ಮಹಲಿಂಗಪುರ

ಪಂಡಿತ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆ ,

ಪಂಡಿತ ಜವಾಹರಲಾಲ್ ನೆಹರೂ ಜನ್ಮ ದಿನಾಚರಣೆ ,

ಮಹಾಲಿಂಗಪುರ 14: ಸಮೀಪದ ರನ್ನಬೆಳಗಲಿಯ ಬಂದ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ. ಅಂಗನವಾಡಿಗಳ ಸಹಯೋಗದಲ್ಲಿ ಭಾರತ ರತ್ನ ಪಂಡಿತ ಜವಾಹರಲಾಲ್ ನೆಹರೂ ಅವರ 132 ನೇ ಜನ್ಮ ದಿನಾಚರಣೆ ಆಚರಿಸಲಾಯಿತು. 

ಕಾರ್ಯಕ್ರಮದ ಮುಖ್ಯ ಅತಿಥಿ ಭಾಜಪ ಧುರೀಣ ಪಂಡಿತ. ಪೂಜಾರಿ ಮಾತನಾಡಿ, ಚಾಚಾ ನೆಹರೂಜಿ ಅವರಿಗೆ ಮಕ್ಕಳೆಂದರೆ ಪ್ರೀತಿ. ನಿತ್ಯ ಮಕ್ಕಳ ಜೊತೆ ಕಾಲ ಕಳೆದು, ಕಲ್ಮಶವಿಲ್ಲದ ಆ ಮಕ್ಕಳ ನಗುವಿನಲ್ಲಿ ನೆಮ್ಮದಿ ಕಾಣುತ್ತಿದ್ದರು. ಹೀಗಾಗಿ ತಮ್ಮ ಜನ್ಮದಿನವನ್ನು ಮಕ್ಕಳಿಗಾಗಿಯೇ ಮೀಸಲಿಟ್ಟು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲು ತಿಳಿಸಿ ಹೋಗಿದ್ದಾರೆ. ನಾವೂ ಸಹ ಮಕ್ಕಳ ಜೊತೆ ಬೆರೆತು ಅವರ ಪ್ರೀತಿಯನ್ನು ಪಡೆಯೋಣ ಎಂದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಂಗನವಾಡಿಗಳ ಮೇಲ್ವಿಚಾರಕಿ ಉಷಾ ಮಣ್ಣಪ್ಪಗೋಳ ಮಾತನಾಡಿ, ಇಂದಿನ ಮಕ್ಕಳು ದೇಶದ ನಾಳಿನ ಉತ್ತಮ ನಾಗರಿಕರಾಗಿ ಪರಿವರ್ತನೆಗೊಳ್ಳಲು ಅವರಿಗೆ ಉತ್ತಮ ಶಿಕ್ಷಣ ದೊರಕಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು. 

ರಾಷ್ಟ್ರನಾಯಕರಾದ ನೆಹರೂಜಿ, ಒಣಕೆ ಒಬ್ಬವ್ವ, ನೇತಾಜಿ, ರೈತ, ಮಾಜಿ ಪ್ರಧಾನಿ ಇಂದಿರಾಗಾಂಧಿ ಇನ್ನಿತರರ ಛದ್ಮ ವೇಷಗಳಲ್ಲಿ ಕಾಣಿಸಿಕೊಂಡು ಶಾಲಾ ಮಕ್ಕಳು ಕಾರ್ಯಕ್ರಮಕ್ಕೆ ಮೆರಗು ನೀಡಿದರು.  

ಈ ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತರಾದ ಎಸ್‌. ಬಿ. ಮಾಳಿ, ಎಸ್‌. ಬಿ. ದೊಡಹಟ್ಟಿ, ಟಿ. ಆರ್‌. ದಾತಾರ, ಎನ್‌. ಬಿ. ದಲಾಲ, ಜಿ. ಎಸ್‌. ಸರ್ದೇಶ್ಪಾಂಡೆ, ಬಿ. ಎನ್‌. ಪರದೇಶಿ, ಸಿ. ಆರ್‌. ಚಿನವಾಲ್, ಎಂ.ಎಂ.ಗೊಂದಿ, ಟಿ.ಆರ್‌.ದಾತಾರ. ಎಚ್‌.ಎಂ.ಕ್ವಾರೆಪ್ಪಗೊಳ, ಎಸ್‌. ಎಸ್‌. ಹುರೇಮಠ, ಎಸ್‌. ಸಿ. ಮಂಟೂರ, ವಿ. ಆರ್‌. ಸೈದಾಪುರ, ಎಸ್‌. ಆಯ್‌.ಲೋಕಾಪುರ. ಎಲ್‌.ಎಸ್‌.ಬನ್ನಿಕೊಪ್ಪ ಊರಿನ ಹಿರಿಯರಾದ ಮಹಾದೇವ ಮುರನಾಳ, ಹಣಮಂತ ಪೂಜಾರಿ, ಶಿವಪ್ಪ ಹಂಚಿನಾಳ, ಪ.ಪಂ. ಸಿಬ್ಬಂದಿ ಶಿವಾನಂದ ಚೌದ್ರಿ, ಜಾಧವ್ ಸರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ರಾಘವೇಂದ್ರ ನೀಲಣ್ಣವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಕಾರ್ಯಕ್ರಮವನ್ನು ಎಂ.ಎಸ್‌. ಸನದಿ ನಿರೂಪಿಸಿ, ವಂದಿಸಿದರು. 


ಸುದ್ದಿ ಓದಿ