ಗುರುವಿನ ಬಗ್ಗೆ ಗೌರವ ಇರುವವನೇ ಗುರುತರ ಸಾಧಕನಾಗಬಲ್ಲ: ಸಿದ್ನಾಳ
ಮಹಾಲಿಂಗಪುರ 04: ಗುರುವಿಲ್ಲದೇ ಗುರಿ ಮುಟ್ಟಲು ಸಾಧ್ಯವಿಲ್ಲ, ಗುರುವಿನ ಬಗ್ಗೆ ಗೌರವ ಇರುವವನೇ ಗುರುತರ ಸಾಧಕನಾಗಬಲ್ಲ ಎಂದು ಉಪನ್ಯಾಸಕ ಶಿವಲಿಂಗ ಸಿದ್ನಾಳ ಹೇಳಿದರು.
ಸ್ಥಳೀಯ ನವಚೇತನ ಶಿಕ್ಷಣ ಸಂಸ್ಥೆಯ ಜೆಸಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುಪರಿ್ಣಮೆ ನಿಮಿತ್ತ ಹಮ್ಮಿಕೊಂಡಿದ್ದ ಗುರುಪಾದಪೂಜೆ ಕರ್ಯಕ್ರಮದಲ್ಲಿ ಮಾತನಾಡಿದರು.
ಗುರುವಿನ ಪಾದ ಸ್ರ್ಶ ಮಾಡಿದ ವಿದ್ಯರಿ್ಥಗಳ ಕೈಗಳಲ್ಲಿ ಅದ್ಭುತ ಭವಿಷ್ಯ ನರಾ್ಮಣವಾಗಲಿ. ಗುರುಗಳನ್ನು ವಾದ್ಯಮೇಳದೊಂದಿಗೆ ಪುಷ್ಪವೃಷ್ಠಿ ಮಾಡುವ ಮೂಲಕ ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಪಾದತೊಳೆದು ಪೂಜೆ ಮಾಡುವ ಸಂಪ್ರದಾಯ ನೋಡಿದರೆ ಜೆಸಿ ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ಯಥೇಚ್ಚವಾಗಿದೆ ಎಂದು ಶ್ಲಾಘಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ಗುರುಗಳ ಮಾತಿಗೆ ತಲೆಬಾಗಿದವನೇ ಉತ್ತಮ ಸಾಧಕನಾಗಿ ಸಮಾಜದಲ್ಲಿ ತಲೆಯೆತ್ತಿ ಬದುಕಲು ಸಾಧ್ಯ. ಗುರುವಿನಪಾದ ತೊಳೆದ ವಿದ್ಯರಿ್ಥಗಳ ಬದುಕು ಪಾವನವಾಗಲಿ ಎಂದರು.
ಹಿರಿಯ ಶಿಕ್ಷಕ ಎನ್.ಎಮ್ ನಾಡಗೌಡ ಮಾತನಾಡಿದರು.
ಶಾಲೆಯ 10 ನೇ ತರಗತಿಯ 62 ವಿದ್ಯರಿ್ಥಗಳು ಸಾಲಾಗಿ ಗುರುವಿನ ಪದತಲದಲ್ಲಿ ಕುಳಿತು ಪಾದ ತೊಳೆದು, ಪೂಜೆ ಮಾಡಿ, ಪುಷ್ಪ ವೃಷ್ಠಿ ಮಾಡಿ, ನಮಿಸುವ ಮೂಲಕ ಗುರುವಂದನೆ ಸಲ್ಲಿಸಿದರು.
ಕಾನಿಪ ಕಾರ್ಯದರ್ಶಿ ಮೀರಾ ತಟಗಾರ, ಪತ್ರಕರ್ತರಾದ ಮಹೇಶ ಮಣ್ಣಯ್ಯನವರಮಠ,ಹನಮಂತ ನಾವ್ಹಿ ಮತ್ತು ಶಿಕ್ಷಕ ವೃಂದ, ವಿದ್ಯಾರ್ಥಿಗಳಿದ್ದರು
ಕು.ಮಹಾಲಕ್ಷ್ಮೀ ಗುಳದಳ್ಳಿ ಮತ್ತು ಸಂಗಡಿಗರು ಪ್ರಾರ್ಥಿಸಿ, ಮುಖ್ಯೋಪಾಧ್ಯಾಯ ಎಸ್.ಜಿ.ಕೌಜಲಗಿ ಸಾಗತಿಸಿ, ಪತ್ರಕರ್ತ ನಾರನಗೌಡ ಉತ್ತಂಗಿ ನಿರೂಪಿಸಿ, ಶಿಕ್ಷಕಿ ಶಮಾ ಗಲಗಲಿ ವಂದಿಸಿದರು