ದುಶ್ಚಟಗಳಿಂದ ದೂರ ಇರಬೇಕು: ಡಾ.ಕೆ.ಎಮ್.ಅವರಾದಿ
ಮಹಾಲಿಂಗಪುರ: ಡಾ.ಮಹಾಂತ ಶಿವಯೋಗಿಗಳು, ಚಿತ್ತರಗಿ ವಿಜಯ ಮಾಹಾಂತೇಶ್ವರ ಸಂಸ್ಥಾನಮಠ, ಇಲಕಲ ಇವರ ಜನ್ಮ ದಿನದ ನಿಮಿತ್ಯ ಸ್ಥಳೀಯ ಕೆ.ಎಲ್.ಇ ಕಾಲೇಜಿನಲ್ಲಿ ವ್ಯಸನಮುಕ್ತ ದಿನಾಚರಣೆಯನ್ನು ಸಮಾಜಶಾಸ್ತ್ರ ವಿಭಾಗ ಮತ್ತು ಎನ್ಎಸ್ಎಸ್ ಘಟಕ ವತಿಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದ ಮುಧೋಳನ ವಕೀಲಕು.ಅಶ್ವಿನಿ ಶಿದ್ನಾಳ ಅವರು ಎಲ್ಲರೂ ಮಾದಕ ವಸ್ತುಗಳ ಬಗ್ಗೆ ಸಮಾಜಿಕ ಅರಿವನ್ನು ಹೊಂದಿರಬೇಕು, ಇಂದಿನ ಯುವಕರು ಧೂಮಪಾನ ಮತ್ತು ಮದ್ಯಪಾನಗಳಿಂದ ದೂರವಿರಬೇಕೆಂದರೆ ಅವರು ಯಾವಗಲೂ ಕಾರ್ಯ ನಿರತರಾಗಿರಬೇಕು ಎಂದರು.
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಎಮ್.ಅವರಾದಿಯವರು ಸ್ವಾಮಿಜೀಯವರು ದುಶ್ಚಟಗಳಿಂದ ಜನರನ್ನು ಹೊರತರುವ ಸಲುವಾಗಿ ತಮ್ಮ ಜೀವನವನ್ನು ಮೂಡಪಾಗಿಟ್ಟಿದ್ದರು. ಇಂದಿನ ಪ್ರಜ್ಞಾವಂತ ಜನರು ವ್ಯಸನಮುಕ್ತರಾಗಿ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.
ಐಕ್ಯೂಎಸಿ ಸಂಯೋಜಕರಾದ ಡಾ.ಎಸ್.ಡಿ.ಸೊರಗಾಂವಿ, ಸಮಾಜ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಮಾರಿ. ಎಸ್.ಎಲ್.ಮೂಡಲಗಿ ಎನ್ಎಸ್ಎಸ್ ಸಂಯೋಜನ ಅಧಿಕಾರಿ ಶ್ರೀ ಎ.ಎಮ್.ಉಗಾರೆ, ಶ್ರೀ ಆರ್.ಎಸ್.ಪೂಜಾರಿ ವಿ.ಎ.ಅಡಹಳ್ಳಿ, ಕು.ಎಸ್.ಎಮ್.ಮರಬಾಗಿ, ಆರ್.ವಿ.ಚೌಗಲಾ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.