ಶಿಗ್ಗಾವ್

ಭೂಮಿ ಕ್ಲಿನಿಕ್ ಹಾಗೂ ಸನ್ಮತಿ ಕ್ಲಿನಿಕ್‌ಗೆ ನೋಟಿಸ ಜಾರಿ

ಭೂಮಿ ಕ್ಲಿನಿಕ್ ಹಾಗೂ ಸನ್ಮತಿ ಕ್ಲಿನಿಕ್‌ಗೆ ನೋಟಿಸ ಜಾರಿ

ಶಿಗ್ಗಾವಿ 06:  ತಾಲೂಕ ಆರೋಗ್ಯಾಧಿಕಾರಿ ಡಾ.ಸತೀಶ .ಎ.ಆರ್ ನೇತೃತ್ವದ ತಂಡವು ತಾಲೂಕಿನ ತಡಸ ಗ್ರಾಮದಲ್ಲಿರುವ ಭೂಮಿ ಕ್ಲಿನಿಕ್ ಹಾಗೂ ಸನ್ಮತಿ ಕ್ಲಿನಿಕ್ ಭೇಟಿ ನೀಡಿ ಕೆಪಿಎಂಇ ಕಾಯ್ದೆ ಅಡಿಯಲ್ಲಿ ನೊಂದಣಿ ಇಲ್ಲದೆ ವೈದ್ಯ ವೃತ್ತಿ ನಡೆಸುತ್ತಿರುವುದು ಕಂಡು ಬಂದಿದ್ದು ಸದರಿ ಕ್ಲಿನಿಕ್‌ನ್ನು ಬಂದ್ ಮಾಡಿ ನೋಟಿಸ ಜಾರಿ ಮಾಡಿ ಕೆಪಿಎಂಇ ಕಾಯ್ದೆ ಅಡಿ ನೋಂದಣಿಯನ್ನು ಪಡೆದುಕೊಂಡು ವೈದ್ಯ ವೃತ್ತಿ ನಡೆಸಲು ಸೂಚಿಸಿದರು. 

ಈ ಸಂದರ್ಭದಲ್ಲಿ ಡಾ.ಆರ್‌.ಆರ್‌.ಪಾಟೀಲ, ಅಶೋಕ ಅಮಾತೆಣ್ಣವರ, ಹೆಚ್‌. ಕರಿಬಸವೇಶ್ವರಸ್ವಾಮಿ, ಶಿವಕುಮಾರ ಜುಮ್ಮಣ್ಣನವರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. 


ಸುದ್ದಿ ಓದಿ