ಮಹಲಿಂಗಪುರ

ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಂದನೆ ಕಾರ್ಯಕ್ರಮಕ್ಕೆ ತೆರೆ !

ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಗುರುವಂದನೆ ಕಾರ್ಯಕ್ರಮಕ್ಕೆ ತೆರೆ !

ಹಳೆಯ ವಿದ್ಯಾರ್ಥಿಗಳು ಅಗಲುವ ಸಮಯದಲ್ಲಿ ಅವರ ಕಣ್ಣಾಲಿಗಳು ತೇವಗೊಂಡವು.

ಮಹಾಲಿಂಗಪುರ: ವಿಜ್ಞಾನದಿಂದ ಅನುಕೂಲಕ್ಕಿಂತಲೂ ಅನಾನುಕೂಲತೆಯೇ ಹೆಚ್ಚಾಗಿದೆ ಎಂದು ನಿವೃತ್ತ ವಿಜ್ಞಾನ ಶಿಕ್ಷಕರಾದ ಸಿ ಎಚ್. ಹುಕ್ಕೇರಿ ಹೇಳಿದರು.

ಎಸ್ ಸಿ. ಪಿ ಪ್ರೌಢ ಶಾಲೆಯ 1988-89ನೇ ಸಾಲಿನ ಹತ್ತನೇ ವರ್ಗದ ವಿದ್ಯಾರ್ಥಿಗಳು ಸ್ಥಳೀಯ ವಾಸವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ಗುರುವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈಜ್ಞಾನಿಕ ತಳಹದಿಯ ಮಾನವನ ಬದುಕಿನಿಂದ ನೆಲ, ಜಲ, ವಾಯು ಗುಣಮಟ್ಟ ಕಳೆದುಕ್ಕೊಂಡು ಭೂಮಿ ಮೇಲೆ ಜೀವಿಸಲಸಾಧ್ಯ ವಾತಾವರಣ ನಿರ್ಮಾಣವಾಗಿದೆ. ಉತ್ತಮ ಆರೋಗ್ಯಕ್ಕಾಗಿ ಶುಧ್ಧ ನೀರು, ಸಾವಯವ ಪದಾರ್ಥಗಳನ್ನು ಪಡೆದು ಮತ್ತು ಉತ್ತಮ ವಾತಾವರಣಕ್ಕೆ ಗಿಡ ಮರಗಳನ್ನು ನೆಡಬೇಕೆಂದು ಕಿವಿಮಾತು ಹೇಳಿ ನಿಮ್ಮ ಮತ್ತು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುಷ್ಚಟಗಳಿಂದ ದೂರವಿರಿ ಎಂದು ಹಳೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಕ್ಕಳಲ್ಲಿ ಉತ್ತಮ ಸಂಸ್ಕೃತಿ ಬೆಳೆದು ಬರಲು ಶಿಕ್ಷಕರಾದವರು ಸಹ ತಮ್ಮ ಜೀವನ ಶೈಲಿಯನ್ನು ಮಾದರಿಯಾಗಿ ಬದಲಿಸಿಕೊಳ್ಳಬೇಕು ಎಂದು ಹೇಳುತ್ತ 50ವರ್ಷದಿಂದ ಪಾನ ಶಾಪ, ಚಹಾ ಅಂಗಡಿ ಮತ್ತು ಇನ್ನಿತರ ಮೋಜು ಮಸ್ತಿ ಅಂಗಡಿಗಳತ್ತ ತಪ್ಪಿಯೂ ಸುಳಿದಿಲ್ಲವೆಂದು ತಾವು ಪಾಲಿಸಿಕೊಂಡು ಬಂದ ಮಾರ್ಗವನ್ನು ತಿಳಿಸಿದರು. 

ನಿವೃತ್ತ ಇಂಗ್ಲಿಷ್ ಶಿಕ್ಷಕರಾದ ಬಿ ಜಿ.ಬಿರಾದಾರ, ಚಿಕ್ಕನರಗುಂದ ಸರ್, ಎಸ್ ಟಿ.ಮಠಪತಿ ಮಾತನಾಡಿ, ದೇವರು ಕೊಟ್ಟ ಕೆಲಸ ಪ್ರಸಾದವೆಂದು ತಿಳಿದು ಹಣಕ್ಕಾಗಿ ದುಡಿಯದೆ ಕೆಲಸವೇ ದೇವರೆಂದು ದುಡಿಯಿರಿ ಉತ್ತಮ ಫಲ ದೊರಕುತ್ತದೆ. ನಿಮ್ಮ ಆರೋಗ್ಯಕ್ಕಾಗಿ ಕೆಲಸವನ್ನು ನೀವೇ ಮಾಡಿ. ಜನರೊಂದಿಗೆ ಮೃದು ಮಾತುಗಳೊಂದಿಗೆ ವರ್ತಿಸಿ. ಮಹಲಿಂಗಪುರದ ಋಣ ನಮ್ಮನ್ನು ಕಾಡುತ್ತಿದೆ. ಉತ್ತಮ ಸತ್ಕಾರ ನೀಡಿರುವ ತಮ್ಮ ಬದುಕು ಉಜ್ವಲವಾಗಲಿ ಎಂದು ವಿದ್ಯಾಥರ್ಿಗಳಿಗೆ ಹಾರೈಸಿ ಮಧ್ಯದಲ್ಲಿ ಶಾಲಾ ದಿನಗಳಲ್ಲಿ ನಡೆದಿರುವ ಕೆಲವು ಪ್ರಸಂಗಗಳನ್ನು ನೆನೆದು ಹಳೆ ವಿದ್ಯಾರ್ಥಿಗಳನ್ನು ನಗೇ ಕಡಲಲ್ಲಿ ತೇಲಿಸಿದರು.

ಕೆರಕಲಮಟ್ಟಿ ಸರ್ ಮಾತನಾಡಿ ಪ್ರಾಥಮಿಕ (ಗಡಾ) ಹಳೆ ಶಾಲೆಯ ದುಸ್ಥಿತಿ ಮತ್ತು ವೈಭವದ ಶಾಲಾ ದಿನಗಳ ಬಗ್ಗೆ ಹೇಳುತ್ತ ನೆನೆದು ಭಾವುಕರಾದರು. 

ನಿವೃತ್ತ ಪ್ರಾಚಾರ್ಯರಾದ ಎಂ ಕುಂಟೋಜಿ ಮತ್ತು ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಹೊಸಮಠ ಮೇಡಂ ಮಾತನಾಡಿ, ಮೂರು ದಶಕಗಳ ನಂತರ ಮತ್ತೋಮ್ಮೆ ನೋಡುವ ಭಾಗ್ಯ ಬಂದಿದ್ದು ನಮ್ಮ ಅದೃಷ್ಟ ಮತ್ತು ಉತ್ತಮ ಭವಿಷ್ಯತ್ತಿಗಾಗಿ ದೈನಂದಿನ ಬದುಕಿನಲ್ಲಿ ಆರೋಗ್ಯ ಸೂತ್ರಗಳನ್ನು ಅಳವಡಿಸಿಕೊಂಡು ಉಳಿದ ಆಯಸ್ಸನ್ನು ಪರಸ್ಪರ ಉತ್ತಮ ಬಾಂಧವ್ಯ ಹೊಂದುವುದರೊಂದಿಗೆ ಕಳೆಯಿರಿ ಎಂದು ಬುದ್ಧಿ ಮಾತು ಹೇಳಿದರು. 

ಡಾ.ಪ್ರಭಾಕರ ಕುಳ್ಳೋಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಮತಿಯರಾದ ದ್ರಾಕ್ಷಾಯಿಣಿ ಆದೆಪ್ಪನವರ, ಉಜ್ವಲ ದೇಶಪಾಂಡೆ, ಸುಭದ್ರ ಗುಂಡಾ ಶಾಲಾ ದಿನಗಳ ಸವಿ ನೆನಪುಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳೇ ಚಲನಚಿತ್ರ ಮತ್ತು ಭಾವ ಗೀತೆಗಳನ್ನು ಹಾಡಿ ಸಮಾರಂಭಕ್ಕೆ ಮೆರಗು ತಂದರು. ನಿವೃತ್ತ ಶಿಕ್ಷಕಿಯರಾದ ಎ.ಸಿ.ಹೊಸ್ಮಠ ಗುರುಮಾತೆ ಅವರ 74ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅಗಲಿದ ಶಿಕ್ಷಕರು ಮತ್ತು ಸಹಪಾಠಿಗಳಿಗೆ ಒಂದು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆರಂಭದಿಂದ ಕುಣಿದು ಕುಪ್ಪಳಿಸಿದ ಹೃದಯಗಳು ಸಂಜೆಯಾಗುತ್ತಲೆ ಅಗಲುವ ಸಮಯ ಬಂದಾಗ ಮಾತ್ರ ಎಲ್ಲರ ಕಣ್ಣಾಲಿಗಳು ತುಂಬಿ ಬಂದು ಮರೆಯದ ಕ್ಷಣವಾಗಿ ಪರಿವರ್ತನೆಯಾಯಿತು ಗುರುವಂದನೆ ಕಾರ್ಯಕ್ರಮ. 

ಜಿ ಜಿ. ಹುಬ್ಬಳ್ಳಿ, ಶಿಕ್ಷಕಿ ಹುಲಕುಂದ ಮೇಡಂ, ಎಂ ಎಸ್.ಮಠಪತಿ, ಮ.ಗು.ಮಣ್ಣಯ್ಯನವರಮಠ, ಎಸ್ ಎಚ್.ಹಳ್ಳಿ, ಎಸ್ ಎಂ.ಹಳ್ಳಿ, ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕರಾದ ಎನ್ ಬಿ.ಗೋಲಬಾವಿ, ದುಗ್ಗಾನಿ ಸರ್, ಮಹಾಲಿಂಗ ಕಂಕಣವಾಡಿ, ಶಬ್ಬಿರ ಮಾಲದಾರ, ಸೋಮು ಸಂಶಿ, ಪ್ರಕಾಶ ಭಾವಿಕಟ್ಟಿ, ಸಿದ್ದು ಗೊಂಬಿ, ಶಬಾನಾ ಯಕ್ಸಂಬಿ, ಶೋಭಾ ಬಿರಾದಾರ, ಶಶಿಕಲಾ ಬಂಡಿ, ಪ್ರೇಮಾ ತೇರದಾಳ, ಅಂಬಿಕಾ ಮುಳವಾಡ, ಜ್ಯೋತಿ ಭಕ್ಕನ್ನವರ ಇದ್ದರು. ಸುರೇಶ್ ಘಟನಟ್ಟಿ ಸ್ವಾಗತಿಸಿ, ಶಿಕ್ಷಕಿ ದಿಲ್ಶಾದ್ ನದಾಫ್, ಸುರೇಶ ಬಾಡಗಿ ನಿರೂಪಿಸಿ, ಮಹಾಲಿಂಗಯ್ಯ ಹೊಸಮಠ ವಂದಿಸಿದರು.


 

ಸುದ್ದಿ ಓದಿ