ಬಳ್ಳಾರಿ

ಒಂದು ಯೂನಿಟ್ ರಕ್ತದಾನದಿಂದ ಅನೇಕ ಜೀವಗಳಿಗೆ ನೆರವು: ಹನುಮಂತಪ್ಪ

ಒಂದು ಯೂನಿಟ್ ರಕ್ತದಾನದಿಂದ ಅನೇಕ ಜೀವಗಳಿಗೆ ನೆರವು: ಹನುಮಂತಪ್ಪ

ಬಳ್ಳಾರಿ 17:  ನಗರದ 22ನೆ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಕೆ, ಹನುಮಂತಪ್ಪ ಅವರ 52 ನೇ ವರ್ಷದ ಹುಟ್ಟುಹಬ್ಬವನ್ನು ಮೋಕಾ ರಸ್ತೆಯ ಗಾಂಧಿನಗರದಲ್ಲಿ ಆಚರಿಸಲಾಯಿತು.  

ಹುಟ್ಟುಹಬ್ಬದ ನಿಮಿತ್ಯವಾಗಿ ನಗರದಲ್ಲಿರುವ ಅನಾಥಾಶ್ರಮ ಮತ್ತು ವೃದ್ಧಾಶ್ರಮಗಳಿಗೆ ಉಪಹಾರದ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಣೆ ಮಾಡಿದರು. ನಂತರ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ರಕ್ತ ಬಂಡಾರ ನಿಧಿಯ ಎ ಮಂಜುನಾಥ ಇವರ ಸಂಯುಕ್ತ ಆಶ್ರಯದಲ್ಲಿ ಅಭಿಮಾನಿಗಳು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರಿ​‍್ಡಸಲಾಗಿತ್ತು. ಈ ಸಂದರ್ಭದಲ್ಲಿ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ಬಂದು ರಕ್ತದಾನವನ್ನು ಮಾಡಿದರು.  

ಕೆ ಹನುಮಂತಪ್ಪ ರವರು ಮಾತನಾಡುತ್ತಾ ತನ್ನ ಹುಟ್ಟು ಹಬ್ಬದ ನಿಮಿತ್ಯವಾಗಿ ರಕ್ತದಾನ ಮಾಡಿದ ಅಭ್ಯರ್ಥಿಗಳಿಗೆ ಒಂದು ಯೂನಿಟ್ ರಕ್ತದಾನ ಮಾಡುವುದರಿಂದ ಅನೇಕ ಜೀವಗಳಿಗೆ ನೆರವು ಪಡೆಯಲು  ಅವಕಾಶವಾಗುತ್ತದೆ. ನಗರದ ಜನರು ನನ್ನ ಮೇಲೆ ನಂಬಿಕೆ ಇಟ್ಟು ಮಹಾನಗರ ಪಾಲಿಕೆ ಸದಸ್ಯರಾಗಿ ನೇಮಕ ಮಾಡಿದ್ದಾರೆ ಹಾಗೂ ಅವರು ಇಟ್ಟಿರುವಂತಹ ನಂಬಿಕೆಯಲ್ಲಿ  ನಾನು ಯಾವತ್ತಿಗೂ ಸಹ  ಚಿರಋಣಿಯಾಗಿರುತ್ತೇನೆ. ನನ್ನ ಜೀವನ ಪೂರ್ತಿಯಾಗಿ 22ನೇ ವಾರ್ಡಿನ ಜನರ ಅಧೀನದಲ್ಲಿ  ಸಾಮಾಜಿಕ ಸೇವೆ ಮಾಡುವುದೇ ನನ್ನ ಆದ್ಯ ಕರ್ತವ್ಯವಾಗಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ಜನರಿಗೆ ಸೇವೆ ಮಾಡುವಂತೆ ಇಲ್ಲಿ ಬಂದಿರುವಂತಹ ನನ್ನ ಹಿರಿಯರೆಲ್ಲರೂ  ಆಶೀರ್ವದಿಸಬೇಕೆಂದು ಮಾತನಾಡಿದರು.  

ನಗರದ ಮಾಜಿ ಶಾಸಕರಾದ ಜಿ ಸೋಮಶೇಖರ ರೆಡ್ಡಿಯವರು ಮಾತನಾಡುತ್ತಾ ಪ್ರತಿವರ್ಷದಂತೆ ಈ ವರ್ಷವೂ ಸಹ ಬಡಜನರ ಜೊತೆಯಲ್ಲಿ ಸೇರಿಕೊಂಡು ವಿಶೇಷ ಸೇವೆ ಮಾಡುತ್ತಾರೆ. 22ನೇ ವಾರ್ಡನ್ನು ಸುಂದರ -ಸ್ವಚ್ಛತೆ ಇರುವಂತೆ ಸಾಮಾಜಿಕ ಕಾರ್ಯ ಮಾಡಿದ್ದಾರೆ. ಹಾಗೂ ಅವರ ಸೇವೆ ನಗರದ ಜನತೆಗೆ ಮಹತ್ವವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ  ಅಧಿಕಾರಕ್ಕೆ ಬಂದರೆ ಕೆ ಹನುಮಂತಪ್ಪ ನವರಿಗೆ ಮಹಾನಗರ ಪಾಲಿಕೆಯಲ್ಲಿ   ಮಹಾಪೌರರ ಸ್ಥಾನಕ್ಕೆ ಮೊದಲನೆಯ ಆದ್ಯತೆ ನೀಡುತ್ತೇವೆ ಎಂದರು.  

ಶ್ರೀನಿವಾಸ್ ಮೋತಕರ್, ಹುಲುಗಪ್ಪ ಮಹಾನಂದಿ ಕೊಟ್ಟಂ, ಹನುಮಂತರೆಡ್ಡಿ ( ಪಾಲಕ್ ರೆಡ್ಡಿ )ಎಪಿಎಂಸಿ ಮಾಜಿ ಅಧ್ಯಕ್ಷರಾದ ಉಮೇಶ, ಮಹೇಶ, ಹೊತ್ತೂರು  ರಾಮಾಂಜನಿ, ಹಾಗೂ  ವಾರ್ಡಿನ   ಮುಖಂಡರು ಯುವಕರು ಅಭಿಮಾನಿಗಳು ಸ್ನೇಹಿತರು ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ