ಮುದ್ದೆಬಿಹಾಲ್

ಜನ ಮೆಚ್ಚುಗೆ ಆಡಳಿತ ನೀಡಲು ಅಧಿಕಾರಿಗಳು ಸಹಕರಿಸಿ: ಶಾಸಕ ನಾಡಗೌಡ

ಜನ ಮೆಚ್ಚುಗೆ ಆಡಳಿತ ನೀಡಲು ಅಧಿಕಾರಿಗಳು ಸಹಕರಿಸಿ: ಶಾಸಕ ನಾಡಗೌಡ

ಮುದ್ದೇಬಿಹಾಳ 01: ಸಾರ್ವಜನಿಕರಿಗೆ ತೊಂದರೆಯಾಗದಂತೆ ಭ್ರಷ್ಟಾಚಾರ ಮುಕ್ತ ಹಾಗೂ ಸಮಗ್ರ ಮತಕ್ಷೇತ್ರದ ಜನ ಮೆಚ್ಚುವ ಹಾಗೆ ಆಡಳಿತ ನಡೆಸಬೇಕೆನ್ನುವುದು. ನನ್ನಾಸೆಯಾಗಿದೆ ಈ ನಿಟ್ಟಿನಲ್ಲಿ ಎಲ್ಲ ಸರಕಾರಿ ಅಧಿಕಾರಿಗಳು ಈ ಹಿಂದೆ ನಡೆಸಿದಂತೆ ಇನ್ನುಮುಂದೆ ನಡೆಸಲು ಬಿಡುವುದಿಲ್ಲ ಕಾರಣ ಉತ್ತಮ ಆಡಳಿತಕ್ಕೆ ನಮ್ಮೋಂದಿಗೆ ಸಹಕಾರ ನೀಡಿ ಎಂದು ಶಾಸಕ ಸಿ ಎಸ್ ನಾಡಗೌಡ(ಅಪ್ಪಾಜಿ) ಹೇಳಿದರು. 

ಪಟ್ಟಣದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಬುಧವಾರ ನಡೆದ ಸಿ ಎಸ್ ನಾಡಗೌಡ ಅವರು  ಶಾಸಕರಾಗಿ ಆಯ್ಕೆಯಾದ ಹಿನ್ನೇಲೆಯಲ್ಲಿ ತಾಳಿಕೋಟಿ ಹಾಗೂ ಮುದ್ದೇಬಿಹಾಳ ತಾಲೂಕಿನ ಎಲ್ಲ ಸರಕಾರಿ ಅಧಿಕಾರಿಗಳ ಪ್ರಥಮ ಪ್ರಗತಿ ಪರಿಶಿಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. 

ಸಧ್ಯ ಮತಕ್ಷೇತ್ರದಲ್ಲಿನ ತಾಳಿಕೋಟಿ ಹಾಗೂ ಮುದ್ದೇಬಿಹಾಳ ಪಟ್ಟಣದ, ನಾಲತವಾಡ, ಕಾಳಗಿ ಸೇರಿದಂತೆ ಇತರೇ ಸರಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯವರಿಗೆ ಹೆರಿಗೆಗಾಗಿ ಇತರೇ ರೋಗಿಗಳಿಗೆ ಸಮರ​‍್ಕ  ಚಿಕಿತ್ಸೆ ದೊರಕುತ್ತಿಲ್ಲ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮೀಕ ಆರೋಗ್ಯ ಕೇಂದ್ರಗಳಲ್ಲಿ ಕೆಲ ವೈದ್ಯರು ಹಾಗೂ ಸಿಬ್ಬಂದಿಗಳು ಸಮಯಕ್ಕೆ ತಕ್ಕಂತೆ ಆಸ್ಪತ್ರೆಗಳಿಗೆ ಬರುವುದಿಲ್ಲ ಇದರಿಂದ ಆಯಾ ಭಾಗದ ರೋಗಿಗಳಿಗೆ ತೊಂದರೆಯಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತವೆ ಇನ್ನುಮುಂದೆ ಹಾಗಾದಂತೆ ನೋಡಿಕೊಳ್ಳುವ ಮೂಲಕ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಿದ್ದಂತೆ ಪ್ರತಿಕ್ರಿಯಿಸಿ ತಾಲೂಕಾ ಆರೋಗ್ಯಾಧಿಕಾರಿ ಡಾ, ಸತೀಶ ತಿವಾರಿ ಅವರು ಮಾತನಾಡಿ ಈಗಾಗಲೇ ಜಿಲ್ಲೆಯ ಬಹುತೇಕ ಎಲ್ಲ ತಾಲೂಕುಗಳಲ್ಲಿ ಅಂಗನವಾಡಿ ಮಕ್ಕಳಿಗಾಗಿ ಪ್ರತ್ಯೇಕ ಎನ್ ಆರ್ ಸಿ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ ಆದರೇ ನಮ್ಮಲ್ಲಿ ಇಲ್ಲಿತನಕವೂ ಸ್ಥಾಪನೆ ಯಾಗಿಲ್ಲ. ಜೊತೆಗೆ ತುರ್ತು ನಿಗಾಘಟಕದ ಚಿಕಿತ್ಸೆ ನೀಡಲು ಆಂಬ್ಯುಲೇನ್ ಕೊರತೆ ಇದೇ,  ಯೋಗ್ಯ ತಜ್ಞ ವೈದ್ಯರ ಕೊರತೆ, ಬೆರೆಡೆಯಿಂದ ಬರುವ ವೈದ್ಯರಿಗೆ ವಸತಿ ಮಾಡಲು ಕ್ವಾಟರ​‍್ಸ‌ ಸಮಸ್ಯೆ ಸೇರಿದಂತೆ ಇತರೇ ಸಣ್ಣ ಪುಟ್ಟ ಸಮಸ್ಯೆಗಳಿವೇ ಎಂದು ತಿಳಿಸಿದರು. 

ಇದಕ್ಕೆ ಪ್ರತಿಯಾಗಿ ಶಾಸಕ ಸಿ ಎಸ್ ನಾಡಗೌಡ ಅವರು ಮಾತನಾಡಿ ಮತಕ್ಷೇತ್ರದ ಜನರ ಬಹಳ ಮುಖ್ಯವಾಗಿದೆ ಈ ಹಿನ್ನೇಲೆಯಲ್ಲಿ ಆಸ್ಪತ್ರೆಗೆಂದು ಬರುವ ರೋಗಿಗಳಿಗೆ ವೈದ್ಯರು ಸೇರಿದಂತೆ ಎಲ್ಲ ಸಿಬ್ಬಂದಿಗಳಿಗೆ ಯಾವೂದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಕಾರಣ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಸರಕಾರದಿಂದ ಸೌಲಭ್ಯ ಪಡೆದು ಮಾದರಿಯ ಆಸ್ಪತ್ರೆ ಮಾಡೋಣ ಎಂದರು. 

ಮತಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್ ರಾಜ್ ಇಲಾಖೆ, ಪುರಸಭೆ, ತಾಲೂಕು ಪಂಚಾಯಿತಿ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಫ್ತಿಯಲ್ಲಿ ಎಸ್ ಇ ಪಿ ಟಿ ಎಸ್ ಪಿ ಯೋಜನೆ ಅನುದಾನದ ಹಣ ಇಕ್ಕಾಪಟ್ಟೆ ದುರುಪಯೋಗಗೊಂಡಿದೆ ಎಂಬುದು ಕಂಡು ಬಂದಿದೆ ಈ ಹಿನ್ನೇಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕಳೇದ ಒಂದು ವರ್ಷದಿಂದ ಈ ಯೋಜನೆ ಮಾಹಿತಿ ನೀಡಿ ಎಂದು ಸಾಕಷ್ಟು ಬಾರಿ ಕೇಳಿದರು ನನಗೆ ಮಾಹಿತಿ ಕೊಟ್ಟಿಲ್ಲ  ಸಧ್ಯ ನಾನು ಚುನಾಯಿತನಾದ ಮೇಲೆ ಈಗ ಮಾಹಿತಿ ಕೊಡಲು ಮುಂದಾಗಿದ್ದಾರೆ ಎಂದರೆ ಈ ಹಿಂದಿನ ಆಢಳಿತದಲ್ಲಿ ಯಾವ ರೀತಿ ಅಧಿಕಾರಿಗಳು ಭಯದಲ್ಲಿ ಕೇಲಸ ಮಾಡಬೇಕಾಗಿತ್ತು ಎಂಬುದು ಇದೋಂದು ಉದಾಹರಣೆ ಸಾಕು. ಇರಲಿ ಸಧ್ಯ ಇನ್ನುಮುಂದೆ ಹಾಗೆ ಮಾಡದೇ ಪ್ರಾಮಾಣಿಕವಾಗಿ ಸರಕಾರಿ ಕೆಲಸ ಮಾಡಿ ಇಲ್ಲವೆಂದರೇ ಬೇರೆ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪಿಡ್ಬೂಡಿ ಸೇಕ್ಷೇನ್ ಅಧಿಕಾರಿ ಸಂದೀಪ ಕೂಡ್ಲೂರ ಅವರಿಗೆ ತರಾಟಗೆ ತೆಗೆದುಕೊಂಡರು, 

ಸಧ್ಯ ತಾಲೂಕಿನಲ್ಲಿನ ರೈತರ ಕೃಷಿ ಚಟುವಟಿಕೆ ಕೈಗೊಳ್ಳಲು ಏನೇಲ್ಲ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಹೊಂಡಗಳ ಸ್ಥತಿ ಏನಾಗಿದೇ. ಯಾವ ಭಾಗದಲ್ಲಿ ಯಾವ ರೈತ ಎಷ್ಟು ಯಾವ ಬೀಜ ಬಿತ್ತನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಂತೆ ತಾಲೂಕಾ ಕೃಷಿ ಅಧಿಕಾರಿ ಸುರೇಶ ಭಾವಿಕಟ್ಟಿ ಮಾತನಾಡಿ ಈಗಾಗಲೇ ಸರಕಾರದಿಂದ ಬಿತ್ತನೆಗಾಗಿ ಸಬ್ಸಿಡಿಯಲ್ಲಿ ರೈತರಿಗೆ ಕೊಡಮಾಡುವ ವಿವಿಧ ಯಂತ್ರೋಪಕರಣಗಳನ್ನು ಅರ್ಹ ರೈತರಿಗೆ ಒದಗಿಸಲಾಗಿದೆ ಜೊತೆಗೆ ರೈತರಿಂದ ತಾಡಪಾಲಗಳ ಬಹುಬೇಡಿಕೆ ಇದೇ ಅವುಗಳನ್ನು ಸರಕಾರದಿಂದ ಪೂರೈಸಿದರೇ ಸೂಕ್ತ ಎಂದು ತಿಳಿಸಿದರು.  

ಗ್ರಾಮೀಣ ಪ್ರದೇಶದ ಜನರಿಗೆ ಮನೆಮನೆಗೆ ನಲ್ಲಿ ಮೂಲಕ ನೀರು ಒದಗಿಸಬೇಕು ಎನ್ನುವ ಸರಕಾರದ ಮಹತ್ವಾಕಾಂಕ್ಷೇಯ ಯೋಜನೆಯಾಗಿದೆ ಆದರೇ ಸಧ್ಯ ಮತಕ್ಷೇತ್ರದಲ್ಲಿ ಕೈಗೊಂಡಿರುವ ಜೆಜೆಎಂ ಯೋಜನೆ ಗುತ್ತಿಗೆದಾರರು ಕಳಪೆಮಟ್ಟದಿಂದ ನಿರ್ಮಿಸಿದ್ದರಿಂದ ಈ ಯೋಜನೆ ಹಳ್ಳ ಹಿಡಿದು ಹೊಗಿದೆ. ಈ ನಿಟ್ಟಿನಲ್ಲಿ ಜೆಜೆಎಂಯೋಜನೆಯ ಕಾಮಗಾರಿಯ ಬಗ್ಗೆ ಸಮಗ್ರ ತನಿಖೆ ನಡೆಸಿ ಗುತ್ತಿಗೆ ಪಡೆದ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಜೊತೆಗೆ ನಮ್ಮ ಅವಧಿಯಲ್ಲಿ2013ರಿಂದ 18ವರ ಅವಧಿಯಲ್ಲಿ ಪ್ರತಿಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಬಹುಹಳ್ಳಿ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೇ ಕಳೇದ ಐದು ವರ್ಷಗಳಲ್ಲಿ ಈ ಯೋಜನೆಗಳ ಶುದ್ಧ ನೀರಿನ ಘಟಕಗಳು ಕೆಟ್ಟಿ ನಿಂತಿವೆಯಾದರೂ ಒಬ್ಬ ಅಧಿಕಾರಿಯೂ ಅವುಗಳನ್ನು ದುರಸ್ಥಿಗೊಳಿಸಿ ಜನರಿಗೆ ಕುಡಿಯುವ ನೀರಿನ ಅನುಕೂಲ ಮಾಡಬೇಕೆನ್ನುವ ಮನಸ್ಸು ಕೂಡ ಮಾಡಲಿಲ್ಲ ಸಧ್ಯ ಅವುಗಳ ದುರಸ್ಥಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿ ಎಸ್ ನಾಡಗೌಡ ಅವರು ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಪ್ರಭಾರಿ ಎಇಇ ಆರ್ ಎಸ್ ಹಿರೇಗೌಡರವರಿಗೆ ಸೂಚಿಸಿದರು. 

ಇತ್ತಿಚಿಗೆ ಕೆಲವರು ಸರಕಾರದ ದುಡ್ಡು ಬಳಸಿಕೊಂಡು ನಾನು ಸಾಮೂಹಿಕ ವಿವಾಹ ಮಾಡುತ್ತೇನೆ ಎಂದು ಹೇಳಿಕೊಂಡಿರುವ ಸೇವಕರ ಸಂಖ್ಯೆ ಹೆಚ್ಚಾಗಿದೆ ಕಾರಣ ಸರಳ ಸಾಮೂಹಿಕ ವಿವಾಹದಡಿ ಯೋಜನೆಯಲ್ಲಿ ಅನುದಾನಲ್ಲಿ ನೇರವು ಪಡೆದುಕೊಂಡಿರುವ ಮಾಹಿತಿ ತಿಳಿದು ಬಂದಿದೆ ಅವುಗಳನ್ನು ಸೂಕ್ತ ಪರಿಶಿಲನೆ ನಡೆಸಿ ಇನ್ನುಮುಂದೆ ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ತಹಶಿಲ್ದಾರ ಟಿ ರೇಖಾ ಅವರಿಗೇ ಸಿ ಎಸ್ ನಾಡಗೌಡ ಅವರು ಸೂಚಿಸಿದರು.ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಮೀನುಗಾರಿಕೆ, ಸೇರಿದಂತೆ ಇತರೇ ಸರಕಾರಿ ಇಲಾಖೆಗಳ ಅಧಿಕಾರಿಗಳ ಪ್ರಗತಿ ಪರಿಶಿಲನೆ ನಡೆಸಿ ಮಾಹಿತಿ ಪಡೆದುಕೊಳ್ಳಲಾಯಿತು. 

ಈ ವೇಳೆ ತಾಲೂಕು ಪಂಚಾಯತ್ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ವಿ ಎಸ್ ಹಿರೇಮಠ, ತಾಳಿಕೋಟಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ, ತಾಳಿಕೋಟಿ ತಹಶಿಲ್ದಾರ ಕೀರ್ತಿ ಚಾಲಕ, ನಿಡಗುಂದಿ ತಹಶಿಲ್ದಾರ ಕಿರಣಕುಮಾರ ಕುಲಕರ್ಣಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಆಲಮಟ್ಟಿ ಕೃಷ್ಣಾ ಜಲಭಾಗ್ಯದ ಎ ಎಲ್ ಬಿ ಸಿ ವಿಭಾಗದ ಇಇ ರಾಮನಗೌಡ ಹಳ್ಳೂರ, ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ