ಮಹಲಿಂಗಪುರ

ದೇಶದ ಕಟ್ಟಕಡೆಯ ವ್ಯಕ್ತಿಗೂ ರಾಜನೀತಿಯ ಅವಕಾಶ ಕಲ್ಪಿಸುವ ಸಂಘ ಕಟ್ಟಿದ ದೀನದಯಾಳ್ ಉಪಾಧ್ಯಾಯ: ಬಾಳಿಕಾಯಿ

ದೇಶದ ಕಟ್ಟಕಡೆಯ ವ್ಯಕ್ತಿಗೂ ರಾಜನೀತಿಯ ಅವಕಾಶ ಕಲ್ಪಿಸುವ ಸಂಘ ಕಟ್ಟಿದ ದೀನದಯಾಳ್ ಉಪಾಧ್ಯಾಯ:  ಬಾಳಿಕಾಯಿ

ಮಹಾಲಿಂಗಪುರ30: ರಾಜನೀತಿಯು ಕೇವಲ ಕೆಲವರಿಗೆ ಸೀಮಿತವಾಗಿದ್ದ ಕಾಲದಲ್ಲಿ ದೇಶದ ಕಟ್ಟಕಡೆಯ ವ್ಯಕ್ತಿಗೂ ರಾಜನೀತಿಯ ಅವಕಾಶ ಕಲ್ಪಿಸುವ ಸಲುವಾಗಿ ಸಂಘ ಕಟ್ಟಿದ ದೀನದಯಾಳ್ ಉಪಾಧ್ಯಾಯ ಕೇವಲ ವ್ಯಕ್ತಿಯಲ್ಲ ದೇಶದ ಶಕ್ತಿ ಎಂದು ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.  

ಸ್ಥಳೀಯ  ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ ಸೆ. 29 ರಂದು ಸೇವೆ ಮತ್ತು ಸಮರಾ​‍್ಣ ಅಭಿಯಾನದ ಅಂಗವಾಗಿ ತೇರದಾಳ ಮತಕ್ಷೇತ್ರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಪಂಡಿತ ದೀನದಯಾಳ ಉಪಾಧ್ಯಾಯ ಜನ್ಮಜಯಂತಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. 

ಪಂಡಿತ ದೀನದಯಾಳ ಅವರು ಭಾರತೀಯತೆಯ ಆಧಾರದ ಮೇಲೆ ಪಕ್ಷವನ್ನು ಕಟ್ಟಿದರು. ರಾಷ್ಟ್ರಕ್ಕೆ ಆತ್ಮವಿದೆ ಎಂಬುದರ ಅನುಷ್ಠಾನಕ್ಕಾಗಿ ಮಣ್ಣಿನ ಗುಣಕ್ಕನುಗುಣವಾಗಿ ಸ್ವಭಾಷ, ಸ್ವಭೂಷ, ಸ್ವಧರ್ಮ ತತ್ವಗಳು, ಭಾರತೀಯ ಋಷಿ ಪರಂಪರೆ, ಜ್ಞಾನ ಪರಂಪರೆ ಸೇವೆ, ತ್ಯಾಗ, ಸಮರೆ​‍್ಣಯ ರಕ್ಷಣೆಗಾಗಿ ಬಿಜೆಪಿ ಪಕ್ಷವನ್ನು ಕಟ್ಟಿದರು. ಕನಸಿನಲ್ಲಿಯೂ ಅಧಿಕಾರ ಬಯಸಿದವರಲ್ಲ ಅಂದು ಕಟ್ಟಿದ ಬಿಜೆಪಿ ಮುನ್ನಡೆಯುತ್ತಿದ್ದು ಎಂದೂ ವಿಭಜನೆಯಾಗಿಲ್ಲ ಆದರೆ ಕಾಂಗ್ರೆಸ್ 40 ಬಾರಿ ವಿಭಜನೆಯಾಗಿದೆ. 

ಬದುಕಿನ ಆದರ್ಶಗಳನ್ನು ಕೃತಿ ಮತ್ತು ನಡವಳಿಕೆಯ ಮೂಲಕ ಅಕ್ಷರಶಃ ಜಗತ್ತಿಗೆ ತೋರಿಸಿ ಜಾತಿಯನ್ನು ನೀತಿಯಾಗಿ, ನೀತಿ ಕೇಂದ್ರಿತ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಪ್ರೇರಣಾ ಶಕ್ತಿ ಹಾಗೂ ಅಂತ್ಯೋದಯ ಹರಿಕಾರ ದೀನದಯಾಳ ಉಪಾಧ್ಯಾಯ.ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ಶಿಕ್ಷಣ ಕ್ಷೇತ್ರದ ಸ್ವಾತಂತ್ರ್ಯ. ಸ್ವಚ್ಛ ಭಾರತ ಅಭಿಯಾನ, ಶೌಚಾಲಯ, ಆಯುಷ್ಮಾನ್ ಭಾರತ್, ಉಜ್ವಲ, ಜನೌಷಧಿ ಕೇಂದ್ರ, ವಿದೇಶಿ ಬಾಂಧವ್ಯಗಳು ಬಿಜೆಪಿಯ ಶಕ್ತಿ ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ವಸುದೈವ ಕುಟುಂಬಕಂ ಎಂಬ ತತ್ವದ ಆಧಾರದಲ್ಲಿ ನಮ್ಮ ಯೋಗ ಜ್ಞಾನವನ್ನು ಜಗತ್ತಿನ190 ದೇಶಗಳು ಸ್ವೀಕರಿಸಿ, ನಮ್ಮ ಜ್ಞಾನ ಪರಂಪರೆಯ ಮೇಲೆ ವಿಶ್ವಾಸವನ್ನು ತೋರಿಸಿ ಭಾರತ ವಿಶ್ವಗುರುವಾಗಿದೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ಜನಸಂಘದ ಹಿರಿಯ ಅನಿಲ್ ಜೋಶಿ ಮಾತನಾಡಿ, ಅಂದು ಯಾವುದೋ ಒಂದು ಮೂಲೆಯಲ್ಲಿ ನಡೆಯುತ್ತಿದ್ದ ಜನಸಂಘ ಕಾರ್ಯ ಇಂದು ಇಷ್ಟು ಅದ್ದೂರಿಯಾಗಿ ನಡೆಯುತ್ತಿದೆ. ಕೇವಲ 51 ವರ್ಷಗಳ ಜೀವಿತಾವಧಿಯಲ್ಲಿ 500 ವರ್ಷಗಳಲ್ಲಿ ಮಾಡುವ ಕೆಲಸ ಹಾಗೂ ಕಾರ್ಯ ಉಪಾಧ್ಯಾಯರಿಂದಾಗಿದೆ ಎಂದರು.  

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾಧರ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತೀಯ ಸಂಸ್ಕೃತಿ, ಪರಂಪರೆಯ ರಕ್ಷಣೆಗಾಗಿ ಉದಯಿಸಿದ ಬಿಜೆಪಿ ದೇಶದ ಉದ್ದಗಲಕ್ಕೂ ಶಕ್ತಿಶಾಲಿಯಾಗಿದೆ. ಕನಸಿನಲ್ಲಿಯೂ ಅವರು ಅಧಿಕಾರ ಬಯಸಿದವರಲ್ಲ. ಇಂದಿನ ಬಿಜೆಪಿಯ ಶಕ್ತಿ ಮತ್ತು ವ್ಯಾಪ್ತಿ, ಅಧಿಕಾರ ಉಪಾಧ್ಯಾಯರ ಭಿಕ್ಷೆ ಎಂದರು.  

ಕಾರ್ಯಕ್ರಮದಲ್ಲಿ ಜನಸಂಘದ ಸದಸ್ಯರಾದ ವೀರಭದ್ರ ಮುಗಳ್ಯಾಳ, ಶ್ರೀಶೈಲ ಮಠದ, ಶಂಕರ ಕೋಳಿಗುಡ್ಡ, ಅನೂಪ ತಿಪ್ಪಾ, ಶಿವಾನಂದ ಮಾಲಬಸರಿ, ಸಂತೋಷ ಹುದ್ದಾರ, ವಿದ್ಯಾಧರ ಸವದಿ, ಮಂಜು ಗೊಂಬಿ, ಶ್ರೀಶೈಲಗೌಡ ಪಾಟೀಲ, ಹನುಮಂತ ಬಿರಾದಾರ, ವಿಜಯಾನಂದ ಇಂಗಳಗಾವಿ, ಈರಣ್ಣ ಹುಂಡಿ ಇವರನ್ನು ಸನ್ಮಾನಿಸಲಾಯಿತು.  

ಜನಸಂಘದ ಹಿರಿಯರಾದ ಮನೋಹರ ಗುಂಡಾ, ಬಸನಗೌಡ ಪಾಟೀಲ, ಮಹಾಲಿಂಗಪ್ಪ ಕುಳ್ಳೊಳ್ಳಿ, ಶ್ರೀಮಂತ ಹಳ್ಳಿ, ಮನೋಹರ ಶಿರೋಳ, ಈರ​‍್ಪ ದಿನ್ನಿಮನಿ, ಲಕ್ಕಪ್ಪ ಚಮಕೇರಿ, ಸುರೇಶ ಅಕ್ಕಿವಾಟ, ಆನಂದ ಕಂಪು, ಅಶೋಕಗೌಡ ಪಾಟೀಲ, ಗುರುಪಾದ ಅಂಬಿ, ಅನಿಲ ಮಮದಾಪುರ ಮತ್ತು ಸಂಘದ ಕಾರ್ಯಕರ್ತರು, ಪುರಸಭಾ ಸದಸ್ಯರು ಹಾಗೂ ಇತರರು ಇದ್ದರು. 


ಸುದ್ದಿ ಓದಿ