ಶಿಗ್ಗಾವ್

ಬಾಣಂತಿ ಜೀವ ಅಪಾಯದಿಂದ ಕಾಪಾಡಿದ ಅಧಿಕಾರಿಗಳು

ಬಾಣಂತಿ ಜೀವ ಅಪಾಯದಿಂದ ಕಾಪಾಡಿದ ಅಧಿಕಾರಿಗಳು

ಶಿಗ್ಗಾವಿ 24 :  ತಾಲೂಕಿನ  ಯತ್ತಿನಹಳ್ಳಿ  ಗ್ರಾಮದ  ಗುರಪ್ಪ ಶಿವಪ್ಪ  ಅದರಗುಂಚಿ  ವಾಸ ಇರುವ ಮನೆಯಲ್ಲಿ  ಧಾರಾಕಾರ ಮಳೆಯಿಂದ ಸಂಪೂರ್ಣ  ನೀರು ನುಗ್ಗಿ  ಮನೇ ಗೋಡೆ  ಬಿದ್ದು  ಜೀವ ಹಾನಿ ಆಗುವ ಲಕ್ಷಣ ಕಂಡು ತಕ್ಷಣ ಯೇಚ್ಛೆತುಕೊಂಡ  ಸ್ಥಳಿಯ ಗ್ರಾಮ ಲೆಕ್ಕ ಅಧಿಕಾರಿ ಮೇಘಾ ಹಾಗೂ ಅಂಗನವಾಡಿ ಶಿಶು ಅಭಿವೃದ್ದಿ ಯೋಜನಾ ಅಧಿಕಾರಿ ಗಣೇಶ ನಿಂಗನಗೌಡ ಸ್ಥಳಕ್ಕೆ ಧಾವಿಸಿ  ಬಡಕುಟುಂಬಕ್ಕೆ ಎತ್ತಿನಹಳ್ಳಿ  ಅಂಗನವಾಡಿ ಕೇಂದ್ರಕ್ಕೆ ಶಿಫ್ಟ್‌ ಮಾಡಿ 7 ಜನರ ಪ್ರಾಣ ರಕ್ಷಿಸಿ ಇತರ ಅಧಿಕಾರಿಗಳಿಗೆ ಮಾದರಿ ಹಾಗೂ ಮಾನವೀಯತೆಯನ್ನು ಮರೆದಿದ್ದಾರೆ. 

2021-2022ನೇ ಸಾಲಿನಲ್ಲಿ ನೇರೆ ಹಾವಳಿಯಿಂದ 5.ಲಕ್ಷ ರೂ ಮನೇ ಇಂಜಿನಿಯರ 100 ಕ್ಕೆ 100 ಅಹಾಕಿದರು ಸಹ ಕೊನೆಗಳಿಗೆ  ಕೈ ತಪ್ಪಿ ಹೋಗಿದ್ದು ಯಾಕೇ ಎಂದು ಮನೆಯ ಯಜಮಾನ ಗುರಪ್ಪ ಶಿವಪ್ಪ ಗುಂಚಿತಮ್ಮ ಅಳಲು ತೋಡಿಕೊಂಡರು. ಈಗಾದರೂ ಸಂಬಂದ ಪಟ್ಟ ಅಧಿಕಾಕಾರಿಗಳು  ಬಡಕುಟುಂಬಕ್ಕೆ ಸರ್ಕಾರದಿಂದ  ಪರಿಹಾರ ಒದಗಿಸಿ ಕೊಡಬೇಕೆಂದು ಗ್ರಾಮ ಪಂಚಾಯತ ಸದಸ್ಯರಾದ ಭಾಗ್ಯಶ್ರೀ ಅರುಣ ಇಂದೂರ ಹಾಗೂ ನಾಗರಾಜ  ಸುರಗೊಂಡ  ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ