ಹೂವಿನ ಹಡಗಲಿ

ಮನರೇಗಾ ಹೆಸರಿನ ಬದಲಾವಣೆಗೆ ವಿರೋಧ ; ಕಾಂಗ್ರೆಸ್ ಪಾದಯಾತ್ರೆ

ಮನರೇಗಾ ಹೆಸರಿನ ಬದಲಾವಣೆಗೆ ವಿರೋಧ ; ಕಾಂಗ್ರೆಸ್ ಪಾದಯಾತ್ರೆ

ಲೋಕದರ್ಶನ ವರದಿ 

ಹೂವಿನಹಡಗಲಿ   17 : ಬಿಜೆಪಿಯವರಿಗೆ ಕಾಂಗ್ರೆಸನ್ನ ಟೀಕಿಸುವುದೇ ಒಂದು ಕೆಲಸವಾಗಿ ಬಿಟ್ಟಿದೆ, ದೇಶಕ್ಕೆ ತಪ್ಪು ಮಾಹಿತಿಯನ್ನು ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಪಿಟಿ.ಪರಮೇಶ್ವನಾಯ್ಕ ಆರೋಪಿಸಿದರು. ತಾಲ್ಲೂಕಿನ ಮಹಾಜನದಹಳ್ಳಿಯಿಂದ ಮನರೇಗಾ ಉಳಿಸಿ ಎಂದು ಹಮ್ಮಿಕೊಂಡಿದ್ದ ಪಾದಾಯಾತ್ರೆಯ ನಂತರ ಇಟಿಗಿ ಗ್ರಾಮದ ಆಂಜನೇಯ ದೇವಸ್ಥಾನ ಬಳಿ  ಸೋಮವಾರ   ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಕೊಪ್ಪಳದ ಸಂಸದ ರಾಜಶೇಖರ ಹಿಟ್ನಾಳ್ ಅವರು ಮಾತನಾಡಿ ಮಹಾತ್ಮ ಗಾಂಧೀಜಿ ಅವರ ಕನಸನ್ನು ನನಸು ಮಾಡುವ ಉದ್ದೇಶದಿಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಲಾಯಿತು, ಗ್ರಾಮಗಳ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗುತ್ತದೆ ಹಿನ್ನೆಲೆಯಲ್ಲಿ ಮನರೇಗಾ ಜಾರಿಗೆ ತರಲಾಗಿದೆ ಎಂದರು.ಬಿಜೆಪಿಯವರು ಈ ಯೋಜನೆಯ ಸ್ವರೂಪವನ್ನೇ ಬದಲಾವಣೆ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು. ಹರಪನಹಳ್ಳಿಯ ಕಾಂಗ್ರೆಸ್ ಮುಖಂಡರಾದ ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಅವರು ಮಾತನಾಡಿ ಅಧಿಕಾರವನ್ನು ವಿಕೇಂದ್ರೀಕರಣ ಮಾಡಿದ್ದೆ ಕಾಂಗ್ರೆಸ್ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮೂಲಕ ಜನರಿಗೆ ಅಧಿಕಾರವನ್ನು ಕೊಡುವ ಪ್ರಯತ್ನ ಮಾಡಲಾಗಿದೆ ಎಂದರು.ಬಿಜೆಪಿ ಸರ್ಕಾರ ಬಂಡವಾಳಶಾಹಿಗಳ ಬೆಂಬಲವಾಗಿ ನಿಂತು ಬಡವರನ್ನ ನಿರ್ಲಕ್ಷಿಸುತ್ತಿದೆ ಎಂದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶಿವಯೋಗಿ, ಚಂದ್ರಶೇಖರ ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಟವಾಳಿಗಿ ಕೊಟ್ರೇಶ್, ಇಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಹನುಮಂತಪ್ಪ, ಕಾಂಗ್ರೆಸ್ ಪ್ರಚಾರ ಸಮಿತಿಯ ತಾಲೂಕ ಅಧ್ಯಕ್ಷ ಸೋಗಿ ಹಾಲೇಶ್, ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಗುಡದಯ್ಯ, ಮುಖಂಡರಾದ ಬಸವನಗೌಡ ಪಾಟೀಲ್, ದೂದನಾಯ್ಕ, ಜ್ಯೋತಿ ಮಲ್ಲಣ್ಣ, ಶಾಂತನಗೌಡ, , ಚಂದ್ರನಾಯ್ಕ, ಬಸಮ್ಮ ಶಿವಕುಮಾರ್ ಗೌಡ, ಸತೀಶ್, ಮಂಜುನಾಥ್ ದೇಸಾಯಿ ಇದ್ದರು. 


ಸುದ್ದಿ ಓದಿ