11ರಂದು 9ನೇ ವರ್ಷದ ಕೂರ್ಮ ಜಯಂತ್ಯೋತ್ಸವ
ಲೋಕದರ್ಶನ ವರದಿ
ಬಳ್ಳಾರಿ 01: ಕನರ್ೂಲು ಜಿಲ್ಲೆ ಆಸ್ಪರಿ ಮಂಡಲ ಹಲಿಗೆರೆ ಗ್ರಾಮದ ಹತ್ತಿರದ ಹರಿಕೂರ್ಮಗಿರಿ ಬೆಟ್ಟದಲ್ಲಿ ನೆಲೆಸಿರುವ ಸ್ವಯಂಭೂತ ಕೂರ್ಮಕ್ಷೇತ್ರದಲ್ಲಿ 9ನೇ ವರ್ಷದ ಕೂರ್ಮ ಜಯಂತ್ಯೋತ್ಸವವನ್ನು ಜೇಷ್ಠ ಶುದ್ಧ ದ್ವಾದಶಿ ದಿ. 11ರಂದು ಶನಿವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಕಾರ್ಯನಿವರ್ಾಹಕ ಎ.ಜಿ ನರೇಶ್ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಕಾರ್ಯಕ್ರಮದ ಕರಪತ್ರವನ್ನು ಕಲ್ಯಾಣಸ್ವಾಮಿಗಳು ಇಂದು ನಗರದ ಕಮ್ಮರಚೇಡು ಮಠದಲ್ಲಿ ಬಿಡುಗಡೆ ಮಾಡಿ ಭಕ್ತಾಧಿಗಳಿಗೆ ಶುಭಕೋರಿದರು.
ಪ್ರತಿವರ್ಷದಂತೆ ಈ ವರ್ಷವು ಕೂಡ ಸ್ವಾಮಿಗೆ ಕ್ಷೀರಾಭಿಷೇಕ, ಚಂದನಾಭಿಷೇಕ, ಜಲಾಭಿಷೇಕ ಸೇರಿದಂತೆ ವಿವಿಧ ಅಲಂಕಾರಗಳಿಂದ ಪೂಜೆಯನ್ನು ನೆರವೇಸಲಾಗುವುದು. ಮತ್ತು ಈ ಸಂದರ್ಭದಲ್ಲಿ ಲಕ್ಷ್ಮಿ ಅಷ್ಟೋತ್ತರ, ವಿಷ್ಣುನಾಮ ಸಹಸ್ರನಾಮ ಪಾರಾಯಣ, 27ನಕ್ಷತ್ರಗಳ ಪಯರ್ಾಯ ಮಾಲೆಯನ್ನು ನಿರ್ವಹಿಸಲಾಗುವುದು ಮತ್ತು ಅತಿ ಪ್ರಾಚೀನವಾದ ಅರಳಿಮರದ ವಿಶೇಷಪೂಜೆ, ಶಮೀವೃಕ್ಷ ಪೂಜೆ, ಅಮೃತ ಕಲಸಪೂಜೆ, ನಾಗದೇವತೆಗಳ ಹುತ್ತಕ್ಕೆ ಪೂಜೆ ಸೇರಿದಂತೆ ಹಲವಾರು ಪೂಜಾ ವಿಧಿವಿಧಾನಗಳನ್ನು ನಡೆಸಲಾಗುವುದು ಈ ಧಾಮರ್ಿಕ ಕಾರ್ಯಕ್ರಮದಲ್ಲಿ ಕೂರ್ಮಕ್ಷೇತ್ರದ ಭಕ್ತಾಧಿಗಳು ಆಗಮಿಸಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಎ.ಜಿ ನರೇಶ್ ಭಕ್ತರಲ್ಲಿ ವಿನಂತಿಸಿದ್ದಾರೆ