ಈರುಳ್ಳಿ ಬೆಲೆ ವಾರದಲ್ಲಿ ಶೇಕಡ 40 ರಷ್ಟು ಕುಸಿತ
ಮುಂಬೈ ಜನವರಿ, 29, ದೇಶಾದ್ಯಂತ ಸಗಟು ಮಾರುಕಟ್ಟೆಗೆ ಹೆಚ್ಚಿನ ಅವಕ ಆಗಮನದ ಕಾರಣ ಈರುಳ್ಳಿ ಧಾರಣೆ ಸತತ ಐದನೇ ದಿನವೂ ಕುಸಿದಿದ್ದು, ಒಂದೇ ವಾರದಲ್ಲಿ ಶೇ 40 ರಷ್ಟು ಬೆಲೆ ಕುಸಿತ ದಾಖಲಿಸಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಲಾಸಲ್ಗಾಂವ್ ಸಗಟು ಮಂಡಿಯಲ್ಲಿ ಮಂಗಳವಾರ ಈರುಳ್ಳಿ ಕೆ.ಜಿ.ಗೆ 24 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ನಾಸಿಕ್ ಮೂಲದ ರಾಷ್ಟ್ರೀಯ ತೋಟಗಾರಿಕಾ ಸಂಶೋಧನಾ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಮೂಲಗಳು ತಿಳಿಸಿವೆ.
ವರ್ಷದ ಕೊನೆಯಲ್ಲಿ ಈರುಳ್ಳಿ ಬೆಲೆ ವಿಪರೀತ ಹೆಚ್ಚಳವಾಗಿ ಜನರು ಕೊಳ್ಳುವುದಿರಲಿ, ಹೆಸರು ಕೇಳಿದರೆ ಕಣ್ಣೀರು ಹಾಕುತ್ತಿದ್ದರು. ಕೆಲವು ಕಡೆ ಕೆಜಿ ಈರುಳ್ಳಿ 200ರೂಪಾಯಿ ಗಡಿ ದಾಟಿತ್ತು. ಈಗ ದೇಶಾದ್ಯಂತ ಚಿಲ್ಲರೆ ಮಾರುಕಟ್ಟೆಗಳಲ್ಲಿ ಒಂದು ಈರುಳ್ಳಿ 40 ರಿಂದ 44 ರೂಪಾಯಿಗೆ ಮಾರಾಟವಾಗುತ್ತಿದೆ.
ಕಳೆದ ಕೆಲವು ದಿನಗಳಲ್ಲಿ ರೈತರು ಮಾರುಕಟ್ಟೆಗೆ ಹೆಚ್ಚಿನ ಮಾಲು ತರುವುದನ್ನು ತೀವ್ರಗೊಳಿಸಿದ್ದರಿಂದ ಬೆಲೆ ಕುಸಿತ ಕಂಡಿದೆ . ಮುಖ್ಯವಾಗಿ, ಕರ್ನಾಟಕ, ಗುಜರಾತ್ ಮತ್ತು ಮಧ್ಯಪ್ರದೇಶದ ಸ್ಥಳೀಯ ರೈತರು ಪೂರೈಕೆ ಹೆಚ್ಚಿಸಿದ್ದು, ಲಸಲ್ಗಾಂವ್ ಮಾರುಕಟ್ಟೆಯ ಮೇಲಿನ ಬೇಡಿಕೆ, ಹಾಗೂ ಒತ್ತಡ ಕಡಿಮೆ ಮಾಡಿದ್ದಾರೆ. ಇದಲ್ಲದೆ ಈರುಳ್ಳಿ ರಫ್ತು ಮೇಲಿನ ಸರ್ಕಾರದ ನಿಷೇಧವು ಬೆಲೆ ಇಳಿಯಲು ಮತ್ತೊಂದು ಕಾರಣವಾಗಿದೆ ಎಂದೂ ಏಷ್ಯಾದ ಅತಿದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನರೇಂದ್ರ ವಾಧವನೆ ಹೇಳಿದ್ದಾರೆ
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 