ಮಹಲಿಂಗಪುರ

ನೇಕಾರ ಮನೆಗೆ ಅಧಿಕಾರಿ ಸಿದ್ದು ಕುಂಬಾರ ಭೇಟಿ ನೀಡಿ ಪರಿಶೀಲನೆ

ನೇಕಾರ ಮನೆಗೆ ಅಧಿಕಾರಿ ಸಿದ್ದು ಕುಂಬಾರ ಭೇಟಿ ನೀಡಿ ಪರಿಶೀಲನೆ

ಮಹಾಲಿಂಗಪುರ : ಇತ್ತಿಚೆಗೆ ಗುರುವಾರ ರಾತ್ರಿ ಬಿರುಗಾಳಿ ಮಳೆಗೆ ಪಟ್ಟಣದ ಕೆಂಗೇರಿಮಡ್ಡಿ ಬಡಾವಣೆಯ ನೇಕಾರ ಓರ್ವನ ಮನೆ ಛತ್ ಹಾರಿ ಹಾನಿ ಉಂಟಾಗಿರುವುದನ್ನು ಬಾಗಲಕೋಟ ಜಿಲ್ಲಾ ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರಿ ಸಿದ್ದು ಕುಂಬಾರ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಮಂಗಳವಾರ ಭೇಟಿ ನೀಡಿ ಮಾತನಾಡಿದ ಅವರು, ನೂಲಿನ ಬೀಮಗಳು, ತಯಾರಿ ಸೀರೆಗಳು, ಇನ್ನಿತರ ಕಚ್ಛಾ ನೇಕಾರಿಕೆ ಸಾಮಗ್ರಿಗಳು ಅಲ್ಲದೆ ಸಂಪೂರ್ಣ ಶೆಡ್ಡ್ ಕೂಡ ಮಳೆ ಗಾಳಿಯಿಂದ ಹಾಳಾಗಿದ್ದು ಇವುಗಳ ನಷ್ಟವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಲು ವರದಿ ನೀಡುತ್ತೇನೆ ಎಂದರು. 

ಪುರಸಭೆಯ ಮಾಜಿ ಅಧ್ಯಕ್ಷ ಜಿ ಎಸ್ ಗೊಂಬಿ ಮಾತನಾಡಿ , ಪತ್ರಾಸ್ ಶೆಡ್ಡ್ ಹೊಂದಿದ್ದ ಮನೆಯಲ್ಲಿ ರಾಜು ಕುಕ್ಕುಗೋಳ ನಾಲ್ಕು ಪಾವರಲೂಮ್ ಮಗ್ಗಗಳನ್ನು ಹಾಕಿ ಪರಿವಾರ ಸಮೇತನಾಗಿ ದುಡಿಮೆ ಮಾಡುತ್ತ ಬದುಕು ಸಾಗಿಸಿದ್ದ. ಎಲ್ಲರಿಗೂ ಗೊತ್ತಿರುವಂತೆ ನೇಕಾರ ಕುಟುಂಬದ ಸದಸ್ಯರೆಲ್ಲ ತೊಡಗಿ ಕೆಲಸ ಮಾಡಿದಾಗಲೂ ಕೂಡ ಅಸಮರ್ಪಕ ಸಂಬಳಕ್ಕೆ ಮಾತ್ರ ಸೀಮಿತ. ಈ ಸಂಬಳದಿಂದ ನೇಕಾರನ ಬದುಕು ' ಆರಕ್ಕೇರದ ಮೂರಕ್ಕಿಳಿಯದ ' ಎಂಬ ಗಾದೆ ಮಾತಿನಂತೆ ಜೀವನ ಸಾಗಿ ಬರುತ್ತಿದೆ.ಇಂತಹದರಲ್ಲಿ ನೈಸಗರ್ಿಕ ವಿಕೋಪಗಳಿಗೆ ತುತ್ತಾದರೆ ಜೀವನ ಸಾಗಿಸುವುದೇ ದುರ್ಭರವಾಗುತ್ತದೆ. ಈಗ ಎಲ್ಲವೂ ಒಂದು ಕನಸ್ಸಿನಂತೆ ನಡೆದು ಹೋಗಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಸಂತ್ರಸ್ತ ನೇಕಾರನಿಗೆ ಪರಿಹಾರ ಒದಗಿಸಿ ಕೊಡಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಿದರು. 

ಅಧಿಕಾರಿಗಳ ಭೇಟಿ ಸಂದರ್ಭದಲ್ಲಿ, ಶಶಿಕಾಂತ ಜಗದಾಳ, ರಾಜೇಂದ್ರ ಮಿಜರ್ಿ ಮತ್ತು  ಸಂತ್ರಸ್ತ ನೇಕಾರ ರಾಜು ಕುಕ್ಕುಗೋಳ ದಂಪತಿಗಳು ಮತ್ತು ಪರಿವಾರ ಉಪಸ್ಥಿತರಿದ್ದರು 

ಸುದ್ದಿ ಓದಿ