ಮುಖ್ಯಮಂತ್ರಿಗಳು ಆಗಮಿಸುವವರೆಗೂ ಬಾಗೀನ ಅರ್ಪಿಸುವಂತಿಲ್ಲವೆಂದು ತಡೆ
ಬಳ್ಳಾರಿ 27: ದಿ. 26ರಂದು ಕರ್ನಾಟಕ ರಾಜ್ಯ ರೈತ ಸಂಘ ಹೊಸಪೇಟೆ ವತಿಯಿಂದ ತುಂಗಭದ್ರ ನದಿಗೆ ಬಾಗೀನ ಅರ್ಿಸಲು ಹೋದಾಗ ಪೋಲಿಸ್ ರಕ್ಷಣಾ ಇಲಾಖೆಯವರು ಸಂಘಟನೆಯ ಪದಾಧಿಕಾರಿಗಳನ್ನು ತಡೆದು ಟಿಬಿಡ್ಯಾಂಗೆ ಸಿದ್ದರಾಮಯ್ಯ ರವರು ಮುಖ್ಯಮಂತ್ರಿಗಳು ಆಗಮಿಸುವವರೆಗೂ ಯಾವುದೇ ರೀತಿಯ ಬಾಗೀನ ಅರ್ಿಸುವಂತಿಲ್ಲ ಎಂದು ಮಾನ್ಯ ಜಿಲ್ಲಾಧಿಕಾರಿಗಳು, ವಿಜಯನಗರ ಜಿಲ್ಲೆ ಇವರು ಆದೇಶಿಸಿದ್ದಾರೆ ಎಂದು ಪೋಲಿಸರು ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದಿಂದ ಆ ಕ್ಷಣದಲ್ಲಿಯೇ ಸ್ಥಳದಲ್ಲಿಯೇ ಹೋರಾಟಕ್ಕೆ ನಿಂತೆವು. ಇದರಿಂದ ಡಿ.ವೈ.ಎಸ್.ಪಿ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ವಾದ ವಿವಾದ ಮಾಡಿ, ಬಾಗೀನ ಅರ್ಿಸಲು ಬಂದ ರೈತರನ್ನು ಬಂದಿಸಿದರು. ಈ ವಿಷಯವನ್ನು ರಾಜ್ಯ ಸಮೀತಿಗೆ ಮಾಹಿತಿ ತಿಳಿಸಿ ಮೇಲಾಧಿಕಾರಿಗಳಿಂದ ಆದೇಶ ಹೊರಡಿಸಿಕೊಂಡು ಪೋಲಿಸ್ ಸಿಬ್ಬಂದಿಯವರಿಂದಲೇ ಬಲದಂಡೆಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಅವಕಾಶ ನೀಡಲಾಯಿತು. ಎಡದಂಡೆಗೆ ಕರ್ನಾಟಕ ರಾಜ್ಯ ರೈತ ಸಂಘದವರು ಮತ್ತು ರೈತರು ಬಾಗೀನ ಅರ್ಿಸಿ ತುಂಗಭದ್ರ ತಾಯಿಗೆ ಪೂಜೆಯನ್ನು ಸಲ್ಲಿಸಲಾಯಿತು.
ರಾಜ್ಯ ಕಾರ್ಯದರ್ಶಿಗಳಾದ ಗೋಣಿಬಸಪ್ಪ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ಎಂ.ಎಲ್.ಕೆ.ನಾಯ್ಡು, ವಿಜಯನಗರ ಜಿಲ್ಲಾಧ್ಯಕ್ಷ ಸಿದ್ದನಗೌಡ, ತಾಲೂಕು ಅಧ್ಯಕ್ಷ ಗಂಟೆ ಸೋಮಶೇಖರ, ದಮ್ಮೂರು ಮಹೇಶ್, ತಂಬ್ರಹಳ್ಳಿ ರವಿ, ಪ್ರಕಾಶ್, ವಿರುಪಾಕ್ಷಗೌಡ ಬನ್ನಟ್ಟಿ, ಸುಭಾನಿ, ಬಸವನಗೌಡ ಇನ್ನಿತರರು ಇದ್ದರು.