ತೆರೆದ ಬಾವಿ- ಕೊಳವೆ ಬಾವಿ ನೀರಿನ ಪ್ರಮಾಣ ಹೆಚ್ಚಾಗಲು ಅನುಕೂಲ
ತೆರೆದ ಬಾವಿ- ಕೊಳವೆ ಬಾವಿ ನೀರಿನ ಪ್ರಮಾಣ ಹೆಚ್ಚಾಗಲು ಅನುಕೂಲ
ಸಂಬರಗಿ 22: ಗಡಿ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೂ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಅಲ್ಲಿಂದ ನೀರು ಅನಂತಪುರ ಹಾಗೂ ಮಹಾರಾಷ್ಟ್ರ ತಾಲೂಕಿನ ಎಕ್ಕುಂಡಿ ನಡುವ ಇರುವ ಕೆರೆಗೆ ಬರುತ್ತದೆ ಕೆರೆ-ಕಟ್ಟೆಗಳು ಇಪ್ಪತ್ತು ವರ್ಷಗಳ ನಂತರ ಮೊದಲ ಬಾರಿಗೆ ತುಂಬಿದೆ ರೈತರು ನೆಮ್ಮದಿಯಾಗಿದ್ದಾರೆ ಈ ಕೆರೆಯಲ್ಲಿ ನೀರು ತುಂಬಿರುವುದರಿಂದ ತೆರೆದ ಭಾವಿ ಹಾಗೂ ಕೊಳವೆ ಬಾವಿ ನೀರಿನ ಪ್ರಮಾಣ ಹೆಚ್ಚಾಗಲು ಅನುಕೂಲವಾಗಿದೆ.
ಹಲವು ವರ್ಷಗಳಿಂದ ಗಡಿ ಭಾಗದ 22 ಗ್ರಾಮಗಳಲ್ಲಿ ಮಳೆಯ ಪ್ರಮಾಣ ನಿರಂತರವಾಗಿ ಕಡಿಮೆಯಾಗುತ್ತಿದ್ದು, ಈ ಭಾಗಗಳಲ್ಲಿ ಯಾವ ರೀತಿಯ ನೀರಿನ ಯೋಜನೆ ಜಾರಿಯಾಗದೆ ರೈತರು ಶಾಶ್ವತ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಈ ವರ್ಷಗಳಲ್ಲಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾಗಿರುವುದರಿಂದ ಅಲ್ಲಿಂದ ನೀರು ಹರಿಯುವ ನದಿಯ ಮೂಲಕ ಕೆರೆಗೆ ಬಂದಿರುವುದರಿಂದ ಕೆರೆ ತುಂಬಿ ಹರಿಯುತ್ತಿದೆ. ನಿಸರ್ಗದ ಕೃಪೆಯಿಂದ ಈ ಭಾಗದಲ್ಲಿ ನೀರು ನೀರಾಗಿದ್ದು ರೈತ ಸಂತಸಗೊಂಡಿದ್ದಾನೆ ಸಂಬರಗಿ ಶಿರೂರು ಪಾಂಡೆಗಾಂವ್ ಅಜುರ ಅನಂತಪುರ ಸೇರಿದಂತ ಹಲವಾರು ಗ್ರಾಮಗಳಿಗೆ ಅನುಕೂಲವಾಗಿದ್ದು ಈ ಭಾಗದಲ್ಲಿ ಇರುವ ಕೆರೆ ತುಂಬಿ ಹರಿಯುತ್ತಾ ಇದೆ.ೆ ರೈತರು ಬಿತ್ತನೆ ಮಾಡಿದರೂ ಮಳೆಯ ಅಭಾವದಿಂದ ಕಂಗಾಲಾಗಿದ್ದು, ಈ ಭಾಗದ ರೈತರು ಆ ನೀರನ್ನು ಬೆಳೆಗಳಿಗೆ ಬಿಡುತ್ತಿದ್ದಾರೆ.
ಈ ಭಾಗದಲ್ಲಿ ನಿರಂತರವಾಗಿ ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದು, ರೈತರು ಪ್ರಕೃತಿಯನ್ನೇ ಅವಲಂಬಿಸಬೇಕಾಗಿದೆ. ಆದರೆ ಈ ವರ್ಷಗಳಲ್ಲಿ ಸಾಂಗ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚು ಕಾರಣ, ಅಲ್ಲಿಂದ ನೀರು ಅಗ್ರಸಣಿ ನದಿಯ ಮೂಲಕ ಕರ್ನಾಟಕವನ್ನು ಗಡಿ ಭಾಗ ಗ್ರಾಮ ತಲುಪಿದೆ, ಇದರಿಂದಾಗಿ ಕೆರೆಗಳು ತುಂಬಿವೆ. ತುಂಬಿ ಹರಿಯುತ್ತಿರುವುದರಿಂದ ರೈತರ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ ನಿಸರ್ಗದಿಂದಲೇ ರೈತರ ಬದುಕು ಹಸನಾಗಿರುವ ಈ ಪ್ರದೇಶವನ್ನು ಸರಕಾರ ಸದಾ ನಿರ್ಲಕ್ಷಿಸುತ್ತಿದೆ ಎಂಬುದು ಈ ಭಾಗದ ರೈತರ ಆರೋಪಿಸಿದ್ದಾರೆ. ನದಿಯ ಆಸುಪಾಸಿನಲ್ಲಿ ಸರಕಾರದಿಂದ ಇನ್ನಷ್ಟು ಹೊಸ ಕೆರೆಗಳನ್ನು ನಿರ್ಮಿಸಿದರೆ ಮಹಾರಾಷ್ಟ್ರದಿಂದ ಗಡಿ ಭಾಗಕ್ಕೆ ನೀರು ಬಂದು ಕೃಷ್ಣಾ ನದಿಯ ತಲುಪುತ್ತಿದೆ ಭವಿಷ್ಯದಲ್ಲಿ ಈ ಕೆರೆಗಳಿಗೆ ನೀರು ತುಂಬುವ ಸಾಧ್ಯತೆ ಇದೆ. ಕೆರೆಗಳನ್ನು ತುಂಬಿಸುವುದು. ಸರಕಾರ ಈ ಭಾಗದಲ್ಲಿ ಹೊಸ ಕೆರೆಗಳನ್ನು ಕಲ್ಪಿಸಿದರೆ ರೈತ ಸದಾ ನೆಮ್ಮದಿಯಿಂದ ಸುಖವಾಗಿ ಇರುತ್ತಾನೆ.