ಮಳೆಗೆ ಪೇಪರಮಿಲ್ಲಿನ ಆವರಣ ಗೋಡೆ ಕುಸಿದು, ನಾಲ್ಕು ಕಟ್ಟಡಗಳಿಗೆ ಹಾನಿ
ಲೋಕದರ್ಶನ ವರದಿ
ದಾಂಡೇಲಿ 07: ದಾಂಡೇಲಿಯಲ್ಲಿ ಸುರಿಯುತ್ತಿರುವ ಮಳೆಯ ಪರಿಣಾಮ ಹಳಿಯಾಳ ರಸ್ತೆಯಲ್ಲಿರುವ ವೆಸ್್ಟಕೋಸ್ಟ್ ಪೇಪರಮಿಲ್ಲಿನ ಆವರಣ ಗೋಡೆ ಕುಸಿದು, ಸಮೀಪದ ನಾಲ್ಕು ಮನೆಗಳ ಹಿಂಭಾಗದ ಕಟ್ಟಡಗಳಿಗೆ ಹಾನಿಯಾಗಿದೆ. ಗೋಡೆ ಕುಸಿದ ಪರಿಣಾಮ ನೀರಿನ ಪೂರೈಕೆ ಪೈಪ್ ಲೈನ್ ಹಾಗೂ ಮನೆಗಳ ಗೋಡೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ. ಘಟನೆ ನಡೆದ ಸ್ಥಳಕ್ಕೆ ಕಾಗದ ಕಾರ್ಖಾನೆಯ ಅಧಿಕಾರಿಗಳು ಭೇಟಿ ನೀಡಿ ಪರೀಶೀಲನೆ ನಡೆಸಿದ್ದು ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ವೇಳೆ ನಗರದ ಸೋಮಾನಿ ಸರ್ಕಲ್ ಬಳಿ ಮರದ ಟೊಂಗೆ ಬಿದ್ದು ಕಂಪ್ಯೂಟರ್ ಅಂಗಡಿಗೆ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮರದ ಟೊಂಗೆ ಮೇಲ್ಚಾವಣಿ ಮೇಲೆ ಬಿದ್ದ ಪರಿಣಾಮ ಒಡೆದ ಶೀಟ್ಗಳು, ಟೊಂಗೆ ಅಂಗಡಿಯೊಳಗೆ ಬಿದ್ದಿದೆ. ಇದರಿಂದ ಸುಮಾರು 70 ಸಾವಿರ ರೂಪಾಯಿಗಳ ಕಂಪ್ಯೂಟರ್, ಪ್ರಿಂಟರ್ ಪರಿಕರಗಳು ಹಾಳಾಗಿ ಹಾನಿ ಸಂಭವಿದೆ ಎಂದು ಹೇಳಲಾಗಿದೆ. ಈ ಅಂಗಡಿ ಚೇತನ ನಾಯ್ಕ ಅವರಿಗೆ ಸೇರಿದ್ದಾಗಿದೆ.