ಸಿಂಧಗಿ

ಬದುಕಿನ ಬೆಲೆ ಗೊತ್ತಾದಾಗ ಮಾತ್ರ ಸುಖಿಗಳಾಗುತ್ತೇವೆ: ಗವಿಸಿದ್ದೇಶ್ವರ ಶ್ರೀ

ಬದುಕಿನ ಬೆಲೆ ಗೊತ್ತಾದಾಗ ಮಾತ್ರ ಸುಖಿಗಳಾಗುತ್ತೇವೆ: ಗವಿಸಿದ್ದೇಶ್ವರ ಶ್ರೀ

ಸಿಂದಗಿ 11: ಭಗವಂತಕೊಟ್ಟಿದ್ದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು. ದೇವರು ಯಾವತ್ತು ನಮಗೆ ಕಾಡೊದಿಲ್ಲ ದೇವರಿಗೆ ನಾವೇ ಕಾಡುತ್ತೇವೆ. ನಮ್ಮಯ ಬದುಕಿನ ಬೆಲೆ ಗೊತ್ತಾದಾಗ ಮಾತ್ರ ನಾವು ಸುಖಿಗಳಾಗುತ್ತೇವೆ ಎಂದು ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಗದ್ಗುರುಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು ಹೇಳಿದರು. 

ತಾಲೂಕಿನ ಆಹೇರಿ ಗ್ರಾಮದ ಗಂಗಾಧರ ಸಮೂದಾಯ ಭವನವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಪ್ರಕೃತಿ ನಮಗೆ ಎಲ್ಲವನ್ನು ನೀಡಿದೆ. ಆದರೆ ನಾವೇನು ಪ್ರಕೃತಿಗೆ ನೀಡುತ್ತಿದ್ದೇವೆ ಎಂಬ ಆಲೋಚನೆ ನಮ್ಮದಾಗಬೇಕು. ಮನುಷ್ಯ ಸ್ವಾರ್ಥದಕಡೆ ಹೊರಟಿದ್ದಾನೆ. ದೇವರು ಕೊಟ್ಟ ಈ ಬದುಕಿನ ಸಾರವನ್ನು ತಿಳಿದ ಶರಣರು ಈ ಸಮಾಜಕ್ಕೆ ಏನೇಲ್ಲವನ್ನು ಕೊಟ್ಟು ಹೋದರು. ದೇವರು ನಮಗೂ ಅದೇ ದೇಹದ ಸಂಪತ್ತನ್ನು ನೀಡಿದ್ದಾನೆ. ಆದರೆ ಅದನ್ನು ಸರಿಯಾಗಿ ಸದ್ಬಳಿಕೆ ಮಾಡಿಕೊಳ್ಳುತ್ತಿಲ್ಲ. ದೇವರ ಸೇವೆ ಎಂಬುದು ಬೇರೆ ಎನು ಅಲ್ಲ. ಅದು ನಮ್ಮ ಮಧ್ಯಯೇ ಇರುವವರನ್ನು ಪ್ರತೀಯಿಂದ ಕಾಣುವುದು. ಮನುಷ್ಯನಾಗಿ ನಾವು ಭೂಮಿಗೆ ಬಂದ ಮೇಲೆ ಏನಾದರೊಂದು ಸಾಧನೆ ಮಾಡಬೇಕು. ಅದಕ್ಕೆ ಅವನ ಆಸಕ್ತಿ ಶ್ರದ್ಧೆ ಹಾಗೂ ಅವನ ಪರಿಶ್ರಮಗಳೇ ಕಾರಣ. ಈ ಸಮಾಜದ ಋಣತಿರಿಸುವ ಕಾರ್ಯ ನಮ್ಮಿಂದಾಗಬೇಕು. ಈ ಪ್ರಕೃತಿಯ ಬೆಳವಣಿಗೆಗೆ ನಾವು ಸದಾ ಸಿದ್ದರಾಗಬೇಕು. ಮನುಕುಲದ ಒಳಿತಿಗಾಗಿ ನಾವು ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಹೇಳಿದರು. 

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಶಾಸಕ ಎಂ.ಬಿ. ಪಾಟೀಲ ಮಾತನಾಡಿ, ನಾವೇಲ್ಲ ಧರ್ಮದಿಂದ ನಡೆಯಬೇಕು. ಸದಾ ಸಮಾಜ ಮುಖಿಕಾರ್ಯ ಮಾಡುತ್ತಾ ಈ ಸಮಾಜದ ಋಣ ತೀರಿಸಲು ನಾವು ಮುಂದಾಗಬೇಕು ಎಂದರು. 

ಕಾರ್ಯಕ್ರಮದಲ್ಲಿ ಸೋನ್ನದ ದಾಸೋಹ ಮಠದ ಡಾ.ಶಿವಾನಂದ ಸ್ವಾಮಿಗಳು, ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ, ಅಶೋಕ ವಾರದ, ಶರಣಪ್ಪ ಸುಣಗಾರ, ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳೂರ, ನರಸಿಂಹಪ್ರಸಾದ ತಿವಾರಿ, ಸಿದ್ದು ಪಾಟೀಲ, ಯಶವಂತ್ರಾಯಗೌಡ ರೂಗಿ, ಎಮ್‌.ಎಮ್‌. ಹೂಗಾರ, ರಮಜಾನ ದುಮ್ಮದ್ರಿ, ಭಾಗಪ್ಪಗೌಡ ಪಾಟೀಲ, ಸಿದ್ದು ಚಿಂಚೋಳ್ಳಿ ಸೇರಿದಂತೆ ಇತರರು ಇದ್ದರು. ಶಿಕ್ಷಕ ಎಸ್‌.ಬಿ. ಚೌಧರಿ ನಿರೂಪಿಸಿದರು, ಸುಕೃತಾ ಪಟ್ಟಣಶೆಟ್ಟಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ