ಹಗರಿಬೊಮ್ಮನಹಳ್ಳಿ

ದಿ. 30ರಂದು ಒಪಿಎಸ್ ಸಂಕಲ್ಪ ಯಾತ್ರೆಯ ಪಾದಯಾತ್ರೆ

ದಿ. 30ರಂದು ಒಪಿಎಸ್ ಸಂಕಲ್ಪ ಯಾತ್ರೆಯ ಪಾದಯಾತ್ರೆ

ಹಗರಿಬೊಮ್ಮನಹಳ್ಳಿ 29: ಎನ್‌ಪಿಎಸ್ ಯೋಜನೆ ರದ್ದುಪಡಿಸಿ, ನಿಶ್ಚಿತ ಪಿಂಚಣಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ತಾಲೂಕು ಘಟಕವು ದಿ. 30ರಂದು ಒಪಿಎಸ್ ಸಂಕಲ್ಪ ಯಾತ್ರೆಯ ಪಾದಯಾತ್ರೆ ನಡೆಯಲಿದೆ ಎಂದು ಸಂಘದ ರಾಜ್ಯ ಪರಿಷತ್ ಸದಸ್ಯ ಇಟ್ಟಿಗಿ ಮಂಜುನಾಥ ಹಾಗೂ ತಾಲೂಕು ಘಟಕದ ಅಧ್ಯಕ್ಷ ಎಸ್‌.ಆಂಜನೇಯ ತಿಳಿಸಿದರು. 

ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಅವರು ಮಾತನಾಡಿ ಕಳೆದ 2006 ಏಪ್ರಿಲ್ 01ರಿಂದ ಜಾರಿಗೆ ತಂದಿರುವ ನೂತನ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಿ 2006ರಿಂದ ಹಿಂದೆ ಇದ್ದಂತೆ ನಿಶ್ಚಿತ ಪಿಂಚಣಿ ಯೋಜನೆಯನ್ನು ಎಲ್ಲಾ ನೌಕರರಿಗೆ ಸ್ವಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ, ಅನುದಾನಿತ ಸಂಸ್ಥೆಗಳ ನೌಕರರಿಗೆ ಜಾರಿಗೆ ತರುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ “ಮಾಡು ಇಲ್ಲವೇ ಮಡಿ” ಅನಿರ್ಧಿಷ್ಟಾವಧಿ ಹೋರಾಟವನ್ನು ಡಿಸೆಂಬರ್ 19ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದು, ಇದರ ಅಂಗವಾಗಿ ಹಗರಿಬೊಮ್ಮನಹಳ್ಳಿಯಲ್ಲಿ ಅಕ್ಟೋಬರ್ 30ರಂದು ಒಪಿಎಸ್ ಸಂಕಲ್ಪ ಯಾತ್ರೆಯ ಜೊತೆಗೆ ವಿಜಯನಗರ ಜಿಲ್ಲೆಯ ಸಮಸ್ತ ಎನ್‌.ಪಿ.ಎಸ್ ನೌಕರರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.  

ಪಾದ ಯಾತ್ರೆಯಲ್ಲಿ ರಾಜ್ಯಾಧ್ಯಕ್ಷರಾದ ಶಾಂತರಾಮ್ ತೇಜ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ನಾಗನಗೌಡ್ರು, ಹಿರಿಯ ಉಪಾಧ್ಯಕ್ಷರಾದ ಸಿದ್ದಪ್ಪ ಸಂಗಣ್ಬನವರು, ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ಸದರಿ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್ ಹಂಪಸಾಗರ, ಸಂಘಟನಾ ಕಾರ್ಯದರ್ಶಿ ಶ್ರೀನಾಥ ಆಚಾರ್, ಜಿಲ್ಲಾ ಮಾಧ್ಯಮ ಸಂಚಾಲಕರು ಹರೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಕೆ.ಯಂಕಾರೆಡ್ಡಿ, ತಾಲೂಕು ಖಜಾಂಚಿ ಟಿ.ಸೋಮಶೇಖರ್, ತಾಲೂಕು ಸಂಚಾಲಕರು ಮಹಾಂತೇಶ್ ನಾಯ್ಕ, ತಾಲೂಕು ಸಹ ಕಾರ್ಯದರ್ಶಿ ಕೆ.ಗುರುಬಸವರಾಜ, ಪದಾಧಿಕಾರಿಗಳಾದ ಮಂಜನಗೌಡ ಎಸ್, ಟಿ.ನಾಗರಾಜ, ಇಟ್ಟಿಗಿ ಪ್ರಭಾಕರ, ಹೀರಾ​‍್ಯನಾಯ್ಕ, ಕೆ.ಬಿ.ದೀಪಿಕಾ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ