ಶಿಗ್ಗಾವ್

ಬಿದ್ದ ಮನೆಗೆ ಪರಿಹಾರ ಅಷ್ಟೇ ಅಲ್ಲ ಪುನರ್ವಸತಿ ಕಲ್ಪಿಸಿ: ಮ್ಯಾಗೇರಿ

ಬಿದ್ದ ಮನೆಗೆ ಪರಿಹಾರ ಅಷ್ಟೇ ಅಲ್ಲ ಪುನರ್ವಸತಿ ಕಲ್ಪಿಸಿ: ಮ್ಯಾಗೇರಿ

ಶಿಗ್ಗಾವಿ,21 : ಬಿದ್ದ ಮನೆಗಳಿಗೆ ಕಾಟಾಚಾರಕ್ಕೆ ಪರಿಹಾರ ಕೊಟ್ಟ ಹಾಗೆ ಮಾಡಿ ಕೈ ಚೆಲ್ಲಿ ಕುಳಿತುಕೊಳ್ಳುವುದಲ್ಲ ಅವರಿಗೆ ಸೂಕ್ತವಾದ 5 ಲಕ್ಷದ ಮನೆ ಕಟ್ಟಿ ಕೊಡಬೇಕು ಎಂದು ಶಿಗ್ಗಾವಿ ತಾಲೂಕ ಬಿಜೆಪಿ ಅಧ್ಯಕ್ಷ ಶಿವಾನಂದ ಮ್ಯಾಗೇರಿಸರಕಾರಕ್ಕೆ ಅಗ್ರಹಪಡಿಸಿದ್ದಾರೆ.   

ಪಟ್ಟಣದ ವರದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದ ಅನೇಕ ಮನೆಗಳು ಬಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಇನ್ನೂ ಮನೆಗಳು ಬೀಳುವ ಹಂತದಲ್ಲಿವೆ. ಬೀಳುವ ಸ್ಥಿತಿಯಲ್ಲಿರುವ ಮನೆಗಳನ್ನು ಇಂಜಿನಿಯರ್ ಮುಖಾಂತರ ಸಮೀಕ್ಷೆ ಮಾಡಬೇಕು ಅಂತಹ ಮನೆಯಲ್ಲಿ ವಾಸಿಸುವವರನ್ನು ಕೂಡಲೇ ಸ್ಥಳಾಂತರಿಸಬೇಕು ಅಲಕ್ಷಿಸಿದರೆ ಸವಣೂರು ತಾಲೂಕ ಮಾದಾಪುರ ಗ್ರಾಮದಲ್ಲಿ ಮನೆ ಖುಷಿದು ಬಿದ್ದು ಮಕ್ಕಳು ಸೇರಿ ಮೂರು ಜನ ಸಾವೀಗೀಡಾದ ಘಟನೆ ಮರುಕಳಿಸಬಾರದು ಕೂಡಲೇ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಪಿಡಿಒಗಳು ಜಂಟಿಯಾಗಿ ತಕ್ಷಣ ಸಮೀಕ್ಷೆ ಮಾಡಿ ಸ್ಥಳದಲ್ಲಿಯೇ ಎನ್ ಡಿ ಆರ್ ಎಫ್ ಮುಖಾಂತರ ಪರಿಹಾರ ಒದಗಿಸಬೇಕು ಮತ್ತು ಅವರ ಸುರಕ್ಷತೆಯ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿಕೊಡಬೇಕು ಮತ್ತು ಅವರಿಗೆ ಸರಕಾರದಿಂದ 5 ಲಕ್ಷದ ಮನೆ ಕಟ್ಟಿಕೊಳ್ಳಲು ಆದೇಶ ನೀಡಬೇಕು ಎಂದರು ಕೂಡಲೇ ಸ್ಪಂದಿಸದಿದ್ದರೆ ತಾಲೂಕ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು. 


ಸುದ್ದಿ ಓದಿ