ಮಹಲಿಂಗಪುರ

ಎಬಿವಿಪಿ ಸದಸ್ಯರಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

ಎಬಿವಿಪಿ ಸದಸ್ಯರಿಂದ ಆಕ್ಸಿಜನ್ ಚಾಲೆಂಜ್ ಅಭಿಯಾನ

ಮಹಾಲಿಂಗಪುರ10: ಗಿಡ ಮರಗಳಿಂದ ಯಥೇಚ್ಛವಾಗಿ ಪ್ರಾಣ ವಾಯುವಾದ ಆಮ್ಲಜನಕ ದೊರೆಯುವುದರಿಂದ, ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು, ಕಾಲ ಕಾಲಕ್ಕೆ ಅವುಗಳಿಗೆ ನೀರು, ಗೊಬ್ಬರ ನೀಡಿ ಅವು ಹಾಳಾಗದಂತೆ ಸಂರಕ್ಷಿಸಿದರೆ ಪರಿಸರ ಅಂದವೂ ಹೆಚ್ಚಿ ರೋಗರುಜಿನಗಳು ಕಡಿಮೆಯಾಗುತ್ತವೆ ಎಂದು ಸ್ಥಳೀಯ ಠಾಣಾಧಿಕಾರಿ ಜಿ.ಎಸ್.ಉಪ್ಪಾರ ಹೇಳಿದರು.ಹಿಂದೂ ರುದ್ರೂಭೂಮಿಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ತ ಸದ್ಯಸರ ವತಿಯಿಂದ ನಡೆದ, ಆಕ್ಸಿಜನ್ ಚಾಲೆಂಜ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ, ವಿಶ್ವ ಪರಿಸರ ದಿನಾಚರಣೆಯನ್ನು ಗಿಡ ನೆಡುವ ಮೂಲಕ ಆಚರಿಸಿ ಮಾತನಾಡಿದರು.ಪುರಸಭೆಯ ಮುಖ್ಯಾಧಿಕಾರಿ ಎಚ್.ಎಸ್ ಚಿತ್ತರಗಿ ಮಾತನಾಡಿ ಹಿಂದೂ ರುದ್ರೂಮಿಯಲ್ಲಿ ನೆಡಲಾದ ಸೆಸಿಗಳು ಹುಲುಸಾಗಿ ಬೆಳೆಯಲು ಮತ್ತು ಅವಳು ಹಾಳಾಗದಂತೆ ಪುರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳುಲಾಗುವುದು ಎಂದರು.

ಎಬಿವಿಪಿ ನಗರ ಘಟಕದ ಕಾರ್ಯದಶರ್ಿ ಅಭಿಷೇಕ ಲಮಾಣಿ, ಮಹಾಲಿಂಗ ಪಾಟೀಲ್, ರಾಜು ನಾವಿ, ಶ್ರೀಕಾಂತ ಸಂಶಿ, ಮಹಾಲಿಂಗ ಮಾಳಿ, ಅಭಿಷೇಕ್ ಚಟ್ಟಿಮಠ, ಅಜಯ ಕೊಣ್ಣೂರ, ಮಹಾಲಿಂಗ ಮಡ್ಡೆನ್ನವರ, ಪ್ರಜ್ವಲ್ ದಂಡಿನ, ಕುಮಾರ ಚನ್ನದಾಸರ, ಸಾಗರ್ ಗೌಂಡಿ, ರವಿ ಕಂಕಣವಾಡಿ ಅಲ್ಲದೇ ಪುರಸಭೆಯ ಆರೋಗ್ಯ ನಿರೀಕ್ಷಕರಾದ ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ ಹಾಗೂ ಇನ್ನು ಅನೇಕ ಕಾರ್ಯಕರ್ತರು ಭಾಗಿಯಾಗಿದ್ದರು. ಮಹಾಲಿಂಗಪುರ : ನಗರ ಠಾಣಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಎಬಿವಿಪಿ ಕಾರ್ಯಕರ್ತರು ಹಿಂದೂ ರುದ್ರಭೂಮಿಯಲ್ಲಿ ಗಿಡಗಳನ್ನು ನೆಡುವ ಮೂಲಕ ಆಕ್ಸಿಜನ್ ಚಾಲೆಂಜ್ ಅಭಿಯಾನ ನಡೆಸಿದರು 

ಸುದ್ದಿ ಓದಿ