ಸವದತ್ತಿಯಲ್ಲಿ ಅಧಿಕಾರಿಗಳ ದಾಳಿ : ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳು, ಟಿಫಿನ್ ಬಾಕ್ಸ್ ಗಳ ವಶಕ್ಕೆ

ಸವದತ್ತಿಯಲ್ಲಿ ಅಧಿಕಾರಿಗಳ ದಾಳಿ : ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 42.92 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳು, ಟಿಫಿನ್ ಬಾಕ್ಸ್ ಗಳ ವಶಕ್ಕೆ

ಬೆಳಗಾವಿ : ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಹೊಲಿಗೆ ಯಂತ್ರ ಮತ್ತು ಟಿಪಿನ್ ಬಾಕ್ಸ್ ಗಳ ಗೋದಾಮಿನ ಮೇಲೆ ದಾಳಿ ನಡೆಸಿರುವ ಚುನಾವಣಾ ಅಧಿಕಾರಿಗಳು ಸುಮಾರು 42.92 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಸವದತ್ತಿ ಯಲ್ಲಿ ನಡೆದಿದೆ. 


  ಸವದತ್ತಿ ಅಭ್ಯರ್ಥಿ ಸೌರವ ಚೋಪ್ರಾ ಅವರಿಗೆ ಸೇರಿದ ಈ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಮತದಾರರಿಗೆ ಹಂಚಲು ಸಂಗ್ರಹಿಸಿದ ಕುರಿತು ಖಚಿತ ಮಾಹಿತಿ ಪಡೆದ ಸವದತ್ತಿ ಉಪವಿಭಾಗಾಧಿಕಾರಿ (ಎಸಿ) ಅವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.


   ಈ ದಾಳಿಯಲ್ಲಿ 23,84,272 ರೂ ಮೌಲ್ಯದ 1012 ಹೊಲಿಗೆ ಯಂತ್ರಗಳು ಹಾಗೂ 4,56,000 ಮೌಲ್ಯದ 1200 ಹೊಲಿಗೆ ಯಂತ್ರಗಳ ಕೋಷ್ಟಕಗಳು  ಮತ್ತು ಹೊಲಿಗೆ ಯಂತ್ರ ಕಬ್ಬಿಣದ ಸ್ಟ್ಯಾಂಡ್ 1060 ಮೌಲ್ಯ 11,27,840 ಮತ್ತು 2160 ಟಿಫಿನ್ ಬಾಕ್ಸ್ ಗಳು 3,24,000 ಹೀಗೆ ಒಟ್ಟು 42,92,112 ಮೌಲ್ಯದ ಸಾಮಗ್ರಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ತಿಳಿಸಿದ್ದಾರೆ.

 

ಸುದ್ದಿ ಓದಿ