿನ್ನ

ಪ್ಯಾರಾ ಒಲಿಂಪಿಕ್ಸ್  : ಭಾರತಕ್ಕೆ ಮೊದಲ ಚಿನ್ನ

ಟೋಕಿಯೋ ,  ಆಗಸ್ಟ್ 30 : ಟೋಕಿಯೋ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಸಿಕ್ಕಿದೆ. ಮಹಿಳಾ ಶೂಟರ್ ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ   10 ಮೀಟರ್ ನ  ಏರ್ ರೈಫಲ್ ಶೂಟಿಂಗ್ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ  ಕೀರ್ತಿ  ತಂದಿದ್ದಾರೆ. 

ದೇಶ ಕ್ರೀಡಾ ದಿನದ ಸಂಭ್ರಮದಲ್ಲಿರುವಾಗಲೇ ಭಾರತಕ್ಕೆ ಚಿನ್ನದ ಪದಕ  ದೊರಕಿರುವುದು  ದೇಶದ ಜನರ  ಸಂತಸವನ್ನು ಇಮ್ಮಡಿಗೊಳಿಸಿದೆ. 

ಜೈಪುರ ಮೂಲದ 19 ವರ್ಷದ ಅವನಿ ಲೆಖಾರಾ ಟೋಕಿಯೋ ಒಲಿಂಪಿಕ್ಸ್ನಲ್ಲಿ ಈ ಬಾರಿ ಭಾಗವಹಿಸಿದ ಅತಿ ಕಿರಿಯ ಪ್ಯಾರಾ ಅಥ್ಲೀಟ್ ಎನಿಸಿಕೊಂಡಿದ್ದರು. ಇದೀಗ ಸ್ವರ್ಣ ಪದಕ ಬೇಟೆಯಾಡುವುದರೊಂದಿಗೆ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ದೇಶದ ಮೊದಲ ಮಹಿಳಾ ಕ್ರೀಡಾಪಟು ಎನ್ನುವ ಕೀರ್ತಿಗೆಭಾಜನರಾಗಿದ್ದಾರೆ. 

ಅವನಿ ಚಿನ್ನದ ಪದಕ  ಮುಡಿಗೇರಿಸಿಕೊಂಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ  ಅಭಿನಂದಿಸಿ,  ಅಸಾಧಾರಣ ಪ್ರದರ್ಶನ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ  ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. 

ಸುದ್ದಿ ಓದಿ