ಕುಡಿಯುವ ನೀರಿನ ಸಮಸ್ಯೆ ಕಣ್ತೆರೆಯದ ಅಧಿಕಾರಿಗಳು ತಪ್ಪದ ಗ್ರಾಮಸ್ಥರ ಪರದಾಟ
ಮುದ್ದೇಬಿಹಾಳ: ತಾಲೂಕಿನ ಮಡಿಕೇಶ್ವರ ಗ್ರಾಮದ ನಿವಾಸಿಗಳ ಕುಡಿಯುವ ನೀರಿಗೆ ಪ್ರತಿನಿತ್ಯ ಅಲೆದಾಡುವಂತಾಗಿರುವದು ಶುದ್ದ ಕುಡಿಯುವ ನೀರು ಲಬಿಸದೆ ಗ್ರಾಮದಲ್ಲಿ ವೃದ್ದರು, ಗರ್ಭಿಣಿಯರು, ಮಕ್ಕಳು ಕಾಯಿಲೆಯಿಂದ ಬಿಳುತಿದ್ದರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮಾತ್ರ ಕಿಂಚಿತ್ತು ಇತ್ತ ಗಮನಹರಿಸದಿರುವದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಗ್ರಾಮಸ್ಥರು ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರು ಎಚ್ಚೆತ್ತುಕ್ಕೋಳ್ಳದ ಅಧಿಕಾರಿಗಳು ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡುವ ಕೆಲಸಗಾರರು ಸರಿಯಾಗಿ ಲಭ್ಯವಾಗುತ್ತಿಲ್ಲ ಎನ್ನುವ ಕಾರಣ ನೀಡಿ ದುರಸ್ತಿ ಕಾರ್ಯವನ್ನು ಮುಂದುಡುತಿದ್ದಾರೆ.
ಶುದ್ದ ಕುಡಿಯುವ ನೀರಿನ ಘಟಕಗಳನ್ನು ಮೋದಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಗ್ರಾಮೀಣ ಮೂಲಸೌಕರ್ಯ ಅಭಿವೃದ್ದಿ ನಿಗಮ ಈ ಎರಡು ಇಲಾಖೆಗಳ ಮೇಲುಸ್ತುವಾರಿಯಲ್ಲಿ ನಡೆಯುತಿದ್ದವು ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ ಒಂದೆ ಇಲಾಖೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಶುದ್ದ ಕುಡಿಯುವ ನೀರಿನ ಘಟಕಗಳ ಉಸ್ತುವಾರಿಯನ್ನು ವಹಿಸಿದೆ. ಈ ಮೋದಲು ಶುದ್ದ ಕುಡಿಯುವ ನೀರಿನ ಘಟಕಗಳು ರಿಪೇರಿ ಬಂದರೆ ಕೆಲವು ದಿನಗಳಲ್ಲಿ ದುರಸ್ತಿ ಮಾಡುತಿದ್ದರು. ಈಗ ಒಂದೆ ಇಲಾಖೆಗೆ ಶುದ್ದ ಕುಡಿಯುವ ನೀರಿನ ಘಟಕಗಳ ಉಸ್ತವಾರಿ ವಹಿಸಿರುವದರಿಂದ ತಿಂಗಳುಗಳು ಕಳೆದರು ದುರಸ್ತಿ ಮಾಡಲು ಬರದಿರುವದು ಗ್ರಾಮೀಣ ಬಾಗದ ಜನರಿಗೆ ಶುದ್ದ ಕುಡಿಯುವ ನೀರು ಸಿಗದೆ ತೀವೃ ತೋಂದರೆಯಾಗುತ್ತಿದೆ.
ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಕಡಿಮೆ ಹಣದಲ್ಲಿ ಲಭ್ಯವರಲಿ ಎಂದು ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಎರಡರಲ್ಲಿಯು ಸ್ಥಾಪಿಸಿದೆ. ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಲಬಿಸಲು ಹಲವಾರು ಮೂಲಗಳಿದ್ದರು ಶುದ್ದ ಕುಡಿಯುವ ನೀರಿನ ಘಟಕಗಳು ಚಾಲ್ತಿಯಲ್ಲಿವೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ರಿಪೇರಿ ಬರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡದ ಅಧಿಕಾರಿಗಳು ನೀರ್ಲಕ್ಷವಹಿಸುತ್ತಿರುವದು ಗ್ರಾಮೀಣ ಬಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಮಡಿಕೇಶ್ವರ ಗ್ರಾಮದಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರು ಒಂದನ್ನು ದುರಸ್ತಿ ಮಾಡಲು ಅಧಿಕಾರಿಗಳ ಕಡೆಯಿಂದ ನಡೆಯದಿರುವದು ವಿಪರ್ಯಾಸದ ಸಂಗತಿಯಾಗಿದೆ. ಕೂಡಲೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯವರು ಮುದ್ದೇಬಿಹಾಳ ತಾಲೂಕಿನ ವಿವಿದೇಡೆ ದುರಸ್ತಿಗೆ ಬಂದಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ. ಈ ಕುರಿತು ಹಲವಾರು ಬಾರಿ ಅಧಿಕಾರಿಗಳಿಗೆ ಎಚ್ಚರಿಸಿದರು ಎಚ್ಚೆತ್ತುಕೋಳ್ಳದ ಅಧಿಕಾರಿಗಳು ಈಗಲಾದರು ಕಣ್ಣು ತೆರೆಯುತ್ತಾರೆಯೆ ಎಂದು ಕಾದುನೋಡಬೇಕಿದೆ.