ಅನೈತಿಕ ಸಂಬಂದ ನೋಡಿದ್ದ ತನ್ನ ಪುತ್ರನ ಹತ್ಯೆ ಮಾಡಿದ್ದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಬೆಳಗಾವಿ : ತಾನು ಪರಪುರಷನ ಜೊತೆಗೆ ಹೊಂದಿದ್ದ ಅನೈತಿಕ ಸಂಬಂದವನ್ನು ತನ್ನ ಕಣ್ಣಾರೆ ನೋಡಿದ್ದ 10 ವರ್ಷದ ತನ್ನ ಪುತ್ರನನ್ನು ಬಾವಿಯಲ್ಲಿ ದೂಡಿ ಹತ್ಯೆ ಮಾಡಿದ ಪಾಪಿ ತಾಯಿಯೋರ್ವಳಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ, 7 ಸಾವಿರ ದಂಡ ವಿಧಿಸಿ ಆದೇಶ ನೀಡಿದೆ.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಕರಿಗಾರ(31) ಇತಳು ಜೀವಾವಧಿ ಶಿಕ್ಷೆಗೆ ಒಳಗಾದ ಪಾಪಿ ತಾಯಿಯಾಗಿದ್ದಾಳೆ.
ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 22-10-2019ರಲ್ಲಿ ನಡೆದಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ 7ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಈ ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವೈ.ಜಿ.ತುಂಗಳ ವಾದ ಮಂಡಿಸಿದರು.
ಘಟನೆಯ ಸಾರಾಂಶ : ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಶ್ರೀಮತಿ ಸುಧಾ ಕರಿಗಾರ(31) ಇತಳು ಸಾಕ್ಷಿದಾರರಾದ ರಾಮಪ್ಪ ಬಸ್ತವಾಡ ಇತನ ಜೊತೆ ಅನೈತಿಕ ಸಂಬಂಧ ಹೊಂದಿದಾಗ ಆರೋಪಿತಳ ಹಿರಿಯ ಮಗ ಪ್ರವೀಣ(10) ತಂದೆಗೆ ಹೇಳುತ್ತೇನೆಂದು ಓಡಿ ಹೋದಾಗ ಅವನಿಗೆ ಕರೆದು 50 ರೂ. ಹಣ ನೀಡಿ ಅಂಗಡಿಯಲ್ಲಿ ತಿನಿಸು ತರಲು ಹೇಳಿ ಕಳಿಸಿರುತ್ತಾಳೆ. ಅವನ ಜೊತೆ ಚಿಕ್ಕ ಮಗ ಪ್ರಜ್ವಲ(8) ಅವನ ಜೊತೆಗೆ ಕಳಿಸಿ ಅವರ ಹಿಂದಿನಿಂದ ಹೋದ ಆರೋಪಿತಳು ಬೆಲ್ಲದ ಬಾಗೇವಾಡಿ ಉದಯಕುಮಾರ ಪಾಟೀಲ ಎಂಬುವವರ ಜಮೀನಿನಲ್ಲಿರುವ ಬಾವಿಯಲ್ಲಿ ನುಗಿಸಿ ಕೊಲೆ ಮಾಡಿರುತ್ತಾಳೆ.
ಇನ್ನೋಬ್ಬ ಮಗ ಪ್ರಜ್ವಲ ಇವನಿಗೆ ನೀನು ಯಾರ ಮುಂದೆಯಾದರೂ ಹೇಳಿದರೆ ನಿನಗೂ ಸಹ ಹೀಗೆ ಮಾಡಿ ಸಾಯಿಸಿ ಬಿಡುತ್ತೇನೆ ಅಂತ ಜೀವದ ಅಂಜಿಕೆ ಹಾಕಿದ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.
ಈ ಪ್ರಕಣದ ತನಿಖೆಯನ್ನು ಮಾಡಿ ಆಗೀನ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ ನ್ಯಾಯಾಲಯಕ್ಕೆ ದೋಷಾರೋಪಣ ವರದಿ ಸಲ್ಲಿಸಿದ್ದರು. ಬಳಿಕ ವಿಚಾರಣೆ ನಡೆಸಿದ ಚಿಕ್ಕೋಡಿಯ 7ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪುತ್ರನನ್ನು ಕೊಂದ ಪಾಪಿ ತಾಯಿಗೆ ಜೀವಾವಧಿ ಶಿಕ್ಷೆ ಹಾಗೂ 7 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.