ಮುಕ್ತ ಕಬ್ಬಡ್ಡಿ ಪಂದ್ಯಾವಳಿ
ಹಗರಿಬೊಮ್ಮನಹಳ್ಳಿ 06: ತಾಲೂಕಿನ ಬ್ಯಾಲಾಳು ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘ, ಪುನೀತ್ ರಾಜ್ಕುಮಾರ ಅಭಿಮಾನಿಗಳ ಬಳಗದವರಿಂದ ದಸರಾ ಹಾಗೂ ಮಹಾತ್ಮಾ ಗಾಂಧೀಜಿ ಜಯಂತಿ ಪ್ರಯುಕ್ತ ವಿಜಯನಗರ ಮತ್ತು ಬಳ್ಳಾರಿ ಮುಕ್ತ ಕಬ್ಬಡ್ಡಿ ಪಂದ್ಯಾವಳಿ ಜರುಗಿತು.
ಭೀಮನಾಯ್ಕ್ ಯೂತ್ಸ್ ಕ್ಲಬ್ ತಂಡವು ಪ್ರಥಮ ಸ್ಥಾನ ಪಡೆದು ರೂ 30000, ಟ್ರೋಫಿ, ದ್ವಿತೀಯ ಸ್ಥಾನದಲ್ಲಿ ಸ್ವಾಮಿ ವಿವೇಕಾನಂದ ಯುವಕರ ಸಂಘ ತಂಡವು ರೂ 15000, ಟ್ರೋಫಿ ಪಡೆಯಿತು. ಈ ವೇಳೆ ವಿಶ್ವನಾಥ, ಎಂ.ಪ್ರಭು, ಎಂ.ಸುರೇಶ, ಪಕ್ಕೀರ್ಪ, ಅಜಯ, ನಾಗರಾಜ, ಸಣ್ಣ ಹನುಮಂತಪ್ಪ, ರಮೇಶ, ಜಿ.ರಮೇಶ, ಡಿ.ಮಹೇಶ, ಟಿ.ಕೊಟ್ರೇಶ ಹಾಗೂ ಮುಂತಾದವರು ಇದ್ದರು.